ವಿಜಯಪುರ: ಬಿಜೆಪಿ ಈಗ ವಿಜಯಪುರವನ್ನು ಹಿಂದುತ್ವದ ಪ್ರಯೋಗ ಶಾಲೆಯಾಗಿ ಉಪಯೋಗಿಸಲು ಹೊರಟಿದೆ. ನಾವೂ ಹಿಂದೂಗಳೇ. ಆದರೆ, ಬಿಜೆಪಿಯವರು ನಕಲಿ ಮನುವಾದವನ್ನು ಪ್ರತಿಪಾದಿಸುವ ನಕಲಿ ಹಿಂದೂಗಳು. ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್ ವಿಜಯಪುರಕ್ಕೆ ಭೇಟಿ ನೀಡಿದ್ದು ಕಾನೂನು ಬಾಹಿರ.
ಅದು ಹಕ್ಕುಚ್ಯುತಿ ಆಗಲಿದೆ ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ವಕ್ಫ್ ಬೋರ್ಡ್ ತನ್ನ ಆಸ್ತಿಗಳನ್ನು ಈ ಹಿಂದೆಯೇ ಇಂದೀಕರಣ ಮಾಡಿಕೊಳ್ಳದ ಪರಿಣಾಮ ಇನಾಂ ಹಾಗೂ ಭೂ ಸುಧಾರಣಾ ಕಾಯ್ದೆಯಡಿ ರೈತರಿಗೆ ಹಂಚಿಕೆಯಾದ ಜಮೀನನ್ನು ನಮ್ಮ ಸರ್ಕಾರ ಹಿಂಪಡೆಯುವುದಿಲ್ಲ. ಅಲ್ಲದೇ, ರೈತರು, ದೇವಸ್ಥಾನಗಳು, ಮಠಗಳು, ಹಿಂದೂಗಳು, ಜೈನರು, ಬೌದ್ಧರು, ಮುಸ್ಲಿಮರು ಸೇರಿದಂತೆ ಯಾರದ್ದೂ ಕೂಡ ಒಂದಿಂಚು ಜಮೀನು ವಕ್ಫ್ ಗೆ ಹೋಗಲು ಬಿಡುವುದಿಲ್ಲ ಎಂದರು.
Laxmi News 24×7