ಕಾಗವಾಡ ತಾಲೂಕಿನ ಉಗಾರ ಲೈನ್ಸ್ ಕ್ಲಬ್ಬಿನ ಸನ 2025-26 ವರ್ಷದ ಅವಧಿಗೆ ಡಾಕ್ಟರ ಎನ. ಎಚ. ಸಾವಡೆ ಇವರನ್ನು ಆಯ್ಕೆ ಮಾಡಿ ಅವರ ನೇತೃತ್ವದಲ್ಲಿ ಆಡಳಿತ ಮಂಡಳಿಯ ಸದಸ್ಯರನ್ನು ಬೆಳಗಾವಿ ಜಿಲ್ಲಾ ಲೈನ್ಸ್ ಗವರ್ನರ ಶ್ರೀಮತಿ ಮೋನಿಕಾ ಸಾವಂತ ಇವರ ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ ನೆರವೇರಿಸಿದರು.
ಶನಿವಾರ ಸಂಜೆ ಉಗಾರದ ಶತಾಯುಷಿ ಅಲಗೌಡ ಕಾಗೆ ಸಂಸ್ಕೃತಿಕ ಭವನದಲ್ಲಿ ಬೆಳಗಾವಿ ಜಿಲ್ಲೆಯ ಲೈನ್ಸ್ ಗವರ್ನರ ಮೋನಿಕಾ ಸಾವಂತ ಇವರು ಪ್ರಸಕ್ತ ವರ್ಷದ ಆಡಳಿತ ಮಂಡಳಿಯ ಸದಸ್ಯರ ಆಯ್ಕೆ ಪ್ರಕ್ರಿಯೆ ನೆರವೇರಿಸಿದರು.
ಅಧ್ಯಕ್ಷರಾಗಿ ಡಾಕ್ಟರ ಎನ. ಹೆಚ. ಸಾವಡೆ, ಉಪಾಧ್ಯಕ್ಷರಾಗಿ ಆರ. ಜಿ. ಕಿಲ್ಲೆದಾರ, ಡಾಕ್ಟರ ಮೋಹನ್ ಕಟಗೇರಿ, ಕಾರ್ಯದರ್ಶಿ ಶುಭಾಶ ಹೆಬ್ಬಳ್ಳಿ, ಖಜಾಂಚಿ ಆನಂದ ಕುಂಬಾರ. ಸಂಚಾಲಕರಾಗಿ ಎಸ.ವಿ. ಭಟ, ಬಿ, ಬಿ. ಕಾಗೆ,
ಬಿ. ಎ. ಪಾಟೀಲ,ಪಿ. ಬಿ. ಕುಲಕರ್ಣಿ,ಡಾ. ಎಂ ಎಂ ಮಿನಚೆ ಇವರನ್ನ ಆಯ್ಕೆ ಮಾಡಿದರು.
ನಿಕಟ ಪೂರ್ವ ಅಧ್ಯಕ್ಷರಾದ ರಾಹುಲ ಶಹಾ ಇವರು ತಮ್ಮ ಕಳೆದ ವರ್ಷದ ಅಧಿಕಾರ ಅವಧಿಯಲ್ಲಿ ಕೈಗೊಂಡ ಎಲ್ಲಾ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿ ನೂತನ ಅಧ್ಯಕ್ಷ ಇವರಿಗೆ ಅಧಿಕಾರ ಹಸ್ತಾಂತರ ಮಾಡಿದರು.
ಕಳೆದ ವರ್ಷದ ಆರ್ಥಿಕ ವರ್ಷದ ಮಾಹಿತಿ ಕಾರ್ಯದರ್ಶಿ ಹಾಗೂ ಖಜಾಂಚಿ ಪ್ರಸಾದ ಕಾಗೆ ಇವರು ನೀಡಿದರು.
ಲೈನ್ಸ್ ಕ್ಲಬಿನ ಮಾಜಿ ಅಧ್ಯಕ್ಷ ಡಾಕ್ಟರ್ ಬಿ ಬಿ ಪಾಟೀಲ ಇವರು ಸಂಚಾಲಕರ ಆಯ್ಕೆ ಪ್ರಕ್ರಿಯೆ ಅಧ್ಯಕ್ಷತೆ ವಹಿಸಿದರು.
ಜಿಲ್ಲಾ ಲಯನ್ಸ್ ಕ್ಲಬ್ ನ ಗವರ್ನರ ಮೋನಿಕಾ ಸಾವಂತ ಇವರು ಆಡಳಿತ ಮಂಡಳಿಯ ಆಯ್ಕೆ ಪ್ರಕ್ರಿಯೆ ನೆರವೇರಿಸಿ ಮಾತನಾಡುವಾಗ ಇದು ಒಂದು ಜಿಲ್ಲೆಯಲ್ಲಿ ಆದರ್ಶ ಯಾಖೆ ಆಗಿದೆ ಉಗಾರ ಶಾಖೆ 42 ಸದಸ್ಯರನ್ನು ಹೊಂದಿರುವ ಅನೇಕ ಸಮಾಜ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸಿದೆ.
ಉಗಾರದ ಸಕ್ಕರೆ ಉದ್ದಿಮೆ ಆರ್ ವಿ ಶಿರಗಾವಕರ ಇವರು 27 ವರ್ಷಗಳ ಹಿಂದೆ ಶಾಖೆ ಪ್ರಾರಂಭಿಸಿದ್ದು ಈವರು ಈ ಶಾಖೆಯ ಅಭಿವೃದ್ಧಿಗಾಗಿ ಅನೇಕ ಯೋಜನೆಗಳು ಹಾಕಿಕೊಟ್ಟಿದ್ದಾರೆ. ಅವರ ಆಶೀರ್ವಾದ ಈ ಶಾಖೆ ಮೇಲೆ ಇದೆ . ಎಂದು ಹೇಳಿ ಮಹಿಳಾ ಸದಸ್ಯರು ಹೆಚ್ಚಿನ ಸಂಖ್ಯೆಯಿಂದ ಭಾಗವಹಿಸಿ. ಕಾರ್ಯನಿರ್ವಹಿಸಿರಿ ಎಂದು ಸಲಹೆ ನೀಡಿದರು.
ಸಮಾರಂಭದ ನಿರೂಪಣೆ ಮಹಿಳಾ ಸದಸ್ಯ ಸುಶ್ಮಿತಾ ಶಹಾ, ವೈಶಾಲಿ ಶಹಾ ಮಾಡಿದರು, ಶ್ರೀಮತಿ ಭಾಗ್ಯಶ್ರೀ ಪಠವರಧನ ವಂದಿಸಿದರು.
ಹಿರಿಯ ಸದಸ್ಯರಾದ ಬಿ ವಿ ಕಾಗೆ, ರಾಜೇಂದ್ರ ಪೋತದಾರ, ಬಾಳಗೌಡ ಪಾಟೀಲ, ಡಾಕ್ಟರ ಬಿ ಎ ಪಾಟೀಲ, ಜಗದೀಶ ಬಟವರಧನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.