ಮುಂಬಯಿ: ರಾಜ್ಯದ ಮಹಿಳೆಯರಿಗೆ ಮಾಸಿಕ 3,000ರೂ. ಸಹಾಯ ಧನ, ರಾಜ್ಯ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ, 3 ಲಕ್ಷ ರೂ.ಗಳವರೆಗಿನ ರೈತರ ಸಾಲ ಮನ್ನಾ, ನಿರುದ್ಯೋಗಿ ಯುವಜನತೆಗೆ ಮಾಸಿಕ 4,000 ರೂ. ನೆರವು.
ಇವು ಮಹಾರಾಷ್ಟ್ರದಲ್ಲಿ ಮಹಾ ವಿಕಾಸ ಅಘಾಡಿ(ಎಂವಿಎ) ಘೋಷಿಸಿರುವ ಗ್ಯಾರಂಟಿಗಳು.
ಉದ್ಧವ್ ಶಿವಸೇನೆ, ಶರದ್ ಎನ್‌ಸಿಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಮೈತ್ರಿಕೂಟವಾದ ಎಂವಿಎ ಪ್ರಣಾಳಿಕೆ ಬಿಡುಗಡೆಗೊಳಿಸಿ, ಭರ್ಜರಿ ಘೋಷಣೆಗಳನ್ನು ಮಾಡಿದೆ.
ಮಹಾಯುತಿ ಸರಕಾರದ “ಲಡ್ಕಿ ಬಹೀನ್’ ಯೋಜನೆಯಡಿ ನೀಡುತ್ತಿರುವ 1500ರೂ.ಗಳನ್ನು ತಾನು ಅಧಿಕಾರಕ್ಕೆ ಬಂದರೆ 2,100 ರೂ.ಗಳಿಗೆ ಏರಿಸುವುದಾಗಿಯೂ ಎಂವಿಎ ಘೋಷಿಸಿದೆ.
Laxmi News 24×7