ಹುಕ್ಕೇರಿ : ಸರಕಾರಿ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವೆ – ಅಲಂ ಶಾ ಮಕಾನದಾರ.
ಹುಕ್ಕೇರಿ ತಾಲೂಕಿನ ಸರಕಾರಿ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವೆ ಎಂದು
ಕರ್ನಾಟಕ ರಾಜ್ಯ ಸರಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ನೂತನ ಅದ್ಯಕ್ಷ ಅಲಮಷಾ ಮಕಾನದಾರ ಹೇಳಿದರು.
ಅವರು ಇಂದು ಹುಕ್ಕೇರಿ ನಗರದಲ್ಲಿ ಜರುಗಿದ ಕರ್ನಾಟಕ ರಾಜ್ಯ ಮುಸ್ಲಿಂ ನೌಕರರ ಚಿಕ್ಕೋಡಿ ಜಿಲ್ಲಾ ಸಂಘದ ಸಭೆಯಲ್ಲಿ ನೂತನವಾಗಿ ಹುಕ್ಕೇರಿ ಸಂಘದ ಅದ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿ ಅಧಿಕಾರ ಸ್ವೀಕರಿಸಿದರು.
ಕಾರ್ಯಕ್ರಮದ ಮುನ್ನ ಡಾ, ಬಾಬಾಸಾಹೇಬ ಅಂಬೇಡ್ಕರ್ ರವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ನಮನ ಸಲ್ಲಿಸಿದರು.
ನಂತರ ನಡೆದ ಸಮಾರಂಭದಲ್ಲಿ ತಾಲೂಕಾ ಅದ್ಯಕ್ಷ ಅಲಂ ಶಾ ಮಕಾನದಾರ,ಉಪಾದ್ಯಕ್ಷ ಜಾಕೀರ ಮುಲ್ಲಾ, ನಿರ್ದೆಶಕರಾದ ಶಭಾನಾ ಬೇಗಮ್ ಮುಲ್ಲಾ, ಜೇಬುನ್ ಮುಲ್ತಾನಿ ಹಾಗೂ ಮೌಲಾನಾ ಅಂಜರ ರವರಿಗೆ ರಾಜ್ಯ ಸಂಘಟನಾ ಕಾರ್ಯದರ್ಶಿ ಅದಮ್ ಪೀರಜಾದೆ, ಜಿಲ್ಲಾ ಅದ್ಯಕ್ಷರಾದ ಜೂಬರ್ ದ್ರಾಕ್ಷಿ ಮತ್ತು ಜಿಲ್ಲಾ ಸಮಿತಿ ಸದಸ್ಯರು ಸತ್ಕರಿಸಿ ಅಭಿನಂದಿಸಿದರು.
ರಾಜ್ಯ ಸರಕಾರಿ ಮುಸ್ಲಿಂ ನೌಕರರ ಸಂಘದ ಚಿಕ್ಕೋಡಿ ಜಿಲ್ಲಾ ಅದ್ಯಕ್ಷ ಜುಬೇರ ದ್ರಾಕ್ಷಿ ಮಾತನಾಡಿ ಹುಕ್ಕೇರಿ ಘಟಕದ ನೂತನ ಅದ್ಯಕ್ಷರಾದ ಅಲಂ ಮಕಾನದಾರರು ತಮ್ಮ ಶಿಕ್ಷಕ ವೃತ್ತಿ ಮಾಡುತ್ತಾ ಅನೇಕ ಸಾಮಾಜಿಕ ಕಾರ್ಯಮಾಡುತ್ತಾ ರಾಜಕಾರಣಿ ಹಾಗೂ ಅಧಿಕಾರಿಗಳ ನಿಕಟವರ್ತಿಯಾಗಿದ್ದಾರೆ ಕಾರಣ ತಾಲೂಕಿನ ಯಾವದೆ ಕಛೇರಿಯ ಸರಕಾರಿ ನೌಕರರಿಗೆ ಅವರ ಸಮಸ್ಯೆಗಳಿಗೆ ಸ್ಪಂದಿಸುವ ಯೋಗ್ಯ ವ್ಯಕ್ತಿಯಾಗಿದ್ದಾರೆ ಕಾರಣ ಜಿಲ್ಲಾ ಸಂಘದ ವತಿಯಿಂದ ಅವರನ್ನು ಅವಿರೊಧವಾಗಿ ಆಯ್ಕೆಮಾಡಲಾಗಿದೆ ಎಂದರು
ನಂತರ ಗಜಬರವಾಡಿ ಮುಸ್ಲಿಂ ಸಮಾಜದ ಮುಖಂಡರನ್ನು ಸತ್ಕರಿಸಲಾಯಿತು.
ಅಧಿಕಾರ ಗ್ರಹಣ ಮಾಡಿ ಮಾದ್ಯಮಗಳೊಂದಿಗೆ ಮಾತನಾಡಿದ ಅಲಂ ಷಾ ಮಕಾನದಾರ ನನಗೆ ಅದ್ಯಕ್ಷ ಸ್ಥಾನ ನೀಡಿದ ಎಲ್ಲ ಸರಕಾರಿ ನೌಕರರಿಗೆ ಅಭಿನಂದನೆ ಸಲ್ಲಿಸಿ ಮುಂಬರುವ ದಿನಗಳಲ್ಲಿ ಯಾವದೆ ಇಲಾಖೆ ನೌಕರರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ನ್ಯಾಯ ದೊರಕಿಸುವ ಕಾರ್ಯ ಮಾಡಲಾಗುವದು ಎಂದರು