ಬಾರಾಮುಲ್ಲಾ, : ಭಾರತೀಯ ಸೇನೆಯು ಕಾಶ್ಮೀರ ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ಅನೇಕ ಅಡಗುತಾಣಗಳನ್ನು ಪತ್ತೆ ಹಚ್ಚಿದ್ದು, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶ ಪಡಿಸಿಕೊಂಡಿದೆ. ಆಗಸ್ಟ್ 30 ರಂದು ಬಾರಾಮುಲ್ಲಾ ಜಿಲ್ಲೆಯ ರಾಂಪುರ್ ಸೆಕ್ಟರ್‌ನಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಚಲನವಲನವನ್ನು ಪತ್ತೆ ಮಾಡಿದೆ ಎಂದು ಸೇನಾಧಿಕಾರಿಗಳ ಪ್ರಕಟನೆ ತಿಳಿಸಿದೆ.
ಉಗ್ರರು ಅಡಗಿರುವ ನಿರ್ದಿಷ್ಟ ಮಾಹಿತಿಯನ್ನಾಧರಿಸಿ ಸೇನೆ ಎಲ್ ಒಸಿಯ ರಾಂಪುರ್ ಸೆಕ್ಟರ್ ಸಮೀಪವಿರುವ ಹಳ್ಳಿಯಲ್ಲಿ ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿತ್ತು. ಏಳು ಗಂಟೆಗಳ ವ್ಯಾಪಕ ಶೋಧದ ನಂತರ, ರಾಂಪುರ್ ಸೆಕ್ಟರ್‌ನ ಎರಡು ಅಡಗುತಾಣಗಳನ್ನು ಪತ್ತೆ ಹಚ್ಚಲಾಗಿದ್ದು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸಲಾಗಿದೆ.
ಆರು ಪಿಸ್ತೂಲ್‌ಗಳು, 21 ಗ್ರೆನೇಡ್; ಎರಡು ಯುಬಿಜಿಎಲ್ ಗ್ರೆನೇಡ್ಗಳು ಮತ್ತು ಎರಡು ಕೆನ್ವುಡ್ ರೇಡಿಯೋ ಸೆಟ್ ಐದು ಎಕೆ ಸರಣಿ ರೈಫಲ್‌ಗಳನ್ನು ಸೈನ್ಯವು ವಶಪಡಿಸಿಕೊಂಡಿದೆ
Laxmi News 24×7