Breaking News

ಪೂರ್ಣಿಕಾ (2) ಮಂತ್ರವಾದಿಯಿಂದ ಹತ್ಯೆಯಾದ ಕಂದಮ್ಮ.

Spread the love

ಚಿತ್ರದುರ್ಗ, – ದೆವ್ವ ಬಿಡಿಸುವ ನೆಪದಲ್ಲಿ ಎರಡು ವರ್ಷದ ಹೆಣ್ಣು ಮಗುವನ್ನು ಮಾಂತ್ರಿಕನೊಬ್ಬ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಹೊಳಲ್ಕೆರೆ ತಾಲ್ಲೂಕಿನ ಅಜ್ಜಿ ಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಪೂರ್ಣಿಕಾ (2) ಮಂತ್ರವಾದಿಯಿಂದ ಹತ್ಯೆಯಾದ ಕಂದಮ್ಮ.
ಪ್ರವೀಣ್ ಹಾಗೂ ಬೇಬಿ ದಂಪತಿಯ ಪುತ್ರಿ ಪೂರ್ಣಿಕಾ ನಿದ್ದೆಯಲ್ಲಿ ಬೆಚ್ಚಿ ಬೀಳುತ್ತಿದ್ದಳು. ಈ ಕಾಯಿಲೆಯ ಬಗ್ಗೆ ಆಸ್ಪತ್ರೆಗೆ ತೋರಿಸಿದ್ದರೂ ಪ್ರಯೋಜನವಾಗಿರಲಿಲ್ಲ.

ಕೊನೆಗೆ ಮೌಢ್ಯದ ಮೊರೆ ಹೋಗಿದ್ದು , ರಾಕೇಶ್ ಎಂಬ ಮಾಂತ್ರಿಕನ ಬಳಿ ಹೋಗಿದ್ದಾರೆ. ಮಗುವನ್ನು ನೋಡಿದ ರಾಕೇಶ್ ಇದು ದೆವ್ವದ ಕಾಟವೇ. ಪೂಜೆ

ಮಾಡಬೇಕೆಂದು ಪೂರ್ಣಿಕಾನನ್ನು ಕರೆಸಿಕೊಂಡು ಗ್ರಾಮದ ಹೊರ ವಲಯದಲ್ಲಿ ಪೂಜೆ ಮಾಡುತ್ತಾ ಗಿಡವೊಂದರ ಕಡ್ಡಿಯಿಂದ ಮಗುವಿಗೆ ಮನ ಬಂದಂತೆ ಬಾರಿಸಿದ್ದಾನೆ.

ಮೈ ತುಂಬಾ ಬಾಸುಂಡೆ ಬಿದ್ದ ಪರಿಣಾಮ ನೋವು ಹೆಚ್ಚಾಗಿ ಬಾಲಕಿ ಪ್ರಜ್ಞೆ ತಪ್ಪಿದ್ದಾಳೆ. ಕೂಡಲೇ ಮಗುವನ್ನು ಕರೆ ತಂದು ಪೋಷಕರಿಗೆ ಒಪ್ಪಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಮಗುವಿನ ಸ್ಥಿತಿ ಕಂಡು ಕಂಗಾಲಾದ ಪೋಷಕರು ಹೊಳಲ್ಕೆರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಮಗು ಮೃತಪಟ್ಟಿದೆ ಎಂದು ವೈದ್ಯರು ಮೃತಪಟ್ಟಿದ್ದಾರೆ.

ಪೂರ್ಣಿಕಾ ಮೃತಪಟ್ಟ ಸುದ್ದಿ ತಿಳಿದ ಕೂಡಲೇ ಪರಾರಿಯಾಗಿದ್ದ ರಾಕೇಶ್‍ನನ್ನು ಮಗುವಿನ ಪೋಷಕರು ನೀಡಿದ ದೂರು ಆಧರಿಸಿ ಪೆÇಲೀಸರು ಕಳ್ಳ ಮಾಂತ್ರಿಕನನ್ನು ಬಂಸಿದ್ದಾರೆ.


Spread the love

About Laxminews 24x7

Check Also

ಸಹಾಯವಾಣಿಗೆ ಕರೆ ಮಾಡಿ ತನ್ನ ಬಾಲ್ಯ ವಿವಾಹ ತಡೆದ ಬಾಲಕಿ: ವಿದ್ಯಾಭ್ಯಾಸಕ್ಕೆ ಬೆಳಕಾದ ತಹಶೀಲ್ದಾರ್

Spread the loveವಿಜಯನಗರ: ಬಾಲಕಿಯೊಬ್ಬಳು ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ತನ್ನ ಬಾಲ್ಯ ವಿವಾಹವನ್ನು ತಾನೇ ತಡೆದ ಘಟನೆ ಜಿಲ್ಲೆಯ ಹಗರಿಬೊಮ್ಮನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ