ಕರೋನಾ ವೈರಸ್‌ನ ಕರಾಳರೂಪವನ್ನು ನೋಡುತ್ತಿರುವ ಇಟಲಿಯಲ್ಲಿ ಸಾವಿರಾರು ಮಂದಿಗೆ ಈ ವೈರಾಣುಗಳು ಅಂಟಿದ್ದು, ವೈದ್ಯರ ಗಂಭೀರ ಕೊರತೆ ಎದ್ದು ಕಾಣುತ್ತಿದೆ.
ಇದರೊಂದಿಗೆ ವೈದ್ಯಕೀಯ ಗ್ಲೌಸ್‌ಗಳು, ಮಾಸ್ಕ್‌ಗಳ ಪೂರೈಕೆಗೂ ತತ್ವಾರವೆದ್ದಿದ್ದು, ಕರೋನಾ ಪೀಡಿತ ರೋಗಿಗಳ ಶುಶ್ರೂಷೆ ಮಾಡುತ್ತಾ ತಮ್ಮ ಹಗಲು/ರಾತ್ರಿಗಳನ್ನು ಕಳೆಯುತ್ತಿರುವ ವೈದ್ಯರು ಹಾಗೂ ನರ್ಸ್‌ಗಳಿಗೆ ದೊಡ್ಡ ತಲೆನೋವಾಗಿದೆ.
ಅತ್ಯಂತ ಕೆಟ್ಟ ಪರಿಸ್ಥಿತಿ ಎದುರಿಸುತ್ತಿರುವ ಮಿಲನ್‌ನ ಉಪನಗರ ಕೊಡೋಗ್ನೋದಲ್ಲಿ ಕೆಲಸ ಮಾಡುತ್ತಿರುವ ಮಾರ್ಸೆಲ್ಲೋ ನಟಾಲಿ ಎಂಬ ವೈದ್ಯರೊಬ್ಬರಿಗೆ ಇದರ ಬಿಸಿ ತಟ್ಟಿದೆ.
ಅವರ ಆಸ್ಪತ್ರೆಯಲ್ಲಿ ಗ್ಲೌಸ್‌ಗಳ ಸಪ್ಲೈ ಇಲ್ಲದೇ ಇದ್ದ ಕಾರಣ, ಬರಿಗೈಯಲ್ಲೇ ರೋಗಿಗಳ ತಪಾಸಣೆ ಮಾಡಿದ ಅವರು, ಕರೋನಾ ವೈರಾಣುಗಳು ತಗುಲಿ, ದುರಂತಮಯ ಸಾವು ಕಂಡಿದ್ದಾರೆ.