ರಾಯಚೂರು: ಗಣೇಶ ವಿಸರ್ಜನೆ ವೇಳೆ ಧ್ವನಿವರ್ಧಕಕ್ಕೆ ಅವಕಾಶ ನೀಡದ ಹಿನ್ನೆಲೆ ಕೆಲ ಕಿಡಿಗೇಡಿಗಳು ರಸ್ತೆ ಬದಿ ನಿಲ್ಲಿಸಿದ್ದ ಬೈಕ್, ತಳ್ಳೋಬಂಡಿಗಳನ್ನ ರಾಜಕಾಲುವೆಗೆ ಎಸೆದಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ
ನಗರದ ಬಂಗೀಕುಂಟದಲ್ಲಿ 20 ಕ್ಕೂ ಹೆಚ್ಚು ಬೈಕ್ ಹಾಗೂ 10 ತಳ್ಳೋಬಂಡಿ ಹಾಗೂ ಟಂಟಂನ ಗಾಜು ಪುಡಿಪುಡಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ನಾಲ್ಕೈದು ಬೈಕ್ ಗಳನ್ನ ರಾಜಕಾಲುವೆಗೆ ಎಸೆದಿದ್ದಾರೆ. ನಿಯಮ ಮೀರಿ ಹೆಚ್ಚು ಜನ ಸೇರಿ ಮೆರವಣಿಗೆ ಮಾಡಲಾಗಿದೆ.ಧ್ವನಿವರ್ಧಕ, ವಿದ್ಯುತ್ ದ್ವೀಪಗಳನ್ನ ಬಳಸಿ ಗಣೇಶ ವಿಸರ್ಜನೆಗೆ ಮೆರವಣಿಗೆ ಮಾಡಲಾಗಿದೆ. ಸದರ ಬಜಾರ್ ಠಾಣೆ ಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದು, ಘಟನೆಗೆ ಕಾರಣರಾದವರ ಪತ್ತೆಕಾರ್ಯ ನಡೆಸಿದ್ದಾರೆ.
Laxmi News 24×7