ರಾಜೀನಾಮೆ ವಿಚಾರದಿಂದ ಹಿಂದಕ್ಕೆ ಸರಿದ್ರಾ ಬರಮನಿ???
ಸಿಎಂ-ಗೃಹ ಸಚಿವರ ಭೇಟಿ ಬಗ್ಗೆ ಎ.ಎಸ್.ಪಿ ನಾರಾಯಣ ಬರಮನಿ ಏನಂದ್ರು??
ರಾಜೀನಾಮೆ ವಿಚಾರದಿಂದ ಹಿಂದೆ ಸರಿದ್ರಾ ಧಾರವಾಡ ಎ ಎಸ್ ಪಿ ನಾರಾಯಣ ಭರಮನಿ. ಸಿಎಂ ಮತ್ತು ಗೃಹ ಸಚಿವರೊಂದಿಗೆ ಮಾತನಾಡಿದ್ದೇನೆ. ಎಂದಿನಂತೆ ನನ್ನ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಭರಮನಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಕಾಂಗ್ರೆಸ್ ಕಾರ್ಯಕ್ರಮವೊಂದರಲ್ಲಿ ಕೆಲಸ ಸರಿಯಾಗಿ ನಿರ್ವಹಿಸಿಲ್ಲ ಎಂದು ಸಿಎಂ ಸಿದ್ಧರಾಮಯ್ಯ ಅವರು ವೇದಿಕೆಯ ಮೇಲೆಯೇ ಕೈ ತೋರಿಸಿದ ನಂತರ ಧಾರವಾಡ ಎ ಎಸ್ ಪಿ ನಾರಾಯಣ್ ಭರಮನಿ ರಾಜೀನಾಮೆ ನಿರ್ಧಾರಕ್ಕೆ ಬಂದಿದ್ರು. ಆದರೇ, ಇಂದು ಮತ್ತೇ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಸಿಎಂ ಡಿಸಿಎಂ ಮತ್ತು ಗೃಹ ಸಚಿವರ ಭೇಟಿಯ ಬಳಿಕ ಮಾತನಾಡಿದ ಎ ಎಸ್. ಪಿ ನಾರಾಯಣ್ ಭರಮನಿ ಅವರು, ತಮ್ಮ ಭಾವನೆಗಳನ್ನು ಮೇಲಾಧಿಕಾರಿಗಳಿಗೆ ತಿಳಿಸಲಾಗಿದೆ.
ಈಗಾಗಲೇ ಸಿಎಂ ಮತ್ತು ಗೃಹ ಸಚಿವರೊಂದಿಗೆ ಮಾತನಾಡಲಾಗಿದೆ. ಎಂದಿನಂತೆ ನನ್ನ ಕರ್ತವ್ಯಕ್ಕೆ ಹಾಜರಾಗುತ್ತಿದ್ದೇನೆ ಎಂದಿದ್ದಾರೆ.
ಇನ್ನು ತಮ್ಮ ಮುಂದಿನ ನಡೆ ಏನು ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದೇ, ಕಾರು ಹೊರಟು ಹೋದ್ರು. ಸಿಎಂ ಮತ್ತು ಗೃಹ ಸಚಿವರ ಭೇಟಿಯಲ್ಲಿ ಮನವೊಲಿಕೆ ನಡೆಯಿತೋ ಅಥವಾ ಇಲ್ಲವಾ ಎಂಬುದು ಸ್ಪಷ್ಟವಾಗಿ ತಿಳಿಸದೇ ಭರಮನಿ ಮುಂದೆ ನಡೆದ್ದಿದ್ದು, ಎಂದಿನಂತೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದೇನೆ ಎಂದಿದ್ದಾರೆ.