Breaking News

ಪಾಸಿಟಿವ್ ಬಂದ ಕುಟುಂಬದವ್ರ ಜೊತೆ ಕ್ವಾರಂಟೈನ್‍ಗೆ ಪಂಚಾಯತ್ ಸದಸ್ಯ ವಿರೋಧ

Spread the love

ಬಾಗಲಕೋಟೆ: ಪಾಸಿಟಿವ್ ಬಂದ ಮನೆಯವರು ಹಾಗೂ ಪಕ್ಕದ ಮನೆಯವರನ್ನು ಒಂದೇ ಕಡೆ ಕ್ವಾರಂಟೈನ್ ಮಾಡಿರೋದಕ್ಕೆ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಇತರೆ ಎರಡು ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ ಪ್ರಸಂಗ ನಡೆದಿದೆ.

ಈ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್ ನಲ್ಲಿರುವ ಕ್ವಾರಂಟೈನ್ ಸೆಂಟರ್ ಆವರಣದಲ್ಲಿ ನಡೆದಿದೆ. ಕ್ವಾರಂಟೈನ್ ಸೆಂಟರ್ ಆವರಣದಲ್ಲಿ ಗುಡಿಸಲು ಹಾಕಿಕೊಂಡು ಕುಳಿತ ಕುಳಗೇರಿ ಕ್ರಾಸ್ ಗ್ರಾಪಂ ಸದಸ್ಯ ಹನುಮಂತ ನರಗುಂದ ಪ್ರಸನ್ನ ಹಾಗೂ ಮಂಜುನಾಥ ಎಂಬವರು ಒಂದೇ ಕಡೆ ಕ್ವಾರಂಟೈನ್ ಆಗಲು ವಿರೋಧ ಮಾಡ್ತಿದಾರೆ.

ಕುಳಗೇರಿ ಕ್ರಾಸ್‍ನಲ್ಲಿ ಗ್ರಾಪಂ ಸದಸ್ಯನ ಪಕ್ಕದ ಮನೆಯ ಓರ್ವ ವ್ಯಕ್ತಿಗೆ ಪಾಸಿಟಿವ್ ಬಂದಿದೆ. ಪಾಸಿಟಿವ್ ವ್ಯಕ್ತಿಯ ಕುಟುಂಬಸ್ಥರನ್ನು ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ಇರಿಸಿದ್ದಾರೆ. ಅದೇ ಕ್ವಾರಂಟೈನ್ ಕೇಂದ್ರದಲ್ಲಿ ತಮ್ಮನ್ನು ಸೇರಿಸೋದಕ್ಕೆ ಗ್ರಾಮ ಪಂಚಾಯತಿ ಸದಸ್ಯ ವಿರೋಧ ಮಾಡಿದ್ದಾನೆ.

ಅಲ್ಲದೆ ಪಾಸಿಟಿವ್ ಬಂದವನ ಮನೆಯವರಿಗೆ ಸೋಂಕಿನ ಲಕ್ಷಣಗಳಿವೆ. ಆದ್ದರಿಂದ ನಮ್ಮನ್ನು ಬೇರೆ ಕಡೆ ಕ್ವಾರಂಟೈನ್ ಮಾಡಿ. ಯಾವುದೇ ಕಾರಣಕ್ಕೂ ನಾವು ಒಳಗೆ ಹೋಗೋದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.


Spread the love

About Laxminews 24x7

Check Also

ಬಾಗಲಕೋಟೆ ಜಿಲ್ಲೆಯ ಬಾಡಗಂಡಿಯಲ್ಲಿ ಇಂದು ಶ್ರೀ ಎಸ್.ಆರ್. ಪಾಟೀಲ ಸಮೂಹ ಸಂಸ್ಥೆಗಳು ಮತ್ತು ಬಾಡಗಂಡಿ ಶಾಖೆಯ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ನಿಯಮಿತ ಸಂಸ್ಥೆಯ ರಜತ ಮಹೋತ್ಸ

Spread the love ಬಾಗಲಕೋಟೆ ಜಿಲ್ಲೆಯ ಬಾಡಗಂಡಿಯಲ್ಲಿ ಇಂದು ಶ್ರೀ ಎಸ್.ಆರ್. ಪಾಟೀಲ ಸಮೂಹ ಸಂಸ್ಥೆಗಳು ಮತ್ತು ಬಾಡಗಂಡಿ ಶಾಖೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ