ಖಾನಾಪುರ ತಾಲೂಕಿನಲ್ಲಿ ಮತ್ತೇ ಗಜರಾಜನ ಆಗಮನವಾಗಿದ್ದು, ರೈತರಲ್ಲಿ ಮತ್ತೇ ಆತಂಕ ಮನೆ ಮಾಡಿದೆ.
Laxminews 24x7
ಡಿಸೆಂಬರ್ 2, 2024
Uncategorized
30 Views
ಖಾನಾಪೂರ ತಾಲೂಕಿನಲ್ಲಿ ಆನೆಯ ಹಾವಳಿ ಮೇಲಿಂದ ಮೇಲೆ ನಡೆಯುತ್ತಲೇ ಇದೆ. ಸುಗ್ಗಿಯ ಸಮಯದಲ್ಲಿ ಭತ್ತದ ಬೆಳೆ ಕಟಾವು ಮಾಡಿ ರಾಶಿ ಮಾಡುವ ಸಂದರ್ಭದಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಸ್ಥಿತಿ ಖಾನಾಪೂರ ತಾಲೂಕಿನಲ್ಲಿ ನಿರ್ಮಾಣವಾಗಿದೆ.ಕಬ್ಬು ಬೆಳೆಗಾರರ ಪರಿಸ್ಥಿತಿ ಕೂಡಾ ಇದರ ಹೊರತಾಗಿಲ್ಲ ಇದರ ಪರಿಸ್ಥಿತಿಯಲ್ಲಿ ರೈತರು ಆತಂಕದಲ್ಲಿದ್ದಾರೆ.
ಈ ಮೊದಲು ಕೂಡಾ ಆನೆಯ ಆಗಮನದಿಂದ ತಾಲೂಕಿನ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಬೆಳಗ್ಗೆಯಿಂದಲೇ ಅವರೊಳ್ಳಿ ರುದ್ರಸ್ವಾಮಿ ಮಠದಿಂದ ಕೊಡಚವಾಡ ಪ್ರದೇಶದಲ್ಲಿ ಆನೆ ಆಗಮಿಸಿದ ಹಿನ್ನೆಲೆಯಲ್ಲಿ ರೈತರಲ್ಲಿ ಆತಂಕ ನಿರ್ಮಾಣವಾಗಿದೆ.
ಇದರ ಬಗ್ಗೆ ಶಾಸಕ ವಿಠ್ಠಲ ಹಲಗೇಕರ ಅವರು ರಾಜ್ಯ ಅರಣ್ಯ ಇಲಾಖೆಯ ನಿರ್ದೇಶಕರಿಗೆ ಖಾನಾಪೂರ ತಾಲೂಕಿನಲ್ಲಿ ಆನೆ ಆಗಮಿಸುತ್ತಿರುವ ಬಗ್ಗೆ ಗಮನಕ್ಕೆ ತಂದು ಯೋಗ್ಯ ರೀತಿಯ ವ್ಯವಸ್ಥೆ ಮಾಡಿ ಎಂದು ಮನವಿ ಸಲ್ಲಿಕೆ ಮಾಡಿದರೂ ಕೂಡ ಅರಣ್ಯ ಇಲಾಖೆಯಿಂದ ನಿರ್ಲಕ್ಷ್ಯ ಧೋರಣೆ ಅನುಸರಿಸಿರುವುದು ಮೇಲ್ನೋಟಕ್ಕೆ ಎಂದು ಕಾಣುತ್ತದೆ.
ಒಬ್ಬ ತಾಲೂಕಿನ ಜನಪ್ರತಿನಿಧಿ ಮನವಿಗೂ ಸ್ಪಂದಿಸುವ ಕಾರ್ಯ ಅರಣ್ಯ ಇಲಾಖೆ ಮಾಡಿಲ್ಲ ಅಂದ್ರೆ ಹೇಗೆ ಅಂತ ಜನಸಾಮಾನ್ಯರ ಪ್ರಶ್ನೆಯಾಗಿದೆ. ಇನ್ನು ಎಷ್ಟು ಹಾನಿ ಉಂಟಾಗಲಿದೆ ಎಂದು ರೈತರು ಆತಂಕದಲ್ಲಿದ್ದಾರೆ.