ಅಂತರರಾಜ್ಯ ಈಜು ಸ್ಪರ್ಧೆಯಲ್ಲಿ ಬೆಳಗಾವಿಯ ಈಜುಪಟುಗಳ ಸಾಧನೆ
ಇತ್ತೀಚೆಗೆ ಗೋವಾ ಫೊಂಡಾದಲ್ಲಿರುವ ಸಡಾ ಅಂತರರಾಷ್ಟ್ರೀಯ ಈಜು ಕೊಳದಲ್ಲಿ ಫಿಟ್ ಫಾರ್ ಲೈಫ್ ಸಂಸ್ಥೆಯ ವತಿಯಿಂದ ಆಯೋಜಿಸಲಾದ ಆಹ್ವಾನಿತ ಅಂತರರಾಜ್ಯ ಈಜು ಸ್ಪರ್ಧೆಯಲ್ಲಿ ಬೆಳಗಾವಿಯ ಆಬಾ ಮತ್ತು ಹಿಂದ್ ಸ್ಪೋರ್ಟ್ಸ್ ಕ್ಲಬ್‌ನ ಈಜುಗಾರರು ಉತ್ತಮ ಸಾಧನೆಯನ್ನು ಮಾಡಿದ್ದಾರೆ.
ಮೂರು ವೈಯಕ್ತಿಕ ಚಾಂಪಿಯನ್‌ಶಿಪ್‌ಗಳೊಂದಿಗೆ 28 ಬಂಗಾರ, 19 ಬೆಳ್ಳಿಯ ಹಾಗೂ 17 ಕಂಚಿನ ಪದಕಗಳನ್ನು ಗೆದ್ದು ಒಟ್ಟು 64 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಈ ಸ್ಪರ್ಧೆಯಲ್ಲಿ ಮಕ್ಕಳ ಗುಂಪು 3ರಲ್ಲಿ ಕುಮಾರ ಮೋಹಿತ್ ಕಾಕತ್ಕರ್, ಗುಂಪು 3ರ ಬಾಲಿಕೆಯಲ್ಲಿ ಕುಮಾರಿ ಆರೋಹಿ ಅವಸ್ಥಿ ಹಾಗೂ ಗುಂಪು 5ರಲ್ಲಿ ಕುಮಾರ ಹರ್ಷವರ್ಧನ್ ಕಾರ್ಳೇಕರ್ ಅವರು ತಮ್ಮ-ತಮ್ಮ ಗುಂಪುಗಳಲ್ಲಿ ವೈಯಕ್ತಿಕ ಚಾಂಪಿಯನ್‌ಶಿಪ್ ಜಯಿಸಿದರು.
ಈ ಎಲ್ಲಾ ಈಜುಗಾರರಿಗೆ ಆಬಾ ಹಾಗೂ ಹಿಂದ್ ಕ್ಲಬ್‌ನ ಎನ್‌ಐಎಸ್ ತರಬೇತಿದಾರರಾದ ವಿಶ್ವಾಸ್ ಪವಾರ್ ಅಮಿತ್ ಜಾಧವ್, ರಣಜಿತ್ ಪಾಟೀಲ, ಸಂದೀಪ್ ಮೊಹಿತೆ, ಕಿಶೋರ್ ಪಾಟೀಲ, ಮಾರುತಿ ಘಾಡಿ ಇವರುಗಳ ಮಾರ್ಗದರ್ಶನ ಲಭಿಸಿದ್ದು, ಕ್ಲಬ್‌ನ ಅಧ್ಯಕ್ಷರಾದ ಶೀತಲ್ ಹುಳಬತ್ತೆ, ಮೋಹನ್ ಸಪ್ರೆ ಹಾಗೂ ಅರವಿಂದ ಸಂಗೋಳಿ ಇವರ ಪ್ರೋತ್ಸಾಹ ದೊರೆತಿದೆ.