Breaking News
Home / ರಾಜಕೀಯ / ಯಡಿಯೂರಪ್ಪ ಮತ್ತು ದೆಹಲಿ ನಾಯಕರ ನಡುವಿನ ಸಂಬಂಧ ಅಷ್ಟೇಕಷ್ಟೇ……..?

ಯಡಿಯೂರಪ್ಪ ಮತ್ತು ದೆಹಲಿ ನಾಯಕರ ನಡುವಿನ ಸಂಬಂಧ ಅಷ್ಟೇಕಷ್ಟೇ……..?

Spread the love

ಬೆಂಗಳೂರು,ನ.19- ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಕೇಂದ್ರ ಬಿಜೆಪಿ ವರಿಷ್ಠರ ನಡುವೆ ಸಂಬಂಧ ಹಳಸಿದೆಯೇ? ಇತ್ತೀಚಿಗೆ ಪಕ್ಷ ಮತ್ತು ಸರ್ಕಾರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ದೆಹಲಿ ನಾಯಕರು ಮತ್ತು ಬಿಎಸ್‍ವೈ ಅವರ ನಡುವಿನ ಸಂಬಂಧ ಹಾವು-ಮುಂಗೂಸಿ ಎಂಬಂತಿದೆ.

ಇದಕ್ಕೆ ಪುಷ್ಠಿ ನೀಡುವಂತೆ ನಿನ್ನೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ ಅವರನ್ನು ಕೇವಲ 15 ನಿಮಿಷದಲ್ಲಿ ಭೇಟಿಯಾಗಿ ಹಿಂತಿರುಗಿರುವುದು. ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಲು ಬಿಎಸ್‍ವೈ ಉತ್ಸುಕತೆ ತೋರಿದರಾದರೂ ವರಿಷ್ಠರು ಇದಕ್ಕೆ ಅವಕಾಶ ಕೊಡದೇ ಇರುವುದು ಯಡಿಯೂರಪ್ಪ ಮತ್ತು ದೆಹಲಿ ನಾಯಕರ ನಡುವಿನ ಸಂಬಂಧ ಅಷ್ಟೇಕಷ್ಟೇ ಎಂಬಂತಾಗಿದೆ.

ಮೂಲಗಳ ಪ್ರಕಾರ ದೆಹಲಿಗೆ ತೆರಳುವ ಮುನ್ನ ಯಡಿಯೂರಪ್ಪ ಅವರು ಅಮಿತ್ ಷಾ ಅವರನ್ನು ಭೇಟಿಯಾಗಿ ಸಂಪುಟ ವಿಸ್ತರಣೆ ಹಾಗೂ ಪುನಾರಚನೆ ಸಂಬಂಧ ಮಾತುಕತೆ ನಡೆಸಲು ತೀರ್ಮಾನಿಸಿದ್ದರು. ಯಾವಾಗ ಬುಧವಾರ ಬಿಎಸ್‍ವೈ ಅವರು ದೆಹಲಿಗೆ ಬರುವುದು ಖಚಿತವಾಯಿತೋ ಉದ್ದೇಶಪೂರ್ವಕವಾಗಿ ಅಮಿತ್ ಷಾ ಬಿಎಸ್‍ವೈ ಅವರಿಂದ ಅಂತರ ಕಾಯ್ದುಕೊಂಡರು ಎಂದು ತಿಳಿದುಬಂದಿದೆ.

ಪ್ರತಿ ಹಂತದಲ್ಲೂ ದೆಹಲಿ ನಾಯಕರು ಬಿಎಸ್‍ವೈ ಅವರಿಂದ ಅಂತರ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾ ಪತನಗೊಂಡು ಬಿಜೆಪಿ ಅಧಿಕಾರಕ್ಕೆ ಬಂದ ನಂತರವೂ ಯಡಿಯೂರಪ್ಪ ಅವರಿಗೆ ಸಿಎಂ ಆಗಿ ಅಧಿಕಾರ ಸ್ವೀಕರಿಸಲು ಅನುಮತಿ ಕೊಟ್ಟಿರಲಿಲ್ಲ. ಉದ್ದೇಶ ಪೂರ್ವಕವಾಗಿಯೇ ವಿಳಂಬ ಮಾಡಿದ್ದರು. ನಂತರ ಬಿಎಸ್‍ವೈ ಅವರು ಸಿಎಂ ಆದ ಬಳಿಕ ಸಂಪುಟ ವಿಸ್ತರಣೆಗೂ ಅವಕಾಶ ನೀಡಲು ಮೀನಾಮೇಷ ಎಣಿಸಿದ್ದರು. ಸಿಎಂ ಆದ ಒಂದು ತಿಂಗಳ ಆದ ಬಳಿಕ ಅವಕಾಶ ಕೊಡಲಾಗಿತ್ತು.


Spread the love

About Laxminews 24x7

Check Also

ಪಾನಿಪುರಿ ಮಾರುವ ಜ್ಯೂನೀಯರ್ ಮೋದಿ; ಮೋದಿ ತರಾನೇ..ಆದ್ರೆ ಅಲ್ಲ!

Spread the loveನವದೆಹಲಿ: ಗುಜರಾತ್‌ನ ಪಾನಿ ಪುರಿ ಮಾರಾಟಗಾರ ಅನಿಲ್ ಭಾಯಿ ಠಕ್ಕರ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹೋಲುವ ಹಾಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ