Breaking News

ಲಕ್ಕುಂಡಿ ಉತ್ಖನನ – ಹಸಿರು ಬಣ್ಣದ ನಾಗರ ಶಿಲೆ, ಮಣ್ಣಿನ ಬಿಲ್ಲೆ, ಮೂಳೆ ಪತ್ತೆ

Spread the love

ಗದಗ: ಲಕ್ಕುಂಡಿಯಲ್ಲಿ  6ನೇ ದಿನದ ಉತ್ಖನನ ಕಾರ್ಯ ಭರದಿಂದ ಸಾಗಿದೆ. ಉತ್ಖನನ ವೇಳೆ ಹಸಿರು ಬಣ್ಣದ ನಾಗರಶಿಲೆ, ಸುಟ್ಟ ಮಣ್ಣಿನ ಬಿಲ್ಲೆ ಹಾಗೂ ಮೂಳೆಗಳು ಪತ್ತೆಯಾಗಿವೆ. ಹಸಿರು ಬಣ್ಣದಲ್ಲಿ ನಾಗರ ಶಿಲೆ ಪತ್ತೆಯಾಗಿರುವುದು ಅಚ್ಚರಿ ಮೂಡಿಸಿದೆ. ಅಲ್ಲದೇ ಈ ಶಿಲೆ ಪತ್ತೆಯಾಗಿದ್ದು ನಿದಿ ಇದೆ ಎಂಬ ಸೂಚನೆ ಎನ್ನಲಾಗುತ್ತಿದೆ.

ಉತ್ಖನನ ಜಾಗದ 01ನೇ ಬ್ಲಾಕ್ ನಲ್ಲಿ ಆರೇಳು ಚಿಕ್ಕ ಚಿಕ್ಕ ಮೂಳೆಯ ತುಂಡುಗಳು ಪತ್ತೆಯಾಗಿವೆ. ಸಿಕ್ಕ ಆ ಮೂಳೆಯ ತುಂಡನ್ನು ಚಿಕ್ಕ ಪ್ಲಾಸ್ಟಿಕ್ ಪ್ಯಾಕೇಟ್‌ನಲ್ಲಿ ಸೀಲ್ ಮಾಡಿ ಅಧಿಕಾರಿಗಳು ತೆಗೆದಿಟ್ಟಿದ್ದಾರೆ. ಪುರಾತತ್ವ ಇಲಾಖೆಯ ಅಧಿಕಾರಿಗಳು, ಮೇಲ್ವಿಚಾರಕರು ಇದರ ಬಗ್ಗೆ ಪರಿಶೀಲನೆಗೆ ಮುಂದಾಗಿದ್ದಾರೆ. ಈ ಮೂಳೆ ಮಾನವರದ್ದಾ? ಪ್ರಾಣಿಗಳದ್ದಾ? ಅಥವಾ ಯಾವುದಾದರೂ ಪಕ್ಷಿಯದ್ದಾ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕಾಗಿದೆ.

ಜ.20 ರಂದು ಶಿವಲಿಂಗದ ಪಾಣಿಪೀಠ ಪೂರ್ಣ ಭಾಗ ಹೊರತೆಗೆಯಲಾಗಿತ್ತು. ಜೊತೆಗೆ ದೊಡ್ಡ ಮಡಿಕೆಯ ಒಂದು ಭಾಗ ಪತ್ತೆಯಾಗಿತ್ತು. ಇವತ್ತು ಈಗಾಗಲೇ ಸುಮಾರು 6 ಅಡಿಯಷ್ಟು ಆಳಕ್ಕೆ ಅಗೆಯಲಾಗಿದೆ. ಭೂಗರ್ಭ ಅಗೆದಷ್ಟು ಅನೇಕ ಅವಶೇಷಗಳು ಪತ್ತೆಯಾಗುತ್ತಿವೆ. ಈ ಮೂಲಕ ದಿನದಿಂದ ದಿನಕ್ಕೆ ಸಾಕಷ್ಟು ಕುತೂಹಲ ಮೂಡಿಸುತ್ತಿದೆ


Spread the love

About Laxminews 24x7

Check Also

ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ: ಅಭಿಮಾನಿಗಳ ಮನೆಗಳಿಗೆ ಯಶ್​ ಭೇಟಿ

Spread the love ಗದಗ: ರಾಕಿಂಗ್ ಸ್ಟಾರ್ ಯಶ್ (Rocking star Yash) ಜನ್ಮದಿನದ ಹಿನ್ನೆಲೆಯಲ್ಲಿ ತಮ್ಮ ಊರಿನ ಬೀದಿಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ