ಸ್ವಚ್ಛ, ಸಮಾಜ ನಿರ್ಮಾಣಕ್ಕಾಗಿ ನಶೆ ಮುಕ್ತ ಕ್ಯಾಂಪಸ್ ನಮ್ಮೆಲ್ಲರ ಹೊಣೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತನ ವತಿಯಿಂದ ನವೆಂಬರ್ 28 ರಿಂದ ಡಿಸೆಂಬರ್ 06ರ ವರೆಗೆ ನಡೆಯುವ ನಶೆ ಮುಕ್ತ ಕ್ಯಾಂಪಸ್ ಜಾಗೃತಿ ಮೂಡಿಸಲಾಗುತ್ತಿದೆ.
ಸ್ವಸ್ಥ, ಸ್ವಚ್ಛ, ಸಮಾಜ ನಿರ್ಮಾಣಕ್ಕಾಗಿ ನಶೆ ಮುಕ್ತ ಕ್ಯಾಂಪಸ್ ನಮ್ಮೆಲ್ಲರ ಹೊಣೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತನ ವತಿಯಿಂದ ನವೆಂಬರ್ 28 ರಿಂದ ಡಿಸೆಂಬರ್ 06ರ ವರೆಗೆ ನಡೆಯುವ ನಶೆ ಮುಕ್ತ ಕ್ಯಾಂಪಸ್ ಜಾಗೃತಿ ಅಭಿಯಾನದ ಪೋಸ್ಟರನ್ನು KLE ಸೊಸೈಟಿಯ ನಿರ್ದೇಶಕರಾದ ಮಹಾಂತೇಶ ಕವಟಗಿಮಠ, ಬೆಳಗಾವಿ ಪೊಲೀಸ್ ಕಮಿಷನರ್ ಯಡ್ಡಾ ಮಾರ್ಟಿನ್ ಮತ್ತು ಹಲವಾರು ಮಹಾವಿದ್ಯಾಲಯದ ಪ್ರಾಂಶುಪಾಲರಿಂದ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಬೆಳಗಾವಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಚಿನ್ ಹಿರೇಮಠ್, ಪ್ರಾಂತ ಸಮಾಜಿಕ ಜಾಲತಾಣ ಪ್ರಮುಖ ಕುಶಲ ಘೋಡಗೇರಿ, ಖೇಲ್ ಸಹ ಪ್ರಮುಖ ದೇವೇಂದ್ರ ಸಣ್ಣಮಣ್ಣವರ್, ಬೆಳಗಾವಿ ತಾಲೂಕಾ ಸಂಚಾಲಕ ಫಣಿ ರಾಘವೇಂದ್ರ, ಯಲ್ಲಪ್ಪ ಬೊಮ್ಮನಹಳ್ಳಿ ಮತ್ತು ಇನ್ನುಳಿದವರು ಉಪಸ್ಥಿತರಿದ್ದರು.
Laxmi News 24×7