ನವದೆಹಲಿ: ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶ ಹಾಥರಸ್ಗೆ ಹೋದಾಗ ಅವರನ್ನು ಪೊಲೀಸರು ತಳ್ಳಿದ್ದಾರೆಂಬ ಆರೋಪ ಕೇಳಿಬಂದಿದೆ.
ಮೊದಲ ದಿನ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಹಾಥರಸ್ಗೆ ತೆರಳಿದ್ದಾಗ ನಡೆದ ನೂಕುನುಗ್ಗಲು, ಪೊಲೀಸರ ಲಾಠಿ ಚಾರ್ಜ್ ವೇಳೆ ರಾಹುಲ್ ಗಾಂಧಿಯವರು ಪೊದೆಗೆ ಬಿದ್ದಿದ್ದರು. ಆದರೂ ಬೆಂಬಿಡದೆ ಎರಡನೇ ಬಾರಿ ಭೇಟಿಗೆ ತೆರಳಿದ ಸಂದರ್ಭದಲ್ಲಿ ಪುರುಷ ಅಧಿಕಾರಿಯೋರ್ವ ಪ್ರಿಯಾಂಕಾ ಗಾಂಧಿಯವರ ಬಟ್ಟೆಯನ್ನು ಹಿಡಿದು ಎಳೆದಿದ್ದಾರೆ. ಈ ಫೊಟೋ ಕೂಡ ಎಲ್ಲೆಡೆ ವೈರಲ್ ಆಗಿ, ಪೊಲೀಸರ ಕ್ರಮಕ್ಕೆ ವಿರೋಧವೂ ವ್ಯಕ್ತವಾಗಿದೆ.
ಇದೀಗ ಉತ್ತರ ಪ್ರದೇಶ ಪೊಲೀಸರು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರ ಬಳಿ ಕ್ಷಮೆ ಯಾಚಿಸಿದ್ದಾರೆ. ನಿನ್ನೆಯಷ್ಟೇ ಹಾಥರಸ್ಗೆ ಭೇಟಿ ಕೊಟ್ಟು, ಜಿಲ್ಲಾ ಮ್ಯಾಜಿಸ್ಟ್ರೇಟ್ನ್ನು ಅಮಾನತು ಮಾಡಬೇಕು ಎಂದು ಇವರಿಬ್ಬರೂ ಆಗ್ರಹಿಸಿದ್ದರು.
ಅದಾದ 24 ಗಂಟೆಯೊಳಗೆ ಅಂದರೆ ಇಂದು ಉತ್ತರ ಪ್ರದೇಶ ಪೊಲೀಸರು ಕ್ಷಮೆ ಕೋರಿದ್ದಾರೆ.
ಅದರಲ್ಲೂ ನಿನ್ನೆ ಪ್ರಿಯಾಂಕಾ ಗಾಂಧಿಯವರ ತೋಳಿಗೆ ಕೈ ಹಾಕಿ, ಬಟ್ಟೆ ಎಳೆದ ಘಟನೆ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸುತ್ತೇವೆ ಎಂದೂ ಹೇಳಿದ್ದಾರೆ. ಈ ಘಟನೆ ಬಗ್ಗೆ ಸುಮೊಟೊ ದಾಖಲಿಸಿಕೊಂಡಿರುವ ಡಿಸಿಪಿ, ತನಿಖೆಗಾಗಿ ಹಿರಿಯ ಮಹಿಳಾ ಪೊಲೀಸ್ ಅಧಿಕಾರಿಯನ್ನು ನೇಮಿಸಿದ್ದಾರೆ.
Laxmi News 24×7