ಬಾಗಲಕೋಟೆ: ಹಳ್ಳಿಗಳಲ್ಲಿ ಎಂಎಸ್‌ಐಎಲ್ ಮಳಿಗೆ ಆರಂಭಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ನಾವು ಮದ್ಯದ ಅಂಗಡಿ ತೆರೆಯುವವರಲ್ಲ. ಅವುಗಳನ್ನು ಮುಚ್ಚುವವರು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.
ಮುಧೋಳದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳ್ಳಿ ಹಳ್ಳಿಗಳಲ್ಲೂ ಸರ್ಕಾರಿ ಸ್ವಾಮ್ಯದ ಎಂಎಸ್‌ಐಎಲ್ ಮದ್ಯದ ಅಂಗಡಿ ಆರಂಭಿಸಲಾಗುತ್ತದೆ ಎನ್ನುವುದು ಸುಳ್ಳು. ಆ ರೀತಿ ನಾವು ಮಾಡುವುದಿಲ್ಲ. ನಾವು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿನ್ನೆಲೆಯುಳ್ಳವರು. ಮದ್ಯದ ಅಂಗಡಿ ಮುಚ್ಚುವುದು ಬಿಜೆಪಿಯ ನೀತಿಯಲ್ಲೊಂದು ಎಂದರು.
ಈಗಿರುವ ಮದ್ಯದ ಅಂಗಡಿಗಳನ್ನು ಹೊರತುಪಡಿಸಿ, ರಾಜ್ಯದಲ್ಲಿ ಹೊಸ ಅಂಗಡಿ ತೆರೆಯಲ್ಲ. ಅದು ನಮ್ಮ ಆದ್ಯತೆಯೂ ಅಲ್ಲ. ಹಿಂದೆ ರಾಜ್ಯದ ಗಲ್ಲಿ ಗಲ್ಲಿಗಳಲ್ಲಿ ಸಾರಾಯಿ ಮಾರಾಟ ಮಾಡುತ್ತಿದ್ದರು. ಅದನ್ನು ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಬಳಿಕ ಸಂಪೂರ್ಣ ಬಂದ್ ಮಾಡಿದರು.ಸಾರಾಯಿ ಬಂದ್ ಮಾಡಿದ ಕೀರ್ತಿ ಯಡಿಯೂರಪ್ಪ ಹಾಗೂ ಬಿಜೆಪಿಗೆ ಸಲ್ಲುತ್ತದೆ ಎಂದರು.
*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??