Breaking News

ಸೂಪರ್ ಸ್ಟಾರ್ಸ್​ ಶಕ್ತಿ ಕೇಂದ್ರದ ಬಾಗಿಲು ತೆಗೆದ ಸರ್ಕಾರ

Spread the love

ಕೊರೊನಾ ಆರ್ಭಟ ಮತ್ತು ಲಾಕ್​ಡೌನ್​ ಎಲ್ಲಾ ಉದ್ಯಮಗಳಿಗೂ ಭಾರೀ ಪೆಟ್ಟು ಕೊಟ್ಟಿದೆ. ಕೊರೊನಾ ನಾಶವಾಗದೇ ಇದ್ರು, ಬೇರೆ ದಾರಿಯಿಲ್ಲದೇ ನಿಧಾನವಾಗಿ ಲಾಕ್​ಲಾಕ್​​ ಸಡಿಲಗೊಳಿಸಲಾಗ್ತಿದೆ. ಇದೀಗ ಕೇಂದ್ರ ಸರ್ಕಾರ ಅನ್​ಲಾಕ್​ 3 ಮಾರ್ಗಸೂಚಿಯನ್ನ ಬಿಡುಗಡೆ ಮಾಡಿದೆ. ಆಗಸ್ಟ್​ ಒಂದರಿಂದ 3ನೇ ಹಂತದ ಅನ್​ಲಾಕ್​ ಜಾರಿಗೆ ಬರಲಿದೆ. ರಾತ್ರಿ ಕರ್ಫೂ ತೆರೆವುಗೊಳಿಸಿರೋದು ಬಿಟ್ರೆ, ಈ ಬಾರಿ ಅನ್​ಲಾಕ್​​ನಲ್ಲಿ ಭಾರಿ ಬದಲಾವಣೆ ಇಲ್ಲ. ಜಿಮ್​ ಮತ್ತು ಯೋಗ ಕೇಂದ್ರಗಳನ್ನ ತೆರೆಯಲು ಮಾತ್ರ ಅನುಮತಿ ಸಿಕ್ಕಿದೆ.

ಆಗಸ್ಟ್​​ ಒಂದರಿಂದ ಥಿಯೇಟರ್​ ಬಾಗಿಲು ತೆರೆಯಲು ಅನುಮತಿ ಸಿಗುತ್ತೆ ಅನ್ನೋ ಚರ್ಚೆ ಕಳೆದೊಂದು ವಾರದಿಂದ ನಡೀತಿತ್ತು. ಲಾಕ್​ಡೌನ್​ ಘೋಷಣೆಗೂ ಮೊದ್ಲು ಅಂದ್ರೆ, ಮಾರ್ಚ್​ 14ರಂದು ಮುಚ್ಚಿದ ಚಿತ್ರಮಂದಿರಗಳ ಬಾಗಿಲು ಇನ್ನು ತೆಗೆದಿಲ್ಲ.

ಸಿನಿಮಾ ಪ್ರದರ್ಶನವಿಲ್ಲದೇ ನೂರಾರು ಕೋಟಿ ನಷ್ಟವಾಗಿದೆ. ಅನ್​​ಲಾಕ್​​​​ ಮೂರರಲ್ಲಿ ಥಿಯೇಟರ್​ ತೆರೆಯಲು ಅನುಮತಿ ಸಿಗುತ್ತೇ ಅಂತ ಎಲ್ಲರೂ ಭಾವಿಸಿದ್ರು. ಸಿನಿರಸಿಕರು ಕೂಡ ಸಿಲ್ವರ್​ ಸ್ಕ್ರೀನ್​ ಮೇಲೆ ಸಿನಿಮಾ ನೋಡುವ ಅವಕಾಶ ಸಿಗುತ್ತೆ ಅಂತ ಕಾಯ್ತಿದ್ರು. ಆದರೆ, ಆ ನಿರೀಕ್ಷೆ ಹುಸಿಯಾಗಿದೆ.

ಮೆಟ್ರೋ, ಸಿನಿಮಾ ಥಿಯೇಟರ್, ಎಂಟರ್​ಟ್ರೈನ್​ಮೆಂಟ್​ ಪಾರ್ಕ್​, ಬಾರ್​, ಪಾರ್ಕ್​, ಆಡಿಟೋರಿಯಂ ಬಾಗಿಲು ತೆರೆಯಲು ಅನ್​​ಲಾಕ್​​ 3ರಲ್ಲಿ ಅನುಮತಿ ಸಿಕ್ಕಿಲ್ಲ. ನೂರಾರು ಜನ ಸಿನಿಮಾ ನೋಡಲು ಒಟ್ಟಿಗೆ ಚಿತ್ರಮಂದಿರಗಳಲ್ಲಿ ಸೇರ್ತಾರೆ. ಸಾಮಾಜಿಕ ಅಂತರ ಕಷ್ಟ ಸಾಧ್ಯ. ಹಾಗಾಗಿಯೇ ಸರ್ಕಾರ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡುವ ರಿಸ್ಕ್​ ತೆಗೆದುಕೊಳ್ಳುತ್ತಿಲ್ಲ. ಸಹಜವಾಗಿಯೇ ಇದು ಚಿತ್ರರಂಗದ ಬೇಸರಕ್ಕೆ ಕಾರಣವಾಗಿದೆ. ಆದ್ರೂ, ಸರ್ಕಾರ ನಿಯಮವನ್ನ ಪಾಲನೇ ಮಾಡದೇ ಬೇರೆ ವಿಧಿಯಿಲ್ಲ.

ಥಿಯೇಟರ್ ಬಾಗಿಲು ತೆರೆಯದೇ ಇದ್ರು, ಜಿಮ್​ ಬಾಗಿಲು ತೆರೆಯಲು ಅನುಮತಿ ನೀಡಿರೋದು ಸಾಕಷ್ಟು ಜನರ ಸಂತಸಕ್ಕೆ ಕಾರಣವಾಗಿದೆ. ತೆರೆಮೇಲೆ ಸೊಗಸಾಗಿ ಕಾಣಿಸಿಕೊಳ್ಳಲು ಕಲಾವಿದರು ಕೂಡ ಜಿಮ್​ಗಳಲ್ಲಿ ಬೆವರಿಳಿಸ್ತಾರೆ. ಆದರೆ, ಲಾಕ್​ಡೌನ್​ ಹಿನ್ನೆಲೆ ನಾಲ್ಕು ತಿಂಗಳಿಂದ ಜಿಮ್​ಗೆ ಹೋಗಲು ಸಾಧ್ಯವಾಗಿರಲಿಲ್ಲ. ಕೆಲ ಕಲಾವಿದರು ಮನೆಯಲ್ಲಿ ಕಸರತ್ತು ನಡೆಸಿ, ಫಿಟ್ನೆಸ್​ ಕಾಯ್ದುಕೊಂಡ್ರೆ, ಮತ್ತೆ ಕೆಲವರು ಯಾವಾಗ ಜಿಮ್​ ಓಪನ್ ಆಗುತ್ತೆ ಅಂತ ಕಾಯ್ತಿದರು. ಸರ್ಕಾರದ ಮಾರ್ಗಸೂಚಿಯಂತೆ ಆಗಸ್ಟ್​ 5ರಿಂದ ಫಿಟ್ನೆಸ್​ ಸೆಂಟರ್​ಗಳು ಪುನರಾರಂಭವಾಗಲಿದೆ.

ಬಹುತೇಕ ಎಲ್ಲಾ ಸ್ಟಾರ್​ ಕಲಾವಿದರು ಫಿಟ್ನೆಸ್​ಗಾಗಿ ಜಿಮ್​ನಲ್ಲಿ ಕಸರತ್ತು ನಡೆಸ್ತಾರೆ. ದಿನಕ್ಕೆ 2ರಿಂದ 4 ಗಂಟೆಗಳ ಕಾಲ ಜಿಮ್​ನಲ್ಲಿ ಕಾಲ ಕಳೀತ್ತಾರೆ. ಕೆಲ ನಟಿಯರು ಕೂಡ ಫಿಟ್ನೆಸ್​ಗಾಗಿ ಜಿಮ್​​​​ ಅನ್ನೇ ನೆಚ್ಚಿಕೊಂಡಿದ್ದಾರೆ. ಲಾಕ್​ಡೌನ್​​ ಘೋಷಣೆಯಾದ ದಿನದಿಂದ ಯಾರು ಹೆಚ್ಚು ಹೊರಗಡೆ ಕಾಣಿಸಿಕೊಂಡಿಲ್ಲ. ಇದೀಗ ಜಿಮ್​ ತೆರೆಯಲು ಅನುಮತಿ ಸಿಕ್ಕಿರೋದು ಸಹಜವಾಗಿಯೇ ಎಲ್ಲರಿಗೂ ಖುಷಿ ತಂದಿದೆ.

ಬರೀ ಕರ್ನಾಟಕ ರಾಜ್ಯದಲ್ಲೇ 5000ಕ್ಕೂ ಅಧಿಕ ಜಿಮ್​ ಟ್ರೈನರ್​ಗಳಿದ್ದು, ಲಾಕ್​ಡೌನ್​ನಿಂದ ಅವರೆಲ್ಲಾ ಸಂಕಷ್ಟಕ್ಕೆ ಸಿಲುಕಿದರು. ವರ್ಕ್​ಔಟ್ ಮಾಡೋರಿಗೆ ಶಕ್ತಿ ತುಂಬುತ್ತಿದ್ದವರೇ ನಾಲ್ಕೈದು ತಿಂಗಳಿನಿಂದ ಶಕ್ತಿ ಕಳೆದುಕೊಂಡಿದರು. ಸರ್ಕಾರದ ನಿಯಮಗಳನ್ನ ಪಾಲಿಸಿ, ಜಿಮ್​ ತೆರೆಯಲು ಅವಕಾಶ ಕೇಳಿ ಕೇಳಿ ಎಲ್ಲರೂ ಸುಮ್ಮನಾಗಿದರು. ದುನಿಯಾ ವಿಜಿ, ಡಾಲಿ ಧನಂಜಯ ಸೇರಿದಂತೆ ಸಾಕಷ್ಟು ಜನ ಕಲಾವಿದರು ಜಿಮ್​ ತರಬೇತುದಾರರ ಬೆಂಬಲಕ್ಕೆ ನಿಂತಿದರು. ಜಿಮ್​ ಬಾಗಿಲು ತೆರೆಯಲು ಅವಕಾಶ ಮಾಡಿಕೊಡಿ ಅಂತ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು.

ಕೊರೊನಾ ಲಾಕ್​ಡೌನ್​ ಬಹುತೇಕ ಸಡಿಲಿಕೆಯಾಗಿದ್ರು, ಜಿಮ್​ ತೆರೆಯಲು ಅನುಮತಿ ಸಿಕ್ಕಿಲ್ಲ, ಅಂತ ಇತ್ತೀಚೆಗೆ ಜಿಮ್ ಮಾಲೀಕರು ಪ್ರತಿಭಟನೆ ಕೂಡ ನಡೆಸಿದ್ದರು. ಒಟ್ನಲ್ಲಿ ಜಿಮ್ ಬಾಗಿಲು ತೆರೆಯಲು ಸರ್ಕಾರ ಅನುಮತಿ ನೀಡಿರೋದು, ಜಿಮ್​ ಮಾಲೀಕರು ಮತ್ತು ತರಬೇತುದಾರರಿಗೆ ಸಂತಸ ತಂದಿದೆ. ಮತ್ತೆ ಜಿಮ್​ನಲ್ಲಿ ಕಸರತ್ತು ನಡೆಸಲು ಕಲಾವಿದರು ಕೂಡ ಸಜ್ಜಾಗಿದ್ದಾರೆ.


Spread the love

About Laxminews 24x7

Check Also

ಹುದಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಾದಿಯಲ್ಲಿ ಹೊಸ ಬೆಳಕು!

Spread the love ಹುದಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಾದಿಯಲ್ಲಿ ಹೊಸ ಬೆಳಕು! ಯಮಕನಮರಡಿ ವಿಧಾನಸಭಾ ಕ್ಷೇತ್ರದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ