ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ ಮಾಫಿಯಾ ಕೇಸಿನಲ್ಲಿ ಸಿಕ್ಕಿಬಿದ್ದಿರುವ ನಟಿ ರಾಗಿಣಿಯವರು ಡ್ರಗ್ಸ್ ವಿಚಾರದಲ್ಲಿ ಕೋಡ್‍ವರ್ಡ್‍ಗಳನ್ನು ಬಳಸುತ್ತಿದ್ದರು ಎಂದು ತಿಳಿದು ಬಂದಿದೆ.
ಡ್ರಗ್ ಮಾಫಿಯಾ ವಿಚಾರವಾಗಿ ಇಂದು ನಟಿ ರಾಗಿಣಿಯವರನ್ನು ಸಿಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಇಂದು ಬೆಳಗ್ಗೆ ರಾಗಿಣಿ ಮನೆ ಮೇಲೆ ದಿಢೀರ್ ದಾಳಿ ಮಾಡಿದ ಅಧಿಕಾರಿಗಳು ಅವರ ಮೊಬೈಲ್ ಫೋನ್, ಲ್ಯಾಪ್‍ಟಾಪ್ ಮತ್ತು ಕಂಪ್ಯೂಟರ್‍ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದರಲ್ಲಿ ಕೆಲ ಮಹತ್ವದ ಸಾಕ್ಷಿಗಳು ಸಿಕ್ಕಿವೆ ಎನ್ನಲಾಗಿದೆ.
ಇದರಲ್ಲಿ ರಾಗಿಣಿ ಮತ್ತು ಅವರ ಅಪ್ತ ರವಿಶಂಕರ್ ಕೋಡ್‍ವರ್ಡ್ ಉಪಯೋಗಿಸಿಕೊಂಡು ಡ್ರಗ್ ವಿಚಾರದ ಬಗ್ಗೆ ಚಾಟ್ ಮಾಡುತ್ತಿದ್ದರು ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಚಾಟ್ ವೇಳೆ ತಮ್‍ಸಪ್ ಸಿಂಬಲ್ ಸೆಂಡ್ ಮಾಡಿದ್ರೆ ಇವತ್ತು ಡ್ರಗ್ ಬೇಕು ಎಂದು, ಸ್ಟಾರ್ ಇಮೋಜಿ ಕಳುಹಿಸಿದರೆ ಫ್ಲಾಟ್‍ಗೆ ಬರಬೇಕು ಎಂದು ಅರ್ಥ. ಏರೋಪ್ಲೇನ್ ಸಿಂಬಲ್ ಕಳುಹಿಸಿದರೆ ಊರಿಂದ ಹೊರಗಡೆ ಹೋಗುವುದು ಎಂಬಂತೆ ಕೋಡ್‍ವರ್ಡ್ ಸೆಟ್ ಮಾಡಿಕೊಂಡಿದ್ದಾರೆ.
ಅಂತಯೇ ರವಿಶಂಕರ್ 3 ಚಿಕನ್ ಪೀಸ್, 1 ಕಾಲಿ ಫ್ಲವರ್ ಕಳುಹಿಸಿದರೆ ಕೊಕೈನ್ ಎಂಡಿಎಂಎ, ಎಲ್‍ಎಸ್‍ಡಿ ರೆಡಿ ಇದೆ ಎಂಬ ಅರ್ಥವನ್ನು ಸೂಚಿಸುತ್ತದೆ ಎಂಬುದು ತನಿಖೆ ವೇಳೆ ಗೊತ್ತಾಗಿದೆ. ಈ ರೀತಿಯ ಚಾಟ್‍ಗಳು ಪೊಲೀಸರು ವಶಕ್ಕೆ ಪಡೆದಿರುವ ರವಿಶಂಕರ್ ಮತ್ತು ರಾಗಿಣಿ ಮೊಬೈಲ್‍ನಲ್ಲಿ ಸಿಕ್ಕಿವೆ. ಜೊತೆಗೆ ಇದೇ ರೀತಿಯ ಕೋಡ್‍ವರ್ಡ್‍ಗಳನ್ನು ಬಳಸುತ್ತಿದ್ದರು ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ.