ಅಥಣಿ,ಅಕ್ಟೋಬರ್ 26ರಂದು ಕೃಷ್ಣಾ ಸಕ್ಕರೆ ಕಾರ್ಖಾನೆ ಚುನಾವಣೆಗೆ ಸಜ್ಜು — ಸ್ವಾಭಿಮಾನಿ ರೈತ ಪ್ಯಾನೆಲ್ ಮತಯಾಚನೆಗೆ ವೇಗ
ಅಥಣಿ: ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಚುನಾವಣೆಯು ಅಕ್ಟೋಬರ್ 26, 2025ರಂದು ನಡೆಯಲಿದ್ದು, ಚುನಾವಣೆಯನ್ನು ಮುನ್ನೆಚ್ಚರಿಕೆಯಿಂದ ಸ್ವಾಭಿಮಾನಿ ರೈತ ಪ್ಯಾನೆಲ್ ಸಜ್ಜಾಗಿದೆ.
ಪ್ಯಾನೆಲ್‌ನ ನಾಯಕರು ಹಾಗೂ ಬೆಂಬಲಿಗರು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಪ್ರಚಾರ ನಡೆಸುತ್ತಿದ್ದು, “ರೈತರ ಹಿತದೃಷ್ಟಿಯಿಂದ ನಿಷ್ಠಾವಂತ ಆಡಳಿತಕ್ಕಾಗಿ ಸ್ವಾಭಿಮಾನಿ ರೈತ ಪ್ಯಾನೆಲ್‌ಗೆ ಮತ ನೀಡಿ ಆಶೀರ್ವಾದ ಮಾಡಬೇಕು” ಎಂದು ರೈತರನ್ನು ವಿನಂತಿಸುತ್ತಿದ್ದಾರೆ.
ರೈತರ ಹಕ್ಕು, ಶ್ರೇಷ್ಠತೆ ಹಾಗೂ ಕಾರ್ಖಾನೆ ಉಳಿವಿನ ಹೋರಾಟವನ್ನು ಮುಂದುವರಿಸಲು ಈ ಪ್ಯಾನೆಲ್ ಬದ್ಧವಾಗಿದೆ ಎಂದು ಹೇಳಲಾಗಿದೆ.
ಕಾರ್ಖಾನೆ ಆಡಳಿತದ ಭವಿಷ್ಯ ನಿರ್ಧರಿಸುವ ಈ ಚುನಾವಣೆಯಲ್ಲಿ ರೈತರಿಂದ ಉತ್ತಮ ಮತದಾನ ನಿರೀಕ್ಷಿಸಲಾಗಿದೆ.
ಚುನಾವಣೆ ದಿನಾಂಕ: 26-10-2025
ಸ್ಥಳ: ಕೃಷ್ಣಾ ಸಕ್ಕರೆ ಕಾರ್ಖಾನೆ
ಸ್ವಾಭಿಮಾನಿ ರೈತ ಪ್ಯಾನೆಲ್ – ರೈತರ ಧ್ವನಿ, ರೈತರ ಗೆಲುವು!