Breaking News

ಅಪ್ರಾಪ್ತೆಯ ಮಾನಭಂಗಕ್ಕೆ ಯತ್ನಿಸಿದ್ದ ವ್ಯಕ್ತಿ ಮತ್ತು ಇದನ್ನು ಪ್ರಶ್ನಿಸಲು ಹೋದಾಗ ಹಲ್ಲೆ ನಡೆಸಿದ ಮಹಿಳೆಯ

Spread the love

ಪಿರಿಯಾಪಟ್ಟಣ : ಅಪ್ರಾಪ್ತೆಯ ಮಾನಭಂಗಕ್ಕೆ ಯತ್ನಿಸಿದ್ದ ವ್ಯಕ್ತಿ ಮತ್ತು ಇದನ್ನು ಪ್ರಶ್ನಿಸಲು ಹೋದಾಗ ಹಲ್ಲೆ ನಡೆಸಿದ ಮಹಿಳೆಯ ವಿರುದ್ಧ ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಟ್ಟಣದ ಬೆಟ್ಟದಪುರ ರಸ್ತೆಯ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಕಟ್ಟಡದ ಹಿಂಭಾಗದ ರಮೇಶ್‌ ಎಂಬ ವ್ಯಕ್ತಿಗೆ ಸೇರಿದ ಜಾಗದಲ್ಲಿ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಮೂಲದ ಲಂಬಾಣಿ ಜನಾಂಗದ ಅಲೆಮಾರಿಗಳು ವಾಸವಾಗಿದ್ದು, ಈ ಗುಂಪಿನಲ್ಲಿ 13 ವರ್ಷದ ಬಾಲಕಿ ತನ್ನ ತಂದೆ, ತಾಯಿಯೊಂದಿಗೆ ಕೂಲಿ ಕೆಲಸ ಮತ್ತು ಭಿಕ್ಷೆ ಬೇಡಿಕೊಂಡಿದ್ದಳು.

ಶೋಕಿಗಾಗಿ ದುಬಾರಿ ಬೈಕ್‌ ಕದಿಯುತ್ತಿದ್ದ ಪೋರರು..! …

ಅ. 6ರಂದು ರಾತ್ರಿ 10ಕ್ಕೆ ಸಮಯದಲ್ಲಿ ಶೆಡ್‌ನಿಂದ ಬಹಿರ್ದೆಸೆಗಾಗಿ ಹೊರ ಬಂದ ಸಮಯದಲ್ಲಿ ಅಲ್ಲೇ ಮರೆಯಲ್ಲಿ ನಿಂತಿದ್ದ ರಮೇಶನ ಭಾಮೈದನ ಶಂಕರ ಎಂಬಾತ ಹುಡುಗಿಯ ಬಾಯಿ ಮುಚ್ಚಿ ಮಾನಭಂಗಕ್ಕೆ ಯತ್ನಿಸಿದ್ದಾನೆ, ಹುಡುಗಿ ಅಲ್ಲಿಂದ ತಪ್ಪಿಸಿಕೊಂಡು ಹೋಗಿ ಶೆಡ್‌ನಲ್ಲಿದ್ದ ಪೋಷಕರಿಗೆ ವಿಷಯ ತಿಳಿಸಿದ್ದಾಳೆ.

ಬೆಳಗ್ಗೆ ಬಾಲಕಿಯು ರಮೇಶನ ಮನೆಯ ಬಳಿ ತೆರಳಿ ನಿಮ್ಮ ಭಾವಮೈದನ ಶಂಕರ ಮಾನಭಂಗಕ್ಕೆ ಯತ್ನಿಸಿದ ವಿಷಯದ ಕುರಿತು ಪ್ರಶ್ನಿಸಿದಾಗ ರಮೇಶನ ಪುತ್ರಿ ರಕ್ಷಿತ ಅಪ್ರಾಪ್ತೆಯನ್ನು ನೀನು ಭಿಕ್ಷುಕಿ ನಿನ್ನನ್ನು ಯಾರು ಮಾನಭಂಗ ಮಾಡುತ್ತಾರೆ ಎಂದು ಕೈಗಳಿಂದ ಹಲ್ಲೆ ನಡೆಸಿರುವುದಾಗಿ ಅಪ್ರಾಪ್ತ ಬಾಲಕಿ ಪಟ್ಟಣದ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾಳೆ.

ಶಂಕರ ಮತ್ತು ರಮೇಶನ ಪುತ್ರಿ ರಕ್ಷಿತಾ ವಿರುದ್ಧ ಪೋಸ್ಕೊ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪಟ್ಟಣ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


Spread the love

About Laxminews 24x7

Check Also

ವಿಜಯಪುರ ಜಿಲ್ಲೆಯ ಅಭಿವೃದ್ಧಿಯ ಕನಸು ನನಸು ಮಾಡಲು ಬದ್ಧ ಎಂದ ಸಿಎಂ; ಯುಕೆಪಿ, ಸರ್ಕಾರಿ ಮೆಡಿಕಲ್ ಕಾಲೇಜು ಸೇರಿ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ ಸಿಎಂ ಸಿದ್ದರಾಮಯ್ಯ

Spread the love ವಿಜಯಪುರ ಜಿಲ್ಲೆಯ ಅಭಿವೃದ್ಧಿಯ ಕನಸು ನನಸು ಮಾಡಲು ಬದ್ಧ ಎಂದ ಸಿಎಂ; ಯುಕೆಪಿ, ಸರ್ಕಾರಿ ಮೆಡಿಕಲ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ