ಪಾಂಡವಪುರ,ಜು.12ವಿದ್ಯುತ್ ಉತ್ಪಾದನೆ ,ಡಿಸ್ಟಿಲರಿ ಆರಂಭ ಸೇರಿದಂತೆ ಎಲ್ಲಾ ಉಪ ಉತ್ಪನ್ನಗಳ ತಯಾರಿಸಿ ಕಬ್ಬು ಬೆಳೆಗಾರರಿಗೆ ಹಾಗೂ ಕಾರ್ಮಿಕರಿಗೆ ಹೆಚ್ಚಿನ ಹಣಪಾವತಿಸುವುದು ತಮ್ಮ ಸಂಕಲ್ಪ ಮಾಜಿ ಸಚಿವ ಮುರುಗೇಶ್ ನಿರಾಣಿ ಭರವಸೆ ನೀಡಿದರು.
ಪಿಎಸ್ ಎಸ್ ಕೆ ಯಲ್ಲಿ ಕಾರ್ಮಿಕರು ಹಾಗೂ ರೈತ ಮುಖಂಡರನ್ನು ಉದ್ದೇಶಿಸಿ ಅವರು ಮಾತನಾಡಿದರು. ಈ ಕಾರ್ಖಾನೆಯಲ್ಲಿ ಕಸ ಗುಡಿಸುವವರಿಂದ ಹಿಡಿದು ಮುಖ್ಯ ತಂತ್ರಜ್ಞರು ಸೇರಿದಂತೆ ಎಲ್ಲರೂ ಒಂದೇ ಕುಟುಂಬದವರಂತೆ ,ನಾಟಕದಲ್ಲಿ ಬರುವಂತೆ ಎಲ್ಲರದೂ ಒಂದೊಂದು ಪಾತ್ರ .ನಾನು ಹೆಚ್ಚು ನೀನು ಕಡಿಮೆ ಎಂಬ ಭೇದ ಭಾವವಿಲ್ಲ .ಎಲ್ಲರೂ ಬದ್ದತೆಯಿಂದ ಕೆಲಸ ಮಾಡಿ ಸೂರ್ಯ ಚಂದ್ರರು ಇರುವ ತನಕ ಕಾರ್ಖಾನೆ ನಡೆಸಬೇಕು ಎಂದರು.
ರಾಜ್ಯದಲ್ಲಿ ಬೇರೆ ಬೇರೆ ಸಕ್ಕರೆ ಕಾರ್ಖಾನೆಗಳು ಏಕೆ ಬಂದ್ ಆದವು ಎಂಬುದರ ಬಗ್ಗೆ ನಾನು ಕಾರಣಗಳನ್ನು ಹೇಳುವುದಿಲ್ಲ . ಇದನ್ನು ಅರಿತು ನೀವು ಬದ್ಧತೆಯಿಂದ ಶ್ರಮವಹಿಸಿ ಕೆಲಸ ಮಾಡಬೇಕು.
ವಿದ್ಯುತ್ ಉತ್ಪಾದನೆ ,ಡಿಸ್ಟಿಲರಿ ಆರಂಭ ಸೇರಿದಂತೆ ಕಬ್ಬಿನ ಎಲ್ಲಾ ಉಪ ಉತ್ಪನ್ನಗಳನ್ನು ತಯಾರಿಸಿ ರೈತರಿಗೆ ಹೆಚ್ಚು ಬಟವಾಡೆ ನೀಡಬೇಕು ಹಾಗೂ ಕಾರ್ಮಿಕರಿಗೆ ಹೆಚ್ಚು ಸಂಬಳ ನೀಡಬೇಕು ಎಂಬುದು ನನ್ನ ಧ್ಯೇಯ ಈ ಗುರಿಯೊಂದಿಗೆ ನಾವು ಮುನ್ನಡೆಯಬೇಕು ಎಂದು ನಿರಾಣಿ ಹೇಳಿದರು
Laxmi News 24×7