ಬೆಂಗಳೂರು: ಕರೊನಾ ಸಾಂಕ್ರಾಮಿಕ ರೋಗದ ಕಾರಣ ಮುಂದಿಟ್ಟು ನಾಡಹಬ್ಬ ಮೈಸೂರು ದಸರಾ ಆಚರಣೆ ಕೈಬಿಡಬಾರದು ಎಂಬ ಒತ್ತಡ ಹೆಚ್ಚುತ್ತಿದೆ. ಮೈಸೂರು ದಸರಾ ನಡೆಯುವುದೇ ಇಲ್ಲವೇ ಎಂಬ ಸಂದೇಹ ಹೆಚ್ಚಾದ ಕಾರಣ ಈ ಒತ್ತಡ ಹೆಚ್ಚಾಗಿದೆ.
ಈ ನಡುವೆ, ಕಳೆದ ತಿಂಗಳು ಕಾವೇರಿ ನದಿಗೆ ಬಾಗಿನ ಸಮರ್ಪಿಸಲು ತೆರಳುವ ಸಂದರ್ಭದಲ್ಲೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ದಸರಾ ಆಚರಣೆ ಬಗ್ಗೆ ತೀರ್ಮಾನಿಸಲು ಚಿಂತನೆ ನಡೆದಿದೆ. ಶೀಘ್ರವೇ ಸಭೆ ನಡೆಸುವುದಾಗಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಸೆ.7ರಂದು ಉನ್ನತಮಟ್ಟದ ಸಭೆ ನಿಗದಿಯಾಗಿದೆ ಎಂದು ಮೂಲಗಳು ತಿಳಿಸಿವೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಹಿರಿಯ ಅಧಿಕಾರಿಗಳು ಭಾಗವಹಿಸುವ ನಿರೀಕ್ಷೆ ಇದೆ. ಕರೊನಾ ಸಂಕಷ್ಟದ ನಡುವೆ ಸರಳ ದಸರಾ ಆಚರಣೆಯ ರೂಪರೇಷೆ, ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು, ಅನುಷ್ಠಾನದ ಮಾರ್ಗೋಪಾಯಗಳ ಕುರಿತು ಈ ಸಭೆಯಲ್ಲಿ ಚರ್ಚೆಯಾಗಲಿವೆ.

Laxmi News 24×7