Breaking News

ಭಾರತದಲ್ಲಿ ಪೊಲೀಯೋ ಮಾದರಿಯಲ್ಲಿ ಕೊರೊನಾ ಲಸಿಕಾ ವಿತರಣೆಗೆ ಸಿದ್ಧತೆ

Spread the love

ನವದೆಹಲಿ, ಡಿ.18- ಕೊರೊನಾ ನಿರ್ಮೂಲನೆಗೆ ಪಲ್ಸ್ ಪೊಲೀಯೋ ಮಾದರಿಯಲ್ಲಿ ಲಸಿಕಾ ಆಂದೋಲನ ನಡೆಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದ್ದು, ಜನವರಿ ವೇಳೆಗೆ ಸಾರ್ವಜನಿಕರಿಗೆ ಲಸಿಕೆ ಲಭ್ಯವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ದನ್ ಹೇಳಿದ್ದಾರೆ. ಖಾಸಗಿ ಸುದ್ದಿ ಸಂಸ್ಥೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಲಸಿಕೆ ಆಂದೋಲನದ ಬಗ್ಗೆ ಸಮಗ್ರ ಮಾಹಿತಿ ಹಂಚಿಕೊಂಡಿದ್ದಾರೆ.

ನಮ್ಮ ದೇಶಕ್ಕೆ ಲಸಿಕಾ ಆಂದೋಲನದ ವಿಷಯವಾಗಿ ಸಾಕಷ್ಟು ಅನುಭವ ಇದೆ. 25 ವರ್ಷಗಳ ಹಿಂದೆ ಭಾರತದಲ್ಲಿ ಶೇ.60ರಷ್ಟು ಮಂದಿಗೆ ಪೊಲೀಯೋ ತಗುಲಿತ್ತು. ಕೇಂದ್ರ ಸರ್ಕಾರ ಲಸಿಕಾ ಆಂದೋಲನಾ ಆರಂಭಿಸಿತ್ತು. ಐದು ವರ್ಷದೊಳಗಿನ ಮಕ್ಕಳಿಗೆ ಒಂದೇ ದಿನ ಲಸಿಕೆ ನೀಡುವ ಆಂದೋಲನ ಯಶಸ್ವಿಯಾಗಿ ನಡೆದಿದೆ. ಇದಕ್ಕೆ ದೇಶದ ಜನರು ಕೂಡ ಉತ್ತಮ ಸಹಕಾರ ನೀಡಿದ್ದಾರೆ.

ಮೊದಲ ಹಂತದಲ್ಲಿ ದೆಹಲಿಯಲ್ಲಿ ಪ್ರಥಮ ಭಾರಿಗೆ ನಡೆದ ಆಂದೋಲನ ನಂತರ ದೇಶದ ಇತರ ಭಾಗಗಳಿಗೂ ವಿಸ್ತರಣೆ ಮಾಡಲಾಯಿತು. ನಮ್ಮ ಮಾದರಿಯನ್ನು ಏಷ್ಯ ಖಂಡದ ಇತರ ದೇಶಗಳು ಅನುಸರಿಸಲಾರಂಭಿಸಿದವು. ಹಲವು ದಶಕಗಳ ಲಸಿಕಾ ಆಂದೋಲನದ ಪರಿಣಾಮ 2014ರ ವೇಳೆಗೆ ಭಾರತ ಪೊಲೀಯೋ ಮುಕ್ತ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಮಾಡಿದೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ 12 ಲಸಿಕೆಗಳನ್ನು ಹಾಕಲಾಗುತ್ತಿದೆ. ನಮಗೆ ಲಸಿಕೆ ವಿತರಣೆ ಮತ್ತು ಸಾಗಾಣಿಕೆಯ ಸಾಮಥ್ರ್ಯ ಇಲ್ಲ ಎಂಬುದು ಸುಳ್ಳು. ಲಸಿಕಾ ಆಂದೋಲನ ನಡೆಸಲು ನಾವು ಪೂರ್ಣ ಪ್ರಮಾಣದ ಸಾಮಥ್ರ್ಯ ಹೊಂದಿದ್ದೇವೆ ಎಂದು ಸಮರ್ಥಿಸಿಕೊಂಡಿದ್ದಾರೆ. ಕೊರೊನಾ ಲಸಿಕೆ ಹಾಕಲು ಕೇಂದ್ರ ಸರ್ಕಾರ ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಂಡಿದೆ.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ