ಮುಂಬೈ, ಡಿ.28- ಮೈದಾನದಲ್ಲಿರುವ ಅಂಪೈರ್ ನೀಡಿದ ತೀರ್ಪು ಕುರಿತು ಪ್ರಶ್ನಿಸಲು ಡಿಆರ್‍ಎಸ್ ಮೊರೆ ಹೋಗಲಾಗುತ್ತದೆ, ಇತ್ತೀಚೆಗೆ ಈ ಮಾದರಿಯಲ್ಲೂ ಲೋಪಗಳು ಕಂಡು ಬರುತ್ತಿರುವುದರಿಂದ ಆ ವ್ಯವಸ್ಥೆಯನ್ನು ಮರು ಪರಿಷ್ಕರಿಸುವ ಅವಶ್ಯಕತೆ ಇದೆ ಎಂದು ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಐಸಿಸಿ ಮೊರೆ ಹೋಗಿದ್ದಾರೆ.
ತಪ್ಪು ಮಾಡುವುದು ಮನುಜನ ಸಹಜ ಗುಣ ಆದ್ದರಿಂದ ಯಂತ್ರಗಳ ಮೊರೆ ಹೋಗುವುದು ಸಹಜ, ಅದೇ ರೀತಿ ಕ್ರಿಕೆಟ್‍ನಲ್ಲೂ ಕೆಲವು ಅಂಪೈರ್‍ಗಳು ನೀಡುವ ತೀರ್ಪುಗಳು ವಿವಾದಾಸ್ಪದವಾಗಿದ್ದು ಅವುಗಳನ್ನು ಮರು ಪರಿಶೀಲಿಸಲೆಂದೇ ಡಿಸಿಶನ್ ರಿವ್ಯೂ ಸಿಸ್ಟಮ್(ಡಿಆರ್‍ಎಸ್) ನಿಯಮವನ್ನು ತರಲಾಯಿತು, ಆದರೆ ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ ಪಂದ್ಯಗಳಲ್ಲಿ ಡಿಆರ್‍ಎಸ್‍ನಲ್ಲೂ ಲೋಪ ಕಂಡು ಬಂದಿದೆ.ಆಸೀಸ್ ವಿರುದ್ಧ ನಡೆಯುತ್ತಿರುವ 2ನೆ ಟೆಸ್ಟ್ ಪಂದ್ಯದ ವೇಳೆ ಆಸ್ಟ್ರೇಲಿಯಾ ನಾಯಕ ಟೀಮ್ ಪೇನ್‍ರನ್ನು ಭಾರತೀಯ ವಿಕೆಟ್ ಕೀಪರ್ ರಿಷಭ್ ಪಂತ್ ಸ್ಟಂಪ್ ಮಾಡಿದ ವೇಳೆ ಪೇನ್ ಔಟಾಗಿದ್ದರೂ ಆದರೆ ಮೈದಾನದ ಅಂಪೈರ್ ಅದನ್ನು ನಾಟೌಟ್ ಎಂದು ಘೋಷಿಸಿದ್ದರು, ನಂತರ ಡಿಆರ್‍ಎಸ್ ಮೊರೆ ಹೋದಾಗಲೂ ಪೇನ್ ಅಜೇಯರಾಗಿಯೇ ಉಳಿದಿದ್ದರೂ ಇಂತಹ ಕಠಿಣ ಸಂದರ್ಭಗಳನ್ನು ನಿಭಾಯಿಸಲೆಂದೇ ಡಿಆರ್‍ಎಸ್ ನಿಯಮಕ್ಕೆ ಬದಲಾವಣೆ ತರಬೇಕೆಂದು ಸಚಿನ್ ಐಸಿಸಿಗೆ
ಟ್ವಿಟ್ ಮೂಲಕ ಮನವಿ ಮಾಡಿ ದ್ದಾರೆ.
Laxmi News 24×7