ಹುಕ್ಕೇರಿ: ತಾಲ್ಲೂಕಿನ ಹಿಡಕಲ್ ಡ್ಯಾಂನಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಮಕ್ಕಳಿಗೆ ಹಾಲು ನೀಡುವ ಮೂಲಕ ನಾಗರ ಪಂಚಮಿಯನ್ನು ಬಸವ ಪಂಚಮಿಯನ್ನಾಗಿ ಶನಿವಾರ ಅರ್ಥಪೂರ್ಣವಾಗಿ ಆಚರಿಸಿದರು.
ಜನರು ವೈಜ್ಞಾನಿಕವಾಗಿ ಯೋಚಿಸುವ ಮಟ್ಟದಲ್ಲಿದ್ದಾರೆ. ಮೂಲತಃ ಮಾಂಸಾಹಾರಿಯಾದ ಹಾವಿನ ಆಹಾರ ಹಾಲಲ್ಲ ಎಂಬ ಜಾಗೃತಿ ಮೂಡುತ್ತಿದೆ. ಹುತ್ತಕ್ಕೆ ಹಾಲೆರೆಯುವ ಬದಲು ಅದೇ ಹಾಲನ್ನು ಅಪೌಷ್ಟಿಕತೆಯಿಂದ ನರಳುವ ಮಕ್ಕಳು, ಅನಾಥರು ಹಾಗೂ ಬಡ ಜನರಿಗೆ ಹಂಚಿದರೆ ಪಂಚಮಿಗೆ ಅರ್ಥ ಬರುತ್ತದೆ ಮಾನವ ಬಂಧುತ್ವ ವೇದಿಕೆಯ ಸಂಚಾಲಕ ವಿಠ್ಠಲ ಮಾದರ ಹೇಳಿದರು.
ಇದೇ ವೇಳೆ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಮೊದಲು ಕೈ ತೊಳೆದು ಸ್ಯಾನಿಟೈಸರ್, ಮಾಸ್ಕ್ ನೀಡಿದ ಬಳಿಕ ಹಾಲು ನೀಡಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಪಾಬ್ಲಿಕ್ ಯರಗಟ್ಟಿ ಪ್ರಾಚಾರ್ಯರು ಕಿರಣ ಚೌಗಲಾ, ದಲಿತ ಸೇನೆ ಜಿಲ್ಲಾ ಅಧ್ಯಕ್ಷ ಕರಿಯಪ್ಪ ಗುಡಿಯನ್ನವರ, ಪ್ರಕಾಶ ಹೊಸಮನಿ ಮಾನವ ಬಂಧುತ್ವ ವೇದಿಕೆಯ ವ್ಯವಸ್ಥಾಪಕ ರಾಮಕೃಷ್ಣ ಪಾನಬುಡೆ ವೇದಿಯ ಸಿಬ್ಬಂದಿ ಉಷಾ ನಾಯಿಕ, ಮನಿಷಾ ನಾಯಿಕ , ಚಿದಾನಂದ ಬೆಟಸೂರು, ಪ್ರಕಾಶ ಭಮನ್ನವರ, ಸಚಿನ ಕರ್ಕಿ, ತಾಲೂಕಾ ಕಾರ್ಯಕರ್ತರು ಹಾಗೂ ಸ್ವಧಾರ ಆಶ್ರಯ ಸಿಬ್ಬಂದಿ ಮತ್ತು ನಿಲಯ ಪಾಲಕರು ರಾಧಿಕಾ ಇತರರು ಇದ್ದರು