ನವದೆಹಲಿ: ಕೊರೊನಾ ಸೋಂಕು ತಗುಲಿದ ಬಳಿಕ ಕೇಂದ್ರ ಸಚಿವೆ ಸ್ಮೃತಿ ಇರಾನಿ ಇನ್‍ಸ್ಟಾಗ್ರಾಂನಲ್ಲಿ ಫನ್ನಿ ಮೀಮ್ ಹಂಚಿಕೊಂಡಿದ್ದು, ವೈರಲ್ ಆಗಿದೆ. ಕೊರೊನಾ ಸೋಂಕು ತಗುಲಿರುವ ಮಾಹಿತಿಯನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಸ್ಮೃತಿ ಇರಾನಿ, ತಮ್ಮ ಸಂಪರ್ಕದಲ್ಲಿದ್ದವರು ದಯವಿಟ್ಟು ಕೊರೊನಾ ಪರೀಕ್ಷೆಗೆ ಒಳಗಾಗಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಸ್ಮೃತಿ ಇರಾನಿ ಟ್ವೀಟ್: ಈ ವಿಷಯವನ್ನ ಘೋಷಣೆ ಮಾಡುವಾಗ ಪದಗಳ ಹುಡುಕೋದು ನನಗೆ ಸಾಧ್ಯವಾಗಲಿಲ್ಲ. ಹಾಗಾಗಿ ಸರಳವಾಗಿ ಈ ವಿಷಯ ನಿಮಗೆ ತಿಳಿಸುತ್ತಿದ್ದೇನೆ. ನನ್ನ ಕೋವಿಡ್-19 ವರದಿ ಪಾಸಿಟಿವ್ ಬಂದಿದೆ. ನನ್ನ ಸಂಪರ್ಕದಲ್ಲಿದ್ದವರು ತಡಮಾಡದೇ ಕೋವಿಡ್ ಪರೀಕ್ಷೆಗೆ ಒಳಗಾಗಿ ಎಂದು ನಿಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ ಎಂದು ಟ್ವೀಟ್ ಮಾಡಿದ್ದರು. ಟ್ವೀಟ್ ಬಳಿಕ ಇನ್‍ಸ್ಟಾಗ್ರಾಂನಲ್ಲಿ ಫನ್ನಿ ಮೀಮ್ ಇರೋ ಫೋಟೋ ಹಂಚಿಕೊಂಡು ನಾನು ಕೊರೊನಾ ಗೆದ್ದು ಬರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಫನ್ನಿ ಮೀಮ್: ನನ್ನ ಶರೀರವು ಅನಾರೋಗ್ಯಕ್ಕೆ ಒಳಗಾಗಲು ನಿರ್ಧರಿಸಿದಾಗ ನನಗೆ ತುಂಬಾ ದುಃಖವಾಗುತ್ತೆ. ಕಳೆದ ವಾರವೇ ನಿನಗೆ ತರಕಾರಿ ತಿನ್ನಿಸಿದ್ದೇನೆ. ಅನಾರೋಗ್ಯ ಆಗಲು ನಿನಗೆ ಎಷ್ಟು ಧೈರ್ಯ? ಎಂಬ ಸಾಲುಗಳುಳ್ಳ ಫೋಟೋ ಹಂಚಿಕೊಂಡಿದ್ದಾರೆ. ಕೆಳಗೆ ತರಕಾರಿ ಸೇವಿಸಿದ್ರೂ ಹೀಗೆ ಆಗಿದೆ. ಕೊರೊನಾ ಸೋಂಕು ತಗುಲಿದೆ, ಗೆದ್ದು ಬರುತ್ತೇನೆ ಎಂದು ತಿಳಿಸಿದ್ದಾರೆ.
Laxmi News 24×7