Breaking News

ಕೊರೊನಾದಿಂದ ಬಳಲುತ್ತಿದ್ದ ಮಾಜಿ ಕ್ರಿಕೆಟಿಗ ವಿಜಯ್ ಶಿರ್ಕೆ ಅವರ ನಿಧನ

Spread the love

ಮುಂಬೈ, ಡಿ.21- ಕೊರೊನಾದಿಂದ ಬಳಲುತ್ತಿದ್ದ ಮಾಜಿ ಕ್ರಿಕೆಟಿಗ ವಿಜಯ್ ಶಿರ್ಕೆ ಅವರು ಚಿಕಿತ್ಸೆ ಫಲಿಸದೆ ಥಾಣೆ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಶಾಲಾ ಜೀವನದಲ್ಲೇ ಕ್ರಿಕೆಟ್‍ನತ್ತ ಒಲವು ತೋರಿದ್ದ ವಿಜಯ್ ಶಿರ್ಕೆ ಅವರು ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡೂಲ್ಕರ್‍ಗೆ ಆಪ್ತ ಗೆಳೆಯರಾಗಿದ್ದರಲ್ಲದೆ ಸಚಿನ್ ಹಾಗೂ ವಿನೋದ್ ಕಾಂಬ್ಳೆ ಅವರೊಂದಿಗೆ ಹಲವು ಪಂದ್ಯಗಳಲ್ಲಿ ಇನ್ನಿಂಗ್ಸ್ ಕಟ್ಟಿದ್ದರು.

ಮುಂಬೈನ ಕಲ್ಯಾಣ್ ಪ್ರಾಂತ್ಯದಲ್ಲಿ ಜನಿಸಿದ ವಿಜಯ್ ಶಿರ್ಕೆ ಅವರು ಮುಂಬೈ ಕ್ರಿಕೆಟ್ ಅಸೋಸಿಯೇಷನ್‍ನ ತರಬೇತುದಾರರಾಗಿಯೂ ಕಾರ್ಯನಿರ್ವಹಿಸುವ ಮೂಲಕ ಹಲವರು ಕ್ರಿಕೆಟ್ ಪ್ರತಿಭೆಗಳನ್ನು ಕ್ರೀಡಾ ಲೋಕಕ್ಕೆ ಪರಿಚಯಿಸಿದ್ದರು.ಮಾಜಿ ಕ್ರಿಕೆಟಿಗರಾದ ಸಚಿನ್‍ತೆಂಡೂಲ್ಕರ್, ವಿನೋದ್‍ಕಾಂಬ್ಳಿ, ಸಲೀಲ್ ಅಂಕೋಲಾ, ಮುಂಬೈ ಕ್ರಿಕೆಟ್ ಮಂಡಳಿ ಸೇರಿದಂತೆ ಹಲವರು ವಿಜಯ್ ಶಿರ್ಕೆ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.


Spread the love

About Laxminews 24x7

Check Also

ಮೆಟ್ರೋ ದರ ನಿಗದಿ ಸಮಿತಿ ಸಲ್ಲಿಸಿದ ವರದಿ ಬಹಿರಂಗಪಡಿಸಲು ಅರ್ಜಿ; ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

Spread the loveಬೆಂಗಳೂರು: ಬೆಂಗಳೂರು ಮೆಟ್ರೋ ರೈಲಿನ ಟಿಕೆಟ್ ದರ ಹೆಚ್ಚಳ ಸಂಬಂಧ ನಿವೃತ್ತ ನ್ಯಾಯಮೂರ್ತಿ ತರಿಣಿ ನೇತೃತ್ವದ ದರ ನಿಗದಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ