ಉತ್ಕೃಷ್ಟ ಗುಣಮಟ್ಟಕ್ಕೆ ಹೆಸರಾದ ಕರ್ನಾಟದ ಹೆಮ್ಮೆ ಕೆಎಂಎಫ್ ‘ನಂದಿನಿ’ ಬ್ರ್ಯಾಂಡ್‌ನಡಿ 156ಕ್ಕೂ ಹೆಚ್ಚು ಮಾದರಿಯ ಹಾಲು ಮತ್ತು ಹಾಲಿನ ಉತ್ಪನ್ನಗಳು ಮಾರುಕಟ್ಟೆಯಲ್ಲಿದ್ದು ಇದೀಗ ನಂದಿನಿ ಬ್ರ್ಯಾಂಡ್ ಹೆಸರಿನಲ್ಲೇ ದೋಸೆ, ಇಡ್ಲಿ ಹಿಟ್ಟು ಮಾರುಕಟ್ಟೆಗೆ ಬಿಡುಗಡೆಯಾಗಿದೆ.
ಹಾಲಿನ ಉಪ ಉತ್ಪನ್ನ ‘ವೇ ಪೌಡರ್’ ಮತ್ತು ಗೋಧಿ ಬೆರೆಸಿ ತಯಾರಿಸಲಾಗುವ ನಂದಿನಿ ಬ್ರ್ಯಾಂಡ್‌ನ ದೋಸೆ ಹಿಟ್ಟಿನಲ್ಲಿ ಪ್ರೋಟೀನ್ ಪ್ರಮಾಣ ಹೆಚ್ಚಿರುತ್ತದೆ.
ನಂದಿನಿ ಬ್ರ್ಯಾಂಡ್‌ನ ದೋಸೆ ಹಿಟ್ಟು ಖಾಸಗಿ ಬ್ರ್ಯಾಂಡ್‌ಗಳ ದೋಸೆ ಹಿಟ್ಟಿಗಿಂತ ಹೆಚ್ಚು ಗುಣಮಟ್ಟದಿಂದ ಕೂಡಿರಲಿದೆ. ಜೊತೆಗೆ ಬೆಲೆ ಕೂಡ ಕೈಗೆಟುಕುವಂತಿದೆ.