Breaking News

ಸರ್ಕಾರಿ ಕೆಲಸ ಸಿಕ್ಕ ಖುಷಿಯಲ್ಲಿದ್ದ ನಂದಿನಿ ಸಾವು, ನಿರ್ಲಕ್ಷ್ಯಕ್ಕೆ ಬಲಿಯಾಯ್ತು ಅಮಾಯಕ ಜೀವ

Spread the love

ಬಳ್ಳಾರಿ, ನವೆಂಬರ್​ 30: ಬಳ್ಳಾರಿ ಜಿಲ್ಲಾ ಸರ್ಕಾರಿ ಆಸ್ಪತ್ರೆ (BIMS)ಯಲ್ಲಿ ನಾಲ್ವರು ಬಾಣಂತಿಯರು ಮೃತಪಟ್ಟಿದ್ದಾರೆ. ನಾಲ್ವರಲ್ಲಿ ಬಳ್ಳಾರಿ ತಾಲೂಕಿನ ಬಾಣಾಪುರ ಗ್ರಾಮದ ನಂದಿನಿ ಎಂಬುವರು ನವೆಂಬರ್​ 09 ರಂದು ಹೆರಿಗೆಗೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ನವೆಂಬರ್​ 12 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ, ಅಂದು ಮಧ್ಯರಾತ್ರಿ ಮೃತಪಟ್ಟಿದ್ದು, ದುರ್ದೈವದ ಸಂಗತಿಯಾಗಿದೆ.

ಇನ್ನು, ಮೃತ ಬಾಣಂತಿ ನಂದಿನಿ ಹಿಂದೆ ಕರುಳು ಹಿಂಡುವ ಕಥೆ ಇದೆ. ನಂದಿನಿ ಛಲಗಾರ್ತಿ ಅಂದುಕೊಂಡಿದ್ದನ್ನು ಸಾಧಿಸಿ ತೀರುವ ಮಹಿಳೆಯಾಗಿದ್ದಳು. ಬಡತನದಲ್ಲಿ ಬೆಳದಿದ್ದ ನಂದಿನಿ ಕಷ್ಟಪಟ್ಟು ಓದಿ ಡಬಲ್​​ ಡಿಗ್ರಿ ತನ್ನದಾಗಿಸಿಕೊಂಡಿದ್ದಳು. ನಂದಿನಿ ಪೋಷಕರು ಕೂಡ ಮಗಳ ಓದಿಗೆ ಯಾವುದೇ ಕೊರತೆ ಬಾರದಂತೆ ನೋಡಿಕೊಂಡಿದ್ದರು.

ನಂದಿನಿ ಪೋಷಕರ ಬಳಿ ಕೇವಲ ಎರಡೂವರೆ ಎಕರೆ ಜಮೀನು ಇತ್ತು. ಇದರಲ್ಲಿ ಬಂದ ಆದಾಯದಲ್ಲೆ ಜೀವನ ನಡೆಸುತ್ತಿದ್ದರು. ಮಗಳು ನಂದಿನಿಯನ್ನು ವಿದ್ಯಾವಂತಳನ್ನಾಗಿ ಮಾಡಿದ್ದರು. ಪೋಷಕರ ಆಸೆಯಂತೆ ವಿದ್ಯಾವಂತಳಾದ ನಂದಿನಿ, ನಾನು ದುಡಿದು ನಿಮ್ಮನ್ನು ನೋಡಿಕೊಳ್ಳುತ್ತೇನೆ ಅಂತ ತಂದೆ-ತಾಯಿಗೆ ಹೇಳಿದ್ದಳು.

ಸರ್ಕಾರಿ ವೇತನ ಪಡೆಯಬೇಕಿದ್ದ ನಂದಿನಿ

ತಂದೆ-ತಾಯಿಗೆ ಆಸರೆ‌ ಆಗಬೇಕೆಂದು ನಂದಿನಿ ಅತಿಥಿ ಶಿಕ್ಷಕಳಾಗಿ ಕೆಲಸ ಮಾಡುತ್ತಿದ್ದಳು. ಇದರ ನಡುವೆಯೇ ನಂದಿನಿ ಗ್ರಾಮ ಲೆಕ್ಕಾಧಿಕಾರಿ ಪರೀಕ್ಷೆ ಬರೆದಿದ್ದಳು. “ಅಮ್ಮ-ಅಪ್ಪ ನಾನು ಗ್ರಾಮ ಲೆಕ್ಕಾಧಿಕಾರಿ ಪರೀಕ್ಷೆಯಲ್ಲಿ ಪಾಸಾಗುತ್ತೇನೆ, ನಿಮ್ಮನ್ನು ಸುಖವಾಗಿ ನೋಡಿಕೊಳ್ಳುತ್ತೇನೆ” ಎಂದು ನಂದಿನಿ ಹೇಳಿದ್ದಳು. ಪರೀಕ್ಷೆಯ ಫಲಿತಾಂಶ ಬಂದಿದ್ದು, ನಂದಿನಿ ಪಾಸಾಗಿದ್ದಳು. ಇನ್ನೇನು ಕೆಲವೇ ದಿನಗಳಲ್ಲಿ ನಂದಿನಿ ಸರ್ಕಾರಿ ನೌಕರಿಗೆ ಸೇರಬೇಕಿತ್ತು.


Spread the love

About Laxminews 24x7

Check Also

ಗೋಕಾಕ‌ ತಾಲೂಕಿನ ರಡ್ಡೇರಹಟ್ಟಿ ಗ್ರಾಮದಲ್ಲಿ ನೂತನವಾಗಿ ಪ್ರತಿಷ್ಠಾಪಿಸಿದ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ನೂತನ ಪುತ್ಥಳಿ

Spread the love ಗೋಕಾಕ‌ ತಾಲೂಕಿನ ರಡ್ಡೇರಹಟ್ಟಿ ಗ್ರಾಮದಲ್ಲಿ ನೂತನವಾಗಿ ಪ್ರತಿಷ್ಠಾಪಿಸಿದ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ