Breaking News

ಖಾಸಗಿ ಶಾಲೆಯಲ್ಲಿ 61 ಲಕ್ಷ ರೂ. ಅವ್ಯವಹಾರದ ಆರೋಪದ ಕಿತ್ತಾಟ ನಕಲಿ ಸಹಿ ಮಾಡಿ ಲೆಕ್ಕ ಕೇಳಲು ಹೋದವರನ್ನೇ ಮನೆಗೆ ಕಳುಹಿಸಿದ್ರು..!

Spread the love

ಗೋಕಾಕ : ಶಾಲೆಯ ಚೆರಮನ್ನರು ಜೊತೆ ಶಾಲಾ ಕಾರ್ಯದರ್ಶಿ ಮತ್ತು ಪ್ರಿನ್ಸಿಪಾಲ ಸೇರಿಕೊಂಡು ಅಂದಾಜು 61 ಲಕ್ಷರೂ ಹಣದ ಅವ್ಯವಹಾರ ಮಾಡಿದ್ದಾರೆ ಎನ್ನಲಾದ ಆರೋಪವೊಂದು ಗೋಕಾಕ ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ ಕೇಳಿ ಬಂದಿದೆ.

ಹೌದು ಪಾಮಲದಿನ್ನಿಯಲ್ಲಿ ಇರುವ ಶ್ರೀ ಬೀರಸಿದ್ದೇಶ್ವರ ಕನ್ನಡ ಮಾದ್ಯಮ ಆದರ್ಶ ಹಿರಿಯ ಪ್ರಾಥಮಿಕ‌ ಶಾಲೆ ಪಾಮಲದಿನ್ನಿ, 1996 ನೆ ಇಸವಿಯಲ್ಲಿ ಪ್ರಾರಂಬಿಸಿದ್ದು ಅಂದಿನಿಂದ ಇಲ್ಲಿಯವರೆಗೆ ಶಾಲೆಗೆ ಬರುವ ಪೀ,ಖರ್ಚಿನ ಬಗ್ಗೆ ಲೆಕ್ಕಪತ್ರವನ್ನು ಕೆಲವು ಸದಸ್ಯರಿಗೆ ಅದ್ಯಕ್ಷರು,ಕಾರ್ಯದರ್ಶಿ ಮತ್ತು ಪ್ರಿನ್ಸಿಪಾಲ ಇವರು ತಿಳಿಸಿರಲಿಲ್ಲ,

ಇದನ್ನ ಕೇಳಲು ಐದು ಜನ ಶಾಲಾ ಆಡಳಿತ ಮಂಡಳಿಯವರು ಅವಿದ್ಯಾವಂತರಾದ ಕಾರಣ ಎಳು ಜನ‌ ಯುವಕರಿಗೆ ತಮ್ನ ಪರವಾಗಿ ಶಾಲೆಯಲ್ಲಿನ ಆಗುಹೊಗುಗಳನ್ನು ನೋಡಿಕೊಂಡು ಹೊಗಲು ಪಾವರ ಆಪ್ ಅಟಾರ್ನಿ ಬರೆದುಕೊಟ್ಟಿದ್ದರು,

ಇನ್ನೆನ್ನು ತಾವು ಮಾಡಿದ ಅವ್ಯವಹಾರವನ್ನು ಬಯಲಿಗೆಳೆಯುತ್ತಾರೆಂದು ಸಂಶಯಗೊಂಡು ಅಧಿಕಾರ ಬರೆದುಕೊಟ್ಟುವರನ್ನೆ ಮೂರು ಜನರು ಅವರಂತೆ ನಕಲಿ ಸಹಿ ಮಾಡಿ ದಾಖಲೆಗಳನ್ನು ಸೃಷ್ಟಿಸಿ ಐದು ಜನರನ್ನು ಆಡಳಿತ ಮಂಡಳಿಯಿಂದ ಹೊರಹಾಕಿದ್ದಾರೆ,

ಅದನ್ನು ಕೇಳಿಕ್ಕೆ ಹೋದರೆ ಒಬ್ಬರ ಮೇಲೆ ಇಬ್ಬರು ಹಾಕುತಿದ್ದಾರೆ, ಇನ್ನು ಪ್ರಿನ್ಸಿಪಾಲ ಇತ ಮನಸ್ಸಿಗೆ ಬಂದಾಗ ಶಾಲೆಗೆ ಬಂದು ಹೊಗುತ್ತಾನೆ, ಶಾಲಾ ಪ್ರವೇಸ ಫಿ, ಆರ್,ಟಿ,ಐ,ಹೊಂದಿದ್ದ ಶಾಲಾ ಮಕ್ಕಳ ಫಿ ಬಗ್ಗೆ ಖರ್ಚು ವೆಚ್ಚದ ಬಗ್ಗೆ ಕೇಳಿದರೆ ಪ್ರಿನ್ಸಪಾಲ ಇತ ಸೆಕ್ರೆಟರಿ ಮೇಲೆ ಹಾಕುತಿದ್ದಾನೆ,ಐದು ಜನರನ್ನು ಆಡಳಿತ ಮಂಡಳಿಯ ಸದಸ್ಯತ್ವದಿಂದ ತೆಗೆದುಹಾಕಿ 61 ಲಕ್ಷ ರೂ ಯನ್ನು ಲಪಟಾಯಿಸಲು ಹೊಂಚು ಹಾಕಿದ್ದಾರೆಂದು ಎಂದು ತುಕಾರಾಮ ಪೂಜೇರಿ ಗಂಭೀರ ಅರೋಪ ಮಾಡಿದ್ದಾರೆ.

ಶಾಲೆಯ ಆರ್ಥಿಕ ಪರಿಸ್ಥಿತಿಯ ಕಾರಣದಿಂದ ಹತ್ತು ವರ್ಷ ಶಿಕ್ಷಕರಿಗೆ ವೇತನ ನೀಡಿದ್ದ ಅರಬಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮತ್ತು ಗೋಕಾಕ ಶಾಸಕ ರಮೇಶ ಜಾರಕಿಹೋಳಿ ಇವರ ಅಂಗಳಕ್ಕೆ ಹೋದ ನಂತರ ಇಬ್ಬರನ್ನು ಕರೆಯಿಸಿ ಲೆಕ್ಕಪತ್ರದ ಬಗ್ಗೆ ಕೇಳೊಣ ವೆಂದರೆ ಪ್ರಿನ್ಸಿಪಾಲ್, ಅದ್ಯಕ್ಷ ಮತ್ತು ಕಾರ್ಯದರ್ಶಿ ಇವರು ಸುಳ್ಳು ಸಬೂಬು ಹೇಳಿ ಶಾಸಕರ ಹತ್ತಿರ ಬರುತ್ತಿಲ್ಲಾ ಎಂದು ಆರೋಪಿಸಿದ್ದಾರೆ.

ಇನ್ನು ಯಾರಾದರೂ ಅವ್ಯವಹಾರದ ಬಗ್ಗೆ ಕೆಳಲಿಕ್ಕೆ ಹೋದರೆ ಸುಳ್ಳು ಅಪಾಧನೆ ಮಾಡಿ ಅಂತವರ ಮೇಲೆ ಬ್ಲ್ಯಾಕ್ ಮೇಲ ತಂತ್ರವನ್ನು ಉಪಯೋಗ ಮಾಡಿ 61 ಲಕ್ಷರೂ ಅವ್ಯವಹಾರವನ್ನು ಮುಚ್ಚಿ ಹಾಕಲು ಪ್ರಯತ್ನಿಸುತಿದ್ದಾರೆ, ಅಷ್ಟೆ ಅಲ್ಲ ಇವರ ಕಿತ್ತಾಟಕ್ಕೆ ಶಾಲೆಯಲ್ಲಿ ಕಲಿಯುವ ಮಕ್ಕಳನ್ನು ಪೀ ತುಂಬಿಲ್ಲ ಎಂದು ನೇಪ ಹೇಳಿ ಅವರನ್ನು ಬಿಸಿಲಿನಲ್ಲಿ ನಿಲ್ಲಿಸಿದ್ದಾರೆ.ಅದರ ಆರೋಪ ಮಾಡಿರುತೆ ಒಂದು ವೇಳೆ ಮಾರಣಾಂತಿಕ ಹಲ್ಲೆ ಮಾಡಿದ್ದಲ್ಲಿ ಸಿಸಿಟಿವಿಯಲ್ಲಿನ ದಾಖಲಾತಿ ಪೊರೈಸಲಿ ಎಂದು ಸಿದ್ರಾಮ ಅರಭಾಂವಿ ಹೇಳಿದ್ದಾರೆ.

ಇನ್ನು ಇದೆ ಶಾಲೆಯಲ್ಲಿ ಹಾಲಿ ಸದಸ್ಯರ ಪತಿ ಸಿದ್ದಾರಾಯಿ ಡಬಾಜ ಇವರು ಇಲ್ಲಿ 60 ರಿಂದ 70 ಲಕ್ಷರೂ, ಅವ್ಯವಹಾರ ಆಗಿದ್ದು ನಿಜ, ಅದನ್ನು ಎಲ್ಲರೂ ಕುಳಿತು ಸರಿಪಡಿಸೋಣ ಎಂದು ಹಕವಾರು ಬಾರಿ ತಿಳಿಸಿದರು ಸಹ ಅದ್ಯಕ್ಷ,ಪ್ರಿನ್ಸಿಪಾಲ ಮತ್ತು ಕಾರ್ಯದರ್ಶಿ ಇವರು ಕ್ಯಾರೆ ಅನ್ನುತ್ತಿಲ್ಲಾ ,ಮತ್ತು ಇಲ್ಲಿ ಯಾವುದೆ ರೀತಿ ಹಲ್ಲೆಗಳು‌ ಆಗಿಲ್ಲ,ಇಲ್ಲಿನ ಶಿಕ್ಷಕ,ಅದ್ಯಕ್ಷ, ಪ್ರಿನ್ಸಿಪಾಲ ಇವರು ಮಕ್ಕಳಿಗೆ ಯಾರೆ ಬಂದರು ತಾವು ಹೇಳಿದಂತೆ ಹೇಳಬೇಕೆಂದು ಹೇಳಿದ್ದಾರೆಂದು ಹೇಳಿದರು.

ಇವರ ಅವ್ಯವಹಾರ ಕಿತ್ತಾಟದಲ್ಲಿ ಈಗ ಎಲ್ಲಿಗೆ ಬಂದಿದೆ ಅಂದರೆ ಮಕ್ಕಳು ಪೋಲಿಸರ 112 ವಾಹನವನ್ನು ಶಾಲೆಗೆ ಕರೆಯಿಸಿ ವಿದ್ಯೆ ಕಲಿಯುವ ಪರಿಸ್ಥಿತಿ ಬಂದಿದೆ, ಎನೆ ಆಗಲಿ ಅವ್ಯವಹಾರ ಆಗಿಲ್ಲ ಅನ್ನುವವರು ಎಲ್ಲರೂ ಕುಳಿತು ಅದರ ಲೆಕ್ಕವನ್ನು ಖರ್ಚು ವೆಚ್ಚವನ್ನು ತಿಳಿಸಲಿಕ್ಕೆ ಹಿಂದೇಟು ಯಾಕೆ,, ಇದೆಲ್ಲಾ ಬಗೆಹರೆಯಬೇಕಾದರೆ ಕುಳಿತು ಅರಿತಾಗ ಮಾತ್ರ ಸಾದ


Spread the love

About Laxminews 24x7

Check Also

ಮುಳುಗಿದ ಲೋಳಸೂರ ಸೇತುವೆ: ಡಿಸಿ ಮೊಹಮ್ಮದ್ ರೋಷನ್ ಪರಿಶೀಲನೆ

Spread the loveಬೆಳಗಾವಿ: ಘಟಪ್ರಭಾ ಹಾಗೂ ಮಾರ್ಕಂಡೇಯ ನದಿಗಳಿಂದ‌ ಮುಳುಗಡೆ ಆಗುವ ನಾಲ್ಕು ಸೇತುವೆಗಳನ್ನು ಹೊಸದಾಗಿ ನಿರ್ಮಿಸುವ ಯೋಜನೆ ಇದೆ. ಇದಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ