Breaking News

ಮೂರು ದಿನಗಳ ಅಂಚೆ ಚೀಟಿಗಳ ಪ್ರದರ್ಶನವನ್ನು 50 ಸಾವಿರಕ್ಕೂ ಅಧಿಕ ಜನರು ಕಂಡು ರೋಮಾಂಚನಗೊಂಡರು.

Spread the love

ಬೆಳಗಾವಿ: ಮೇಲ್, ವಾಟ್ಸ್​​ಆ್ಯಪ್​​ , ಮೆಸ್ಸೆಂಜರ್, ಫೇಸ್​​ಬುಕ್, ಇನ್​​​​ಸ್ಟಾಗ್ರಾಂ ಕಾಲದಲ್ಲೂ ಬೆಳಗಾವಿಯಲ್ಲಿ ಆಯೋಜಿಸಿದ್ದ ಅಂಚೆ ಚೀಟಿಗಳ ಪ್ರದರ್ಶನ ಜನರನ್ನು ಆಕರ್ಷಿಸಿತು. ಹಳೆ ಕಾಲದಿಂದ ಹಿಡಿದು ಈವರೆಗಿನ ಅಂಚೆ ಚೀಟಿಗಳನ್ನು 50 ಸಾವಿರಕ್ಕೂ ಅಧಿಕ ಜನರು ಬೆರಗಿನಿಂದ ವೀಕ್ಷಿಸಿದರು.

ಅಂಚೆ ಇಲಾಖೆ, ಅಂಚೆ ಚೀಟಿ ಮತ್ತು ನಾಣ್ಯ ಸಂಗ್ರಹಗಳ ಗ್ರೂಪ್(ಬಿಪಿಎಎನ್‌ಜಿ) ಸಹಯೋಗದೊಂದಿಗೆ ನಗರದ ಮಹಾವೀರ ಭವನದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ‘ಇಕ್ಷುಪೆಕ್ಸ್‌ – 2025’ ಜಿಲ್ಲಾಮಟ್ಟದ ಅಂಚೆ ಚೀಟಿಗಳ ಪ್ರದರ್ಶನಕ್ಕೆ ಇಂದು ಅದ್ಧೂರಿ ತೆರೆ ಬಿದ್ದಿತು. ಸಾವಿರಾರು ವಿದ್ಯಾರ್ಥಿಗಳು, ಅಂಚೆ ಚೀಟಿ ಪ್ರಿಯರು ದೇಶ, ವಿದೇಶಗಳ ಅಂಚೆ ಚೀಟಿಗಳನ್ನು ನೋಡಿ ಪುಳಕಿತರಾದರು.2 ಲಕ್ಷಕ್ಕೂ ಅಧಿಕ ಅಂಚೆ ಚೀಟಿ ಪ್ರದರ್ಶನಕ್ಕಿಟ್ಟಿದ್ದರು: ಜಿಲ್ಲೆ ಮತ್ತು ರಾಜ್ಯದ ವಿವಿಧೆಡೆಯಿಂದ 165 ಜನ ಸಂಗ್ರಹಕಾರರು ತಾವು ಸಂಗ್ರಹಿಸಿದ ಸುಮಾರು 2 ಲಕ್ಷಕ್ಕೂ ಅಧಿಕ ಅಂಚೆ ಚೀಟಿಗಳನ್ನು 180 ಫ್ರೇಮ್ ಗಳಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಇತಿಹಾಸ, ಭೂಗೋಳಶಾಸ್ತ್ರ, ವಿಜ್ಞಾನ, ಕೃಷಿ, ಕ್ರೀಡೆ, ಅಂತರಿಕ್ಷ ಯಾನ ಸೇರಿ ವಿವಿಧ ವಿಷಯಗಳಿಗೆ ಸಂಬಂಧಿಸಿದ ಮಾಹಿತಿ ಒಳಗೊಂಡ ಅಂಚೆ ಚೀಟಿಗಳೂ ಇಲ್ಲಿದ್ದವು. ಬುದ್ಧ, ಬಸವಣ್ಣ, ರಾಣಿ ಚನ್ನಮ್ಮ, ಮಹಾತ್ಮ ಗಾಂಧೀಜಿ, ಸ್ವಾಮಿ ವಿವೇಕಾನಂದ, ಪಂಡಿತ್ ಜವಾಹರಲಾಲ್ ನೆಹರೂ, ಬಿ.ಆರ್.ಅಂಬೇಡ್ಕರ್‌ ಸೇರಿ ಹಲವು ಮಹಾನ್‌ ನಾಯಕರ ಅಂಚೆ ಚೀಟಿಗಳು ಗಮನ ಸೆಳೆದವು.

1947ರಿಂದ ಇಲ್ಲಿಯವರೆಗೂ ಭಾರತ ಸೇರಿ ವಿವಿಧ ದೇಶಗಳು ಬಿಡುಗಡೆಗೊಳಿಸಿರುವ 5 ರೂ.ಯಿಂದ 200 ರೂ.ವರೆಗಿನ ಅಂಚೆ ಚೀಟಿಗಳನ್ನು ಪ್ರದರ್ಶನದಲ್ಲಿ ಇಟ್ಟಿದ್ದು ವಿಶೇಷವಾಗಿತ್ತು. ಸ್ವಿಟ್ಸ್ ಆಫ್ ಬೆಳಗಾವಿ ಕುಂದಾ, ಕರದಂಟು, ಐನಾಪುರ ಪೇಡಾ ಮತ್ತು ಮಂಡಿಗೆ ಅಂಚೆ ಚೀಟಿಗಳು ಆಕರ್ಷಿಸಿದವು. ಇದೇ ವೇಳೆ ಬೆಳಗಾವಿ ಜಿಲ್ಲೆಯ ಹಿರಿಯ ರಾಜಕಾರಣಿ ದಿ.ಉಮೇಶ ಕತ್ತಿ ಅವರ ಲಕೋಟೆಯನ್ನು ಬಿಡುಗಡೆಗೊಳಿಸಿದ್ದು ವಿಶೇಷ.


Spread the love

About Laxminews 24x7

Check Also

ಕುಪ್ಪಟಗಿರಿ ಕ್ರಾಸ್ ಬಳಿ ಹೊಸ ಟ್ರಾನ್ಸ್’ಫಾರ್ಮರ್ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಅರವಿಂದ ಪಾಟೀಲ್

Spread the love ಕುಪ್ಪಟಗಿರಿ ಕ್ರಾಸ್ ಬಳಿ ಹೊಸ ಟ್ರಾನ್ಸ್’ಫಾರ್ಮರ್ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಅರವಿಂದ ಪಾಟೀಲ್ ಖಾನಾಪೂರ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ