ಚಿಕ್ಕೋಡಿ:ಕರ್ನಾಟಕ ರಕ್ಷಣಾ ವೇದಿಕೆಯ ಚಿಕ್ಕೋಡಿ ತಾಲೂಕಾ ಘಟಕದ ಪದಾಧಿಕಾರಿಗಳ ಆಯ್ಕೆ ಹಾಗೂ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮ ಜರುಗಿತು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ದೀಪಕ ಗುಡಗನಟ್ಟಿ ಇವರ ನೇತೃತ್ವದಲ್ಲಿ ಸಭೆ ನಡೆಯಿತು. ಚಿಕ್ಕೋಡಿ ತಾಲೂಕಾ ಘಟಕಕ್ಕೆ ಯುವ ಘಟಕದ ತಾಲೂಕಾ ಅಧ್ಯಕ್ಷರಾಗಿ ಬಸವರಾಜ (ದಾದಾ) ಮಗದುಮ್ಮ ,ಸಂತೋಷ ಪೂಜಾರಿ ಇವರನ್ನು ತಾಲೂಕಾ ಉಪಾಧ್ಯಕ್ಷರಾಗಿ ಹಾಗೂ ಚಂದ್ರಕಾಂತ ಹುಕ್ಕೇರಿ ಇವರನ್ನು ತಾಲೂಕಾ ಗೌರವ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ನೂರಾರು ಕನ್ನಡ ಮನಸ್ಸುಗಳುಳ್ಳ ಕಾರ್ಯಕರ್ತರು ಕರವೇ ಸಂಘಟನೆಯನ್ನು ಸೇರಿದರು.
ಕಾರ್ಯಕರ್ತರನ್ನು ಉದ್ದೇಶಿಸಿ ದೀಪಕ ಗುಡಗನಟ್ಟಿ ಮಾತನಾಡಿ, ಯಾವಾಗಲೂ ಕನ್ನಡ ಭಾಷೆ ನೆಲ ಜಲ ಬಗ್ಗೆ ಹೋರಾಟ ನಡೆಸಬೇಕು, ಎಲ್ಲಿಯಾದರೂ ಅನ್ಯಾಯವಾದರೆ ನ್ಯಾಯಕ್ಕಾಗಿ ಹೋರಾಟ ಮಾಡಬೇಕು, ಸಂಘಟನೆಯ ಶಾಖೆಗಳನ್ನು ಪ್ರತಿಯೊಂದು ಹಳ್ಳಿಯಲ್ಲಿ ತೆರೆಯಬೇಕು, ಒಗ್ಗಟ್ಟಾಗಿ ನಾಡು ನುಡಿಗಾಗಿ ದುಡಿಯಬೇಕು ಎಂದು ಹೇಳಿದರು.
ಸುರೇಶ ಗವಣ್ಣವರ ಸಾಂಕೇತಿಕವಾಗಿ ಮಾತನಾಡಿದರು. ಸಂಜು ಬಡಿಗೇರ ಸ್ವಾಗತಿಸಿದರು, ರಾಜು ನಾಶೀಪುಡಿ ನಿರೂಪಿಸಿದರು, ಗಣೇಶ ರೋಖಡೆ ಇವರು ವಂದಿಸಿದರು.
ಈ ಕಾರ್ಯಕ್ರಮದಲ್ಲಿ ತಾಲೂಕಿನ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.