Breaking News

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

Spread the love

ಹೊಸದಿಲ್ಲಿ: ಭಾರತದ ಮುಖ್ಯ ನ್ಯಾಯಮೂರ್ತಿಯಾಗಿದ್ದ ಡಿ.ವೈ. ಚಂದ್ರಚೂಡ್(Dhananjaya Yeshwant Chandrachud) ಅವರು ಶುಕ್ರವಾರ(ನ8) ಸುಪ್ರೀಂ ಕೋರ್ಟ್‌ಗೆ ಭಾವನಾತ್ಮಕ ವಿದಾಯ ಹೇಳಿದರು.

ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ​​ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ, ಡಿ.ವೈ.

ಚಂದ್ರಚೂಡ್ ಅವರು ತಮ್ಮ ನ್ಯಾಯಾಂಗ ಪ್ರಯಾಣದ ವೈಯಕ್ತಿಕ ಘಟನೆಗಳನ್ನು ಹಂಚಿಕೊಂಡರು. ನ್ಯಾಯಾಂಗ ಸುಧಾರಣೆ ಪಾರದರ್ಶಕತೆ ಮತ್ತು ನ್ಯಾಯಕ್ಕೆ ಅಚಲವಾದ ಬದ್ಧತೆಯೊಂದಿಗೆ ಸಂಯೋಜಿಸಿದ್ದೇನೆ ಎಂದು ತಮ್ಮ ಎರಡು ವರ್ಷಗಳ ಸಿಜೆಐ ಅಧಿಕಾರಾವಧಿಯ ಬಗ್ಗೆ ಹೇಳಿಕೊಂಡರು.

64 ರ ಹರೆಯದ ಸಿಜೆಐ ಚಂದ್ರಚೂಡ್ ಅವರು 24 ವರ್ಷಗಳ ನ್ಯಾಯಾಂಗ ವೃತ್ತಿಜೀವನವನ್ನು ರೂಪಿಸಿದ ವೈಯಕ್ತಿಕ ಕಥೆಗಳು, ತತ್ವಗಳು ಮತ್ತು ಸವಾಲುಗಳನ್ನು ಹಂಚಿಕೊಂಡರು.”ನನ್ನ ತಂದೆ ಪುಣೆಯಲ್ಲಿ ಒಂದು ಸಣ್ಣ ಫ್ಲಾಟ್ ಖರೀದಿಸಿದರು ಮತ್ತು ನ್ಯಾಯಾಧೀಶರಾಗಿ ನನ್ನ ಕೊನೆಯ ದಿನದವರೆಗೂ ಅದನ್ನು ಇರಿಸಿಕೊಳ್ಳಲು ಹೇಳಿದ್ದರು” ಎಂದು ಅನುಭವ ಹಂಚಿಕೊಂಡರು.

ತಮ್ಮ ಅವಧಿಯಲ್ಲಿ ಆಗಾಗ್ಗೆ ಟ್ರೋಲ್‌ಗೆ ಒಳಗಾದ ಚಂದ್ರಚೂಡ್ ಅವರು, ‘ಟ್ರೋಲರ್ ಗಳು ಇನ್ನು ನಿರುದ್ಯೋಗಿಗಳಾಗುತ್ತಾರೆ’ ಎಂದು ಟಾಂಗ್ ನೀಡಲು ಮರೆಯಲಿಲ್ಲ.

“ನೀವು ನ್ಯಾಯಾಧೀಶರಾದಾಗ, ನಿಮ್ಮ ಭಯವನ್ನು ನೀವು ಮೊದಲು ಎದುರಿಸುತ್ತೀರಿ. ನಿಮ್ಮ ಸ್ವಂತ ಮಿತಿಗಳನ್ನು ಮತ್ತು ನಿಮಗೆ ಶಿಕ್ಷಣ ನೀಡುವಲ್ಲಿ ಬಾರ್‌ನ ಪ್ರಾಮುಖ್ಯತೆಯನ್ನು ನೀವು ಕಲಿಯುತ್ತೀರಿ’ ಎಂದು ಚಂದ್ರ ಚೂಡ್ ಹೇಳಿದರು.

ನಿಯೋಜಿತ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ಮೇಲೆ ವಿಶ್ವಾಸ ವ್ಯಕ್ತಪಡಿಸಿ “ಸಹೋದರ ಸಂಜೀವ್ ಅವರೊಂದಿಗೆ ಸುದೀರ್ಘ ಕಾಲ ಕೆಲಸ ಮಾಡಿದ ನಂತರ, ಈ ನ್ಯಾಯಾಲಯವು ಘನ, ಸ್ಥಿರ ಮತ್ತು ವಿದ್ವತ್ಪೂರ್ಣ ವ್ಯಕ್ತಿಯ ಕೈಯಲ್ಲಿದೆ ಎಂದು ನಾನು ಹೇಳಬಲ್ಲೆ’ ಎಂದರು.


Spread the love

About Laxminews 24x7

Check Also

ಹಾಲಿ ಶಿಕ್ಷಕರೂ TET ಬರೆಯಬೇಕೆಂಬ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ: ಮಧು ಬಂಗಾರಪ್ಪ

Spread the loveಶಿವಮೊಗ್ಗ: “ಶಿಕ್ಷಣದಲ್ಲಿ ಗುಣಾತ್ಮಕ ಬದಲಾವಣೆ ತರಲು ನಿವೃತ್ತಿ ಅಂಚಿನಲ್ಲಿರುವವರನ್ನು ಹೊರತುಪಡಿಸಿ, ಉಳಿದೆಲ್ಲ ಶಿಕ್ಷಕರು ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ