Breaking News

ಶಾಸಕಿಯಾದ್ರೆ ಒಳ್ಳೆಯದಾಗುತ್ತದೆ ಎಂದುಕೊಂಡಿದ್ದೆ, ಆದರೆ ಈಗಲೇ ಅನೇಕ ಸವಾಲು, ಸಂಘರ್ಷ ಎದುರಿಸುವಂತಾಗಿದೆ.

Spread the love

ಬೆಳಗಾವಿ : ನನಗೆ ಕೆಲವರು ತುಂಬಾ ಕಷ್ಟ ಕೊಡುತ್ತಿದ್ದಾರೆ. ಎಷ್ಟೇ ವಿರೋಧಿಸಿದರು ನಾನು ಜಗ್ಗುವುದಿಲ್ಲ ಎಂದು ಗ್ರಾಮೀಣ ಕ್ಷೇತ್ರ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಜನರ ಮುಂದೆ ತಮ್ಮ ಅಳಲು ತೋಡಿಕೊಂಡು ಜಿಲ್ಲಾಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಕಿಡಿಕಾರಿದ್ದಾರೆ.

ಇಲ್ಲಿನ ಸುಳೇಬಾವಿಯಲ್ಲಿ  ಮಾತನಾಡಿದ ಅವರು, ‘ ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ವಿರೋಧಿಗಳು ಅಡ್ಡಿಯಾಗುತ್ತಿದ್ದಾರೆ. ಶಾಸಕರಾದ ಬಳಿಕ ಒಂದಲ್ಲಾಂದು  ಕಷ್ಟಗಳ ಕಾಡುತ್ತಿವೆ. ಶಾಸಕಿಯಾದ್ರೆ ಒಳ್ಳೆಯದಾಗುತ್ತದೆ ಎಂದುಕೊಂಡಿದ್ದೆ, ಆದರೆ ಈಗಲೇ ಅನೇಕ ಸವಾಲು, ಸಂಘರ್ಷ ಎದುರಿಸುವಂತಾಗಿದೆ. ಸರ್ಕಾರದಿಂದ 5  ಲಕ್ಷ ಬಿಡುಗಡೆ ಮಾಡಿಸಿಕೊಂಡು ಬರಬೇಕಾದ್ರು, ನನಗೆ ಕಷ್ಟ ಕೊಡುತ್ತಿದ್ದಾರೆ’ ಎಂದು ಪರೋಕ್ಷವಾಗಿ ಸಚಿವ ರಮೇಶ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

‘ ಯಾರು ನನಗೆ ಕಷ್ಟ ಕೊಡುತ್ತಿದ್ದಾರೆ ಅಂತಾ, ತಮಗೆಲ್ಲಾ ಗೊತ್ತಿದೆ.  ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದರೆ, ನನ್ನ ಹೆಸರು ಬರುತ್ತದೆ ಎಂದು ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗುತ್ತಿದ್ದಾರೆ. ಆದರು ಸಹ  ನಾನು ಕ್ಷೇತ್ರದ ಅಭಿವೃದ್ಧಿಯ ಉದ್ದೇಶವೊಂದೆ ಗುರಿ ಇಟ್ಟುಕೊಂಡು ಮುನ್ನುಗುತ್ತಿದೆನೆ ‘ ಎಂದು ಅಳಲು ತೊಡಿಕೊಂಡಿದ್ದಾರೆ.

ಅವರದೇ ಸರ್ಕಾರ, ಮಂತ್ರಿಗಳು ಇರುವ ಇಂತಹ ಪರಿಸ್ಥಿತಿಯಲ್ಲಿಯೂ ಸಹ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತರುವ ಪ್ರಯತ್ನ ಮಾಡುತ್ತಿದ್ದೆನೆ. ನಿರಂತರವಾಗಿ ತಮ್ಮಲ್ಲೆರ ಸಹಕಾರ ನನ್ನೊಂದಿಗೆ ಇರಲಿ ಎಂದು ಹೇಳಿದರು


Spread the love

About Laxminews 24x7

Check Also

ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ ವಿಜಯಶಾಲಿಗಳಾಗಿ – ಇಕ್ಬಾಲ್ ಪೀರಜಾದೆ.

Spread the love ಹುಕ್ಕೇರಿ : ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ ವಿಜಯಶಾಲಿಗಳಾಗಿ – ಇಕ್ಬಾಲ್ ಪೀರಜಾದೆ. ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ