ಬೆಂಗಳೂರು: ಜೂಜಾಡುವ ಗೀಳಿಗೆ ಕೆಲಸ ಮಾಡುತ್ತಿದ್ದ ಮನೆಯಲ್ಲಿಯೇ ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ಶಂಕರಪ್ಪ (40) ಎಂದು ಗುರುತಿಸಲಾಗಿದೆ. ಶಂಕರಪ್ಪ ಕಳೆದ ಕೆಲ ವರ್ಷಗಳಿಂದ ಬೆಂಗಳೂರಿನ ಗಿರಿನಗರದ ಉದ್ಯಮಿಯೊಬ್ಬರ ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ದನು. ಆದರೆ ಆರೋಪಿ ಜೂಜಾಡುವ ಚಟ ಹೊಂದಿದ್ದನು.
ಒಂದು ದಿನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಸುಮಾರು 15 ಲಕ್ಷ ಮೌಲ್ಯದ 320 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ್ದನು. ನಂತರ ಬೆಂಗಳೂರಿನಲ್ಲಿ ಮನೆಗಳವು ಮಾಡಿದ ಚಿನ್ನಾಭರಣವನ್ನು ಹೊಸದುರ್ಗದಲ್ಲಿ ಅಡವಿಟ್ಟಿದ್ದನು. ಅಲ್ಲಿ ಅಡವಿಟ್ಟ ಚಿನ್ನಾಭರಣದಿಂದ ಬಂದಂತಹ ಹಣವನ್ನು ಆರೋಪಿ ಜೂಜಾಡಿ ಸೋತಿದ್ದನು.
ಕಳ್ಳತನ ನಡೆದಿದ್ದ ಬಗ್ಗೆ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಗಿರಿನಗರ ಪೊಲೀಸರು ಆರೋಪಿ ಶಂಕರಪ್ಪನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
Laxmi News 24×7