ರಾಯದುರ್ಗ, ಕದಿರಿದೇವರಪಲ್ಲಿ, ಲೋಂಡಾ ಮತ್ತು ಕ್ಯಾಸಲ್ ರಾಕ್ ನಿಲ್ದಾಣಗಳ ನಡುವಿನ ಕೆಲವು ರೈಲುಗಳ ಸಂಚಾರ ಡಿಸೆಂಬರ್ ತಿಂಗಳಲ್ಲಿ ಭಾಗಶಃ ರದ್ದಾಗಲಿದೆ. ಮಾರ್ಗದುರಸ್ತಿ ಮತ್ತು ಯಾರ್ಡ್ ಮಾರ್ಪಾಡು ಕಾಮಗಾರಿಗಳಿಂದಾಗಿ ಈ ಬದಲಾವಣೆ ಮಾಡಲಾಗಿದೆ. ಕೆಲವು ರೈಲುಗಳ ಸಂಖ್ಯೆಗಳನ್ನೂ ಬದಲಾಯಿಸಲಾಗಿದೆ. ಪ್ರಯಾಣಿಕರು ಹೊಸ ವೇಳಾಪಟ್ಟಿಯನ್ನು ಪರಿಶೀಲಿಸುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.
ನವೆಂಬರ್ 29: ರಾಯದುರ್ಗ ಮತ್ತು ಕದಿರಿದೇವರಪಲ್ಲಿ ನಿಲ್ದಾಣ ಮತ್ತು ಲೋಂಡಾ (Londa) ಮತ್ತು ಕ್ಯಾಸಲ್ ರಾಕ್ (Castlerock) ನಿಲ್ದಾಣಗಳ ನಡುವೆ ನೈಋತ್ಯ ರೈಲ್ವೆಯು ಕಾಮಾಗಾರಿ ಕೈಗೊಂಡಿದೆ. ಹೀಗಾಗಿ, ಕೆಲ ರೈಲುಗಳ (Train) ಸಂಚಾರ ಈ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ. ಈ ಬಗ್ಗೆ ನೈಋತ್ಯ ರೈಲ್ವೆ ಸಾಮಾಜಿಕ ಎಕ್ಸ್ ಮುಖಾಂತರ ಮಾಹಿತಿ ನೀಡಿದೆ. ಇನ್ನು, ಕೆಲ ರೈಲುಗಳ ಸಂಖ್ಯೆ ಬದಲಾಯಿಸಲಾಗಿದೆ.
ರಾಯದುರ್ಗ ಮತ್ತು ಕದಿರಿದೇವರಪಲ್ಲಿ ನಿಲ್ದಾಣಗಳ ನಡುವೆ ಯಾರ್ಡ್ ಮಾರ್ಪಾಡು ಮತ್ತು ಅಗತ್ಯ ಸುರಕ್ಷತಾ ಸಂಬಂಧಿತ ಕಾಮಗಾರಿಗಳು ನಡೆಯುತ್ತಿವೆ. ಹಾಗೆಯೇ ಲೋಂಡಾ ಮತ್ತು ಕ್ಯಾಸಲ್ ರಾಕ್ ನಿಲ್ಯಾಣಗಳ ನಡುವೆ ಎಂಜಿನಿಯರಿಂಗ್ ಕಾಮಗಾರಿ ನಡೆಯುತ್ತಿದೆ.
- ರೈಲು ಸಂಖ್ಯೆ 17333 ಮೀರಜ್-ಕ್ಯಾಸಲ್ ರಾಕ್ ಡೈಲಿ ಕಾಯ್ದಿರಿಸದ ಎಕ್ಸ್ಪ್ರೆಸ್ ರೈಲು ಸಂಚಾರ ಲೋಂಡಾ ಮತ್ತು ಕ್ಯಾಸಲ್ ರಾಕ್ ನಿಲ್ದಾಣಗಳ ನಡುವೆ ಡಿಸೆಂಬರ್ 1 ರಿಂದ 31ರವರೆಗೆ ಭಾಗಶಃ ರದ್ದಾಗಲಿದೆ. ಈ ರೈಲು ಲೋಂಡಾ ನಿಲ್ದಾಣದಲ್ಲಿ ಕೊನೆಗೊಳ್ಳುತ್ತದೆ.
- ರೈಲು ಸಂಖ್ಯೆ 17334 ಕ್ಯಾಸಲ್ ರಾಕ್-ಮೀರಜ್ ಡೈಲಿ ಕಾಯ್ದಿರಿಸದ ಎಕ್ಸ್ಪ್ರೆಸ್ ರೈಲು ಸಂಚಾರ ಕ್ಯಾಸಲ್ ರಾಕ್ ಮತ್ತು ಲೋಂಡಾ ನಿಲ್ದಾಣಗಳ ನಡುವೆ ಡಿಸೆಂಬರ್ 1 ರಿಂದ 31ರವರೆಗೆ ಭಾಗಶಃ ರದ್ದಾಗಲಿದೆ. ಈ ರೈಲು ಕ್ಯಾಸಲ್ ರಾಕ್ ಬದಲಿಗೆ ಲೋಂಡಾ ನಿಲ್ದಾಣದಿಂದ ಹೊರಡಲಿದೆ.
ಗುಂತಕಲ್-ಕದಿರಿದೇವರಪಲ್ಲಿ ನಿಲ್ದಾಣಗಳ ನಡುವೆ ರೈಲು ಸಂಚಾರ ಭಾಗಶಃ ರದ್ದು
- ರೈಲು ಸಂಖ್ಯೆ 07589 ತಿರುಪತಿ-ಕದಿರಿದೇವರಪಲ್ಲಿ ಡೈಲಿ ಪ್ಯಾಸೆಂಜರ್ ವಿಶೇಷ ರೈಲು ಸಂಚಾರ ಡಿಸೆಂಬರ್ 1 ರಿಂದ 31ರವರೆಗೆ ಗುಂತಕಲ್ ಮತ್ತು ಕದಿರಿದೇವರಪಲ್ಲಿ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ. ಈ ರೈಲು ಗುಂತಕಲ್ ನಿಲ್ದಾಣದಲ್ಲಿ ಕೊನೆಗೊಳ್ಳುಲಿದೆ.
- ರೈಲು ಸಂಖ್ಯೆ 07590 ಕದಿರಿದೇವರದಲ್ಲಿ ತಿರುಪತಿ ಡೈಲಿ ಪ್ಯಾಸೆಂಜರ್ ವಿಶೇಷ ರೈಲು ಸಂಚಾರ ಡಿಸೆಂಬರ್ 2 ರಿಂದ ಜನವರಿ 1ರವರೆಗೆ ಕದಿರಿದೇವರಪಲ್ಲಿ ಮತ್ತು ಗುಂತಕಲ್ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ. ಈ ರೈಲು ಗುಂತಕಲ್ ನಿಲ್ಯಾಣದಿಂದ ಪ್ರಯಾಣ ಆರಂಭಿಸಲಿದೆ.