ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ಷಡ್ಯಂತ್ರ, ಅಪಪ್ರಚಾರ ವಿಚಾರ
ಕುಂದಾನಗರಿ ಬೆಳಗಾವಿಯಲ್ಲಿ ಧರ್ಮಸ್ಥಳ ಭಕ್ತರಿಂದ ಬೃಹತ್ ಪ್ರತಿಭಟನೆ
ನಗರದ ಚೆನ್ನಮ್ಮ ವೃತ್ತದಿಂದ ಡಿಸಿ ಕಚೇರಿ ವರೆಗೂ ಪ್ರತಿಭಟನಾ ರ್ಯಾಲಿ.
ಧರ್ಮಸ್ಥಳದ ಭಕ್ತಾಭಿಮಾನಿಗಳ ವೇದಿಕೆಯಿಂದ ಹೋರಾಟ
ಸರ್ಕಾರವೇ ರಚಿಸಿರೋ ಎಸ.ಐ.ಟಿ ತನಿಖೆ ನಡೆಸುತ್ತಿದೆ
ಈವರೆಗೂ ಈ ತನಿಖಾ ತಂಡ ಇನ್ನೂ ಸರ್ಕಾರಕ್ಕೆ ವರದಿಯೇ ಕೊಟ್ಟಿಲ್ಲ
ಧರ್ಮಸ್ಥಳ ಮಂಜುನಾಥ ಸ್ವಾಮಿ, ಡಾ.ವೀರೇಂದ್ರ ಹೆಗ್ಗಡೆ ಕುಟುಂಬಸ್ಥರ ವಿರುದ್ಧ ನಿರಾಧಾರ ಆರೋಪ ಮಾಡಿದ್ದಾರೆ
ಗಿರೀಶ್ ಮಟ್ಟಣ್ಣವರ, ಮಹೇಶ ಶೆಟ್ಟಿ ತಿಮರೋಡಿ, ಸಮೀರ್ ಎಂ.ಡಿ, ಜಯಂತ ಟಿ ಸೇರಿ ಹಲವರು ಅಪ್ರಚಾರ ಮಾಡ್ತಿದ್ದಾರೆ
ಧರ್ಮಸ್ಥಳ ಮತ್ತು ಹೆಗ್ಗಡೆ ಕುಟುಂಬದ ಬಗ್ಗೆ ಅಪಪ್ರಚಾರ ಮಾಡ್ತಿರೋರ ಬಗ್ಗೆ ಸರ್ಕಾರ ಕ್ರಮ ಜರುಗಿಸಬೇಕು
ಇವರ ಹಿಂದೆ ಯಾರಿದ್ದಾರೇ, ಅವರಿಗೆ ಹಣದ ನೆರವು ಕೊಡ್ತಿರೋರು ಯಾರು ಎಂಬುದನ್ನ ತನಿಖೆ ಮಾಡಬೇಕು
ಇವರ ವಿರುದ್ಧ ಕೇಸ್ ದಾಖಲಿಸಿ ಅರೇಸ್ಟ್ ಮಾಡಬೇಕೆಂದು ಆಗ್ರಹ
ಕೈಯಿಂದ ಬಿತ್ತಿಪತ್ರ ಹಿಡಿದು ಧರ್ಮಸ್ಥಳ ಭಕ್ತಾಭಿಮಾನಿಗಳಿಂದ ಆಕ್ರೋಶ
Laxmi News 24×7