Breaking News

50 ವರ್ಷದ ಶಿಗ್ಗಾಂವಿಯ ತಹಶೀಲ್ದಾರರಿಗೆ ಸೇರಿದಂತೆ ಐದು ಜನ ಕುಟುಂಬ ಸದಸ್ಯರಿಗೂ ಸಹ ಕೊರೊನಾ ಸೋಂಕು ಧೃಡ

Spread the love

ಹಾವೇರಿ: ಜಿಲ್ಲೆಯಲ್ಲಿ 54 ಜನರಲ್ಲಿ ಮಹಾಮಾರಿ ಕೊರೊನಾ ಸೋಂಕು ಧೃಡಪಟ್ಟಿದೆ. ಶಿಗ್ಗಾಂವಿ ತಾಲೂಕಿನಲ್ಲಿ 30 ಜನರಿಗೆ ಸೋಂಕು ದೃಢಪಟ್ಟಿದ್ದು, 50 ವರ್ಷದ ಶಿಗ್ಗಾಂವಿಯ ತಹಶೀಲ್ದಾರರಿಗೆ ಸೇರಿದಂತೆ ಐದು ಜನ ಕುಟುಂಬ ಸದಸ್ಯರಿಗೂ ಸಹ ಕೊರೊನಾ ಸೋಂಕು ಧೃಡಪಟ್ಟಿದೆ.

ಹಾವೇರಿ ತಾಲೂಕಿನಲ್ಲಿ 9 ಜನರಿಗೆ ವಕ್ಕರಿಸಿದ್ದು 44 ವರ್ಷದ ದಿನಪತ್ರಿಕೆಯ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಸಹ ಸೋಂಕು ಧೃಡಪಟ್ಟಿದೆ. ರಾಣೆಬೆನ್ನೂರು ತಾಲೂಕಿನ ಐವರಿಗೆ ವಕ್ಕರಿಸಿದ್ದು, ಆಸ್ಪತ್ರೆಯ 44 ವರ್ಷದ ಎಫ್.ಡಿ.ಸಿ ಹಾಗೂ 33 ವರ್ಷದ ಸ್ಟಾಪ್ ನರ್ಸ್ ಗೂ ಕೊರೊನಾ ತಗುಲಿದೆ. ಸವಣೂರು ಮತ್ತು ಹಾನಗಲ್ ತಾಲೂಕಿನಲ್ಲಿ ತಲಾ ಐವರಿಗೆ ಸೋಂಕು ಧೃಡಪಟ್ಟಿದೆ. ಹಾವೇರಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 459ಕ್ಕೆ ಏರಿದೆ.ಕೊರೊನಾ ಸೋಂಕಿಗೆ ಇಬ್ಬರು ಮೃತಪಟ್ಟಿದ್ದಾರೆ. ಹಾನಗಲ್ ತಾಲೂಕಿನ ಬಸಾಪುರ ಗ್ರಾಮದ 25 ವರ್ಷದ ಯುವಕನಿಗೆ ಜುಲೈ 17,ರಂದು ಸೋಂಕು ಧೃಡಪಟ್ಟಿತ್ತು, ಶಿಗ್ಗಾಂವಿ ತಾಲೂಕಿನ ಬಂಕಾಪುರದ ನಿವಾಸಿ 47 ವರ್ಷದ ವ್ಯಕ್ತಿ ಸಹ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಇಬ್ಬರು ಮೃತಪಟ್ಟಿದ್ದು ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಮರಣ ಸಂಖ್ಯೆ ಹನ್ನೊಂದಕ್ಕೆ ಏರಿದೆ.


Spread the love

About Laxminews 24x7

Check Also

ಮುಳುಗಿದ ಲೋಳಸೂರ ಸೇತುವೆ: ಡಿಸಿ ಮೊಹಮ್ಮದ್ ರೋಷನ್ ಪರಿಶೀಲನೆ

Spread the loveಬೆಳಗಾವಿ: ಘಟಪ್ರಭಾ ಹಾಗೂ ಮಾರ್ಕಂಡೇಯ ನದಿಗಳಿಂದ‌ ಮುಳುಗಡೆ ಆಗುವ ನಾಲ್ಕು ಸೇತುವೆಗಳನ್ನು ಹೊಸದಾಗಿ ನಿರ್ಮಿಸುವ ಯೋಜನೆ ಇದೆ. ಇದಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ