Breaking News

ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಮತ ಹಾಕುವಂತೆ ಮತದಾರರಿಗೆ ಎಲ್​ಇಡಿ ಟಿ.ವಿಗಳನ್ನ ಹಂಚಲಾಗ್ತಿದೆ ಎಂಬ ಆರೋಪ ಕೇಳಿಬಂದಿದೆ.!

Spread the love

ಬೆಂಗಳೂರು:  ರಾಜರಾಜೇಶ್ವರಿ ನಗರದ ಉಪ ಚುನಾವಣಾ ಕಣ ರಂಗೇರುತ್ತಿದ್ದು, ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಮತ ಹಾಕುವಂತೆ ಮತದಾರರಿಗೆ ಎಲ್​ಇಡಿ ಟಿ.ವಿಗಳನ್ನ ಹಂಚಲಾಗ್ತಿದೆ ಎಂಬ ಆರೋಪ ಕೇಳಿಬಂದಿದೆ.

ಮುನಿರತ್ನ ಅವರ ಬೆಂಬಲಿಗ, ಮಾಜಿ ಬಿಬಿಎಂಪಿ ಸದಸ್ಯ ಜಿ.ಕೆ ವೆಂಕಟೇಶ್ ವಾರ್ಡ್ ನಂಬರ್ 37ರ ವಿ.ಆರ್. ಗಾರ್ಡನ್​​ನ ಖಾಸಿಂ ಸಾಬ್ ಎನ್ನುವವರಿಗೆ, ಎಲ್.ಜಿ. ಕಂಪನಿಯ ಎಲ್‌ಇಡಿ ಟಿವಿ ಕೊಟ್ಟಿದ್ದಾರೆ. ಟಿ.ವಿ. ಮೇಲೆ ಮುನಿರತ್ನ ಫೋಟೋ ಅಂಟಿಸಲಾಗಿದೆ.

ರಾಜರಾಜೇಶ್ವರಿ ‌ನಗರ ಕ್ಷೇತ್ರದ ಮತದಾರರಿಗೆ ಎಲ್.ಇ.ಡಿ. ಟಿವಿ ನೀಡಿ ಮುನಿರತ್ನ ಪರ ಮತ ಹಾಕುವಂತೆ ಆಮಿಷ ಒಡ್ಡಲಾಗುತ್ತಿದೆ ಎಂದು ದೂರಲಾಗಿದೆ. ಹೀಗಾಗಿ ವೆಂಕಟೇಶ್​ ಹಾಗೂ ಮುನಿರತ್ನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾಧಿಕಾರಿಗಳಿಗೆ ಕಾಂಗ್ರೆಸ್ ಮುಖಂಡರು ದೂರು ನೀಡಿದ್ದಾರೆ.


Spread the love

About Laxminews 24x7

Check Also

ಸಂಧ್ಯಾ ಸುರಕ್ಷಾ ಯೋಜನೆಯಿಂದ ಹಿರಿಯ ನಾಗರಿಕರಿಗೆ ಅನುಕೂಲಗಳು ಏನೇನು?

Spread the love ಬೆಂಗಳೂರು: ವಯಸ್ಸಾದ ವೃದ್ಧರಿಗೆ ಮಕ್ಕಳೇ ಆಸರೆ. ಆದರೂ, ಹಿರಿಯ ಜೀವಗಳಿಗೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಪ್ರತಿಯೊಂದಕ್ಕೂ ಮಕ್ಕಳನ್ನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ