Breaking News

ದೇಶದ ಅಭಿವೃದ್ಧಿ ಪ್ರಧಾನ ಮಂತ್ರವಾಗಲಿ: ಎಸ್.ಆರ್ ಮೂಗನೂರಮಠ

Spread the love

ಬಾಗಲಕೋಟೆ: ರಾಷ್ಟ್ರೀಯ ಹಬ್ಬಗಳು ನಮ್ಮ ಹೆಮ್ಮೆಯ ಸಂಕೇತಗಳಾಗಿದ್ದು ಗಣರಾಜ್ಯೋತ್ಸವ ಕೇವಲ ಐತಿಹಾಸಿಕ ದಿನವಾಗಿರದೆ ಜಗತ್ತಿನಲ್ಲಿಯೇ ಪ್ರಜಾಪ್ರಭುತ್ವ ಕ್ರೂಡೀಕೃತ ಲಿಖಿತ ಸಂವಿಧಾನಕ್ಕೆ ನಮ್ಮನ್ನು ನಾವು ಸಮರ್ಪುಸಿಕೊಂಡಿರುವ ಪ್ರತೀಕವಾಗಿದೆ ಎಂದು ಪ್ರಾಚಾರ್ಯರಾದ ಎಸ್. ಆರ್ ಮೂಗನೂರಮಠ ಹೇಳಿದರು.

ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ 77ನೇ ಗಣರಾಜ್ಯೊತ್ಸವದ ನಿಮಿತ್ಯ ಧ್ವಜಾರೋಹಣ ಮಾಡಿ ಮಾತನಾಡಿದ ಅವರು ಸರ್ವೋತ್ತಮ ಮೌಲ್ಯಗಳನ್ನು ಅಳವಡಿಸಿ ಸಂವಿಧಾನಕ್ಕೆ ಪ್ರಜ್ವಲ ಹೊಳಪು ನೀಡಿದ ದಿನವಾದ ಇಂದು ದೇಶದ ಐಕ್ಯತೆಗಾಗಿ ಬಲಿದಾನಗೈದ ಎಲ್ಲರನ್ನು ಸ್ಮರಿಸಬೇಕು ಸಮಾನತೆ ಮತ್ತು ಸಮಗ್ರತೆಗಳನ್ನು ಮತ್ತಷ್ಟು ಗಟ್ಟಿಗೊಳಿಸಲು ಅನಿಯಾಗೋಣ. ಇಂದಿನ ಯುವ ಶಕ್ತಿ ಜವಾಬ್ದಾರಿಯುತ ನಾಗರಿಕರಾಗಿ ನೂತನ ಸಂಶೋಧನಾ ಜೀವನಕ್ಕೆ ಅಳವಡಿಸಿಕೊಂಡ ವಿವಿಧ ಕ್ಷೇತ್ರಗಳಲ್ಲಿ ನಾಯಕತ್ವದ ಗುಣಗಳನ್ನು ಬೆಳಸಿಕೊಳ್ಳುವದರ ಮೂಲಕ ದೇಶದ ಸಮಗ್ರತೆಗೆ ಪಣ ತೊಡಬೇಕು ಎಂದು ಕರೆ ನೀಡಿದರು.

ದೇಶವು ಅಭಿವೃದ್ಧಿ ಪಥದಲ್ಲಿ ದಾಪುಗಾಲು ಇಡುತ್ತಿರುವುದು ಹೆಮ್ಮೆಯ ವಿಷಯವಾಗಿದ್ದು ತಂತ್ರಜ್ಞಾನ ಮತ್ತು ಸಂಪರ್ಕ ಕ್ರಾಂತಿಯು ಹಳ್ಳಿಗಳ ಕಟ್ಟಕಡೆಯ ರೈತರಿಗೂ ತಲುಪಿದ್ದು ಯಾಂತ್ರಿಕತೆಯಲ್ಲಿ ಕ್ಷಿಪ್ರ ಕ್ರಾಂತಿಯಾಗಿದ್ದು ಸ್ವಾಗತಾರ್ಹ. ನವನವೀನ ತಂತ್ರಜ್ಞಾನದ ಮೂಲಕ ಕೃಷಿ ಉತ್ಪಾದನೆಗಳನ್ನು ಅಧಿಕಗೊಳಿಸಿ ದೇಶದ ಆಹಾರ ಭದ್ರತೆಗೆ ಬಲವನ್ನು ನೀಡುತ್ತಿರುವ ರೈತರನ್ನೂ ಈ ಸಂದರ್ಭದಲ್ಲಿ ಸ್ಮರಿಸಬೇಕು. ಎಐ ಮತ್ತು ನ್ಯಾನೋ ತಂತ್ರಜ್ಞಾನವು ದೇಶದೆಲ್ಲೆಡೆ ವ್ಯಾಪಕ ಬಳಕೆಯಾಗುತ್ತಿದ್ದು ಶ್ರಮವನ್ನು ಕಡಿಮೆಗೊಳಿಸಿ ಅಭಿವೃದ್ಧಿ ಉತ್ತೇಜಕವಾಗಿರುವುದು ಹೆಮ್ಮೆಯ ಸಂಗತಿ ಎಂದರು.

ದೇಶದೊಂದಿಗೆ ಶಿಕ್ಷಣದಲ್ಲೂ ಅಭಿವೃದ್ದಿ ಕ್ರಾಂತಿಯಾಗುತ್ತಿದೆ. ನವೀನ ಶಿಕ್ಷಣ ಪದ್ದತಿಗೆ ನಮ್ಮ ಮಹಾವಿದ್ಯಾಲಯವು ಸಮರ್ಪಕವಾಗಿ ಮೈಯೊಡ್ಡಿ ಕಾರ್ಯನಿರ್ವಹಿಸುತ್ತಿದ್ದು ಪಾರಂಪರಿಕ ಭೋದನೆಯಿಂದ ಕಂಪ್ಯೂಟರ್ ಆಧಾರಿತ ಭೋದನೆ ಮತ್ತು ಎಲ್.ಸಿಡಿ ಪ್ರಾಜೆಕ್ಟರ್ ಹಾಗೂ ಸ್ಮಾರ್ಟ್ ಬೋರ್ಡ್ ಬಳಕೆ ಆಧಾರಿತ ಬೋಧನಾ ಕ್ರಮಗಳು ಜರಗುತ್ತಿವೆ. ರಾಷ್ಟ್ರದ ಹಿತವೇ ನಮ್ಮ ಹಿತ ಎಂಬ ಮನೋಭಾವನೆಯನ್ನು ಎಲ್ಲರೂ ಬೆಳಸಿಕೊಳ್ಳುವುದರ ಮೂಲಕ ದೇಶಕ್ಕಾಗಿ ದುಡಿಯೋನ ಎಂದರು.

ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಎಲ್ಲ ವಿಭಾಗದ ಪ್ರಾಧ್ಯಾಪಕರು, ಎನ್.ಎಸ್.ಎಸ್ ಮತ್ತು ಎನ್.ಸಿಸಿ ಅಭ್ಯರ್ಥಿಗಳು, ವಿದ್ಯಾರ್ಥಿಗಳು ಹಾಗೂ ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.


Spread the love

About Laxminews 24x7

Check Also

ಬಾಗಲಕೋಟೆ ಜಿಲ್ಲೆಯ ಬಾಡಗಂಡಿಯಲ್ಲಿ ಇಂದು ಶ್ರೀ ಎಸ್.ಆರ್. ಪಾಟೀಲ ಸಮೂಹ ಸಂಸ್ಥೆಗಳು ಮತ್ತು ಬಾಡಗಂಡಿ ಶಾಖೆಯ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ನಿಯಮಿತ ಸಂಸ್ಥೆಯ ರಜತ ಮಹೋತ್ಸ

Spread the love ಬಾಗಲಕೋಟೆ ಜಿಲ್ಲೆಯ ಬಾಡಗಂಡಿಯಲ್ಲಿ ಇಂದು ಶ್ರೀ ಎಸ್.ಆರ್. ಪಾಟೀಲ ಸಮೂಹ ಸಂಸ್ಥೆಗಳು ಮತ್ತು ಬಾಡಗಂಡಿ ಶಾಖೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ