Breaking News

15 ತಾಸು ಕಲಾಪ ನಡೆಸಿದ ಸ್ಪೀಕರ್ ಖಾದರ್

Spread the love

ಬೆಳಗಾವಿ: ಸ್ಪೀಕರ್ ಯು.ಟಿ.ಖಾದರ್ ಬುಧವಾರವೂ ಎರಡನೇ ಬಾರಿಗೆ ಮಧ್ಯರಾತ್ರಿವರೆಗೆ ಕಲಾಪ ನಡೆಸಿದರು. ಆ ಮೂಲಕ 15 ತಾಸು ಕಲಾಪ ನಡೆಸಿದ್ದಾರೆ.

ಬುಧವಾರ ಬೆಳಗ್ಗೆ 9.40 ರಿಂದ ಮಧ್ಯರಾತ್ರಿ 12.40ರ ವರೆಗೆ ಕಲಾಪ ನಡೆಯಿತು. ಸತತ 15 ಗಂಟೆಗಳ ಕಾಲ ನಿರಂತರವಾಗಿ ಸದನ ನಡೆಸಿದ ಸ್ಪೀಕರ್ ಎಂಬ ಖ್ಯಾತಿಗೆ ಅವರು ಭಾಜನರಾಗಿದ್ದಾರೆ. ಮೊನ್ನೆ ಸೋಮವಾರ 14 ಗಂಟೆ ಕಾಲ ಕಲಾಪ ನಡೆಸಿದ್ದರು. ಇದೀಗ 15 ಗಂಟೆ ಕಾಲ ಸದನ ನಡೆಸಿ ದಾಖಲೆ ಮಾಡಿದ್ದಾರೆ.‌ ಮಧ್ಯಾಹ್ನದ ಭೋಜನಕ್ಕೂ ಬಿಡುವು ಕೊಡದೇ, ಮಧ್ಯರಾತ್ರಿ 12.40ವರೆಗೆ ನಿರಂತರ ಕಲಾಪ ನಡೆದಿದೆ.

ಮಧ್ಯರಾತ್ರಿ ಕಲಾಪ ಮುಂದೂಡುವ ವೇಳೆ ಸದನದಲ್ಲಿ ಸ್ಪೀಕರ್, ಡೆಪ್ಯೂಟಿ ಸ್ಪೀಕರ್, ನಾಲ್ವರು ಸಚಿವರು ಮತ್ತು 10 ಕಾಂಗ್ರೆಸ್ ಶಾಸಕರು, 6 ಬಿಜೆಪಿ ಶಾಸಕರು ಮತ್ತು 1 ಪಕ್ಷೇತರ ಶಾಸಕ ಸೇರಿ 17 ಶಾಸಕರು ಉಪಸ್ಥಿತರಿದ್ದರು. ಪ್ರಶ್ನೋತ್ತರ ಹಾಗೂ ಗಮನ ಸೆಳೆಯುವ ಸೂಚನೆ ಮೇಲೆ ಮಧ್ಯರಾತ್ರಿವರೆಗೆ ಚರ್ಚೆ ನಡೆಸಿದರು.‌

ಕಲಾಪದ ಬಳಿಕ ಮಾತನಾಡಿದ ಸ್ಪೀಕರ್ ಯು.ಟಿ.ಖಾದರ್, ”ಕಾರ್ಯಕಲಾಪಗಳ ಪಟ್ಟಿಯನ್ನು ಮಾಡಿರುತ್ತೇವೆ. ಅದರಂತೆ ನಾವು ಕಲಾಪ ನಡೆಸಬೇಕು. ಬಹಳ ಆಸಕ್ತಿಯಿಂದ ಪ್ರಶ್ನೆ ಕೇಳಿರುತ್ತಾರೆ. ಒಂದು ಪ್ರಶ್ನೆಗಾಗಿ ಹಲವು ಗಂಟೆ ಕಾದಿರುತ್ತಾರೆ. ಬೆಳಗ್ಗೆಯೆಲ್ಲ ನಾಯಕರು ಬೇರೆ ಚರ್ಚೆ ಮಾಡಿರುತ್ತಾರೆ. ಅದಕ್ಕೆ ಎಲ್ಲರಿಗೆ ಅವಕಾಶ ಸಿಗಬೇಕು. ಬೇರೆ ಬೇರೆ ಚರ್ಚೆಗಳು ನಡೆದಿವೆ” ಎಂದರು.


Spread the love

About Laxminews 24x7

Check Also

ಲಂಚದ ಹಣ ನುಂಗಿ ಭಂಡತನ ಮೆರೆದೆ ಅಧಿಕಾರಿ,ವಾಂತಿ ಮಾಡಿಸಿ ಕಕ್ಕಿಸಿದ ಲೋಕಾಯುಕ್ತ ಪೊಲೀಸ್​

Spread the loveಕೊಪ್ಪಳ, : ಕೊಪ್ಪಳ ಜಿಲ್ಲಾ ಸಹಕಾರಿ ಸಂಘಗಳ ಉಪ ನಿಬಂಧಕ ಇಂದು ಸಂಜೆ ಕೊಪ್ಪಳ ಲೋಕಾಯುಕ್ತ (Lokayukta) ಪೊಲೀಸರ ಬಲೆಗೆ ಬಿದ್ದಿರುವಂತಹ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ