ಸವದಿಗೂ ನನಗೂ ಮುಸುಕಿನ ಗುದ್ದಾಟ ಅಲ್ಲ ಒಪನ್ ಗುದ್ದಾಟವಿದೆ:ಶಾಸಕ ರಮೇಶ ಜಾರಕಿಹೊಳಿ
ಲಕ್ಷ್ಮಣ ಸವದಿಗೂ ನಮಗೂ ಮುಸುಕಿನ ಗುದ್ದಾಟವಿಲ್ಲ ಓಪನ್ ಗುದ್ದಾಟ ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಅವರು ಶನಿವಾರದಂದು ಕಾಗವಾಡ ತಾಲ್ಲೂಕಿನ ಕೆಂಪವಾಡದಲ್ಲಿ ಮಾಜಿ ಸಚಿವ ಶ್ರೀಮಂತ ಪಾಟೀಲ್ ಹುಟ್ಟುಹಬ್ಬದ ಪ್ರಯುಕ್ತ ಶುಭ ಕೋರಲು ಬಂದಿದ್ದ ವೇಳೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ನನ್ನ ಹಿತೈಸಿಗಳು ನನಗೆ ಅಥಣಿಯಲ್ಲಿ ಮಾತನಾಡಬಾರದು ಎಂದು ಹೇಳಿದ್ದಾರೆ.ನಾನು ಮಾತನಾಡಿದರೆ ಹೊರಗಿವರು ಎಂದು ಹೇಳುತ್ತಾರೆ ಎಂದ ಅವರು,ಇದರ ಬಗ್ಗೆ ಈಗ ಮಾತನಾಡದೇ ಚುನಾವಣೆ ಸಂದರ್ಭದಲ್ಲಿ ಎಳೆಎಳೆಯಾಗಿ ಮಾತನಾಡುತ್ತೇನೆ ಎಂದು ಹೇಳಿದರು.
ಲಕ್ಷ್ಮಣ ಸವದಿ ಬಿಜೆಪಿಗೆ ಬರುತ್ತಾರೆ ಹೇಳಿಕೆಗೆ ಮಾತನಾಡಿ,ನಮ್ಮಲ್ಲೇ ಘಟಾನುಘಟಿ ನಾಯಕರು ಇರುವಾಗ ಅಂತಹವರ ಅವಶ್ಯಕತೆ ನಮಗಿಲ್ಲ.ನನಗಂತೂ ಮೊದಲೇ ಅವಶ್ಯಕತೆ ಇಲ್ಲ ಹೈಕಮಾಂಡಗೆ ಬೇಕಾದರೆ ನಾವೇನೂ ಹೇಳೊದಿಲ್ಲ ಎಂದರು.
ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಕೊರತೆಯಾಗದಂತೆ ಕೃಷ್ಣಾ ನದಿಗೆ ಮಹಾರಾಷ್ಟ್ರದಿಂದ ನೀರು ಬಿಡಿಸಿಕೊಂಡು ನಮ್ಮ ಬಿಜೆಪಿ ನಿಯೋಗ ಮನವಿ ಮಾಡಿಕೊಳ್ಳಲಿದೆ ಎಂದು ಹೇಳಿದರು.
ನಂತರ ಶ್ರೀಮಂತ ಪಾಟೀಲ್ ಮಾತನಾಡಿ,ಕಾಗವಾಡ ಹಾಗೂ ಅಥಣಿ ಭಾಗದ ಕಡುಬಡವರಿಗೆ ಅನುಕೂಲವಾಗಲಿ ಎಂದು ಉಚಿತ ಆರೋಗ್ಯ ಶಿಬಿರವನ್ನು ಪ್ರತಿ ವರ್ಷದಂತೆ ಆಯೋಜಿಸಲಾಗಿದ್ದು,ಇದರಲ್ಲಿ ಹೃದಯ ರೋಗಕ್ಕೆ ಸಂಭಂಧಿಸಿದ,ಉಪಚಾರ ಹಾಗೂ ಶಸ್ತ್ರ ಚಿಕಿತ್ಸೆ ಒಳಗೊಂಡ ಅನೇಕ ಕಾಯಿಲೆಗಳಿಗೆ ತಪಾಸಣೆ ಮಾಡಲಾಯಿತು. ಇದರಿಂದ ಸಾವಿರಾರು ಜನ ಲಾಭ ಪಡೆದಿದ್ದರಿಂದ ಸಂತಸ ತಂದಿದೆ.
ಹಿಪ್ಪರಗಿ ಬ್ಯಾರೇಜ್ ಗೇಟ್ ಮುರಿದು ಮೂರು ನೀರು ಟಿಎಂಸಿ ಪೋಲಾಗಿದ್ದರಿಂದ ಐವತ್ತು ಲಕ್ಷ ಟನ್ ಕಬ್ಬಿಗೆ ತೊಂದರೆಯಾಗಲಿದೆ.ಇದರಿಂದ 12 ರಿಂದ 15 ಸಾವಿರ ಕೋಟಿ ರೂಪಾಯಿ ರೈತರ ಬೆಳೆ ನಷ್ಟವಾಗಲಿದೆ.ಕಾರಣ ಮಹಾರಾಷ್ಟ್ರ ಸರ್ಕಾರದಿಂದ ಆಡಳಿತ ಸರ್ಕಾರ ನೀರು ಹರಿಸುವ ಪ್ರಯತ್ನ ಪಡಲೇಬೇಕು ಇಲ್ಲದಿದ್ದರೆ ಗಂಡಾಂತರವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ನಂತರ ಮಾಜಿ ಶಾಸಕ ಮಹೇಶ್ ಕುಮಟಳ್ಳಿ ಮಾತನಾಡಿ,ಅಥಣಿ ಮತ್ತು ಕಾಗವಾಡ ಮತಕ್ಷೇತ್ರದಲ್ಲಿ ನಾನು ಮತ್ತು ಶ್ರೀಮಂತ ಪಾಟೀಲ್ ಜೊತೆಗೂಡಿ,ನಮ್ಮ ಆಡಳಿತ ಸಮಯದಲ್ಲಿ ಕೃಷ್ಣಾ ನದಿ ಯಾವತ್ತೂ ನೀರು ಬತ್ತದೆ ಹಾಗೆ ನೋಡಿಕೊಂಡಿದ್ದೇವೆ ಈಗಲೂ ಸಹಿತ ಶಾಸಕ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ನಿಯೋಗ ತೆಗೆದುಕೊಂದು ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡು ನೀರು ಹರಿಸುವ ಪಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.
ಶ್ರೀನಿವಾಸ ಪಾಟೀಲ್, ಯೋಗೇಶ ಪಾಟೀಲ್, ಸುಶಾಂತ ಪಾಟೀಲ್, ದಾದಾ ಪಾಟೀಲ್, ಬಾಹುಸಾಬ ಜಾಧವ,ನಾನಾಸಾಬ ಅವತಾಡೆ,ಅಪ್ಪಾಸಾಬ ಅವತಾಡೆ,ಅಬ್ದುಲ ಬಾರಿ ಮುಲ್ಲಾ,ರಾಜು ಪೊತದಾರ,ಆರ್ ಎಮ್ ಪಾಟೀಲ್, ಅರುಣ ಗಣೇಶವಾಡಿ,ಶಿವಾನಂದ ಬುರ್ಲಿ ಸೇರಿದಂತೆ ಅನೇಕರು ಇದ್ದರು.
Laxmi News 24×7