ಬೆಳಗಾವಿ – ರಷಿಯಾದ ಉಜ್ಬೇಕಿಸ್ಥಾನ ದಲ್ಲಿ ಮಂಗಳವಾರ ಜರುಗಿದ ಅಂತರ್ರಾಷ್ಟ್ರೀಯ ವಿಶ್ವ ಕಿರಿಯರ ವೀರಾಗ್ರಣಿ ಕರಾಟೆ ಸ್ಪರ್ಧೆ ಯಲ್ಲಿ ಕರ್ನಾಟಕ ಪ್ರತಿನಿಧಿಸಿ ಪಾಲ್ಗೊಂಡಿದ್ದ
ಗೋಕಾಕ ನಾಡಿನ ಅಕ್ಕತಂಗೇರಹಾಳ ಗ್ರಾಮದ ಪ್ರತಿಭಾವಂತ ಕರಾಟೆ ಪಟು, ೧೬ ರ ಬಾಲಕಿ, ವೈಷ್ಣವಿ ಶಿವನಗೌಡಾ ನಿರ್ವಾಣಿ ಸ್ವರ್ಣ ಪಡೆದು ವಿಶ್ವ ವೀರಾಗ್ರಣಿ ಪಟ್ಟ ತನ್ನ ಮುಡಿಗೇರಿಸಿಕೊಂಡಿದ್ದಾಳೆ.
ಇಂಟರ್ ನ್ಯಾಶನಲ್ ಜೀತ್ ಕುನೆದೊ ಫೆಡರೇಶನ್ ನಿಂದ ಮಂಗಳವಾರ ದಿನಾಂಕ ೦೫ ರಂದು ರಷಿಯಾದ ಉಜಕಿಸ್ಥಾನ ದಲ್ಲಿ ಆಯೋಜಿಸಿದ ,ಉಜ್ಬೇಕಿಸ್ಥಾನ ಐಎಂ ಜಿಸಿ -೨೦೨೪ ನ ವರ್ಲ್ಡ್ ಜೀತ್ ಕುನೆದೊ ಚ್ಯಾಂಪಿಯನ್ ಶಿಪ್ ಕರಾಟೆ ಸ್ಪರ್ಧೆ ಇದಾಗಿದೆ.
ಮೊದಲಿನಿನಿಂದಲೂ ಓದುವಿನೊಂದಿಗೆ ಆಟೋಟದಲ್ಲಿಯೂ ಆಸಕ್ತಿ ವಹಿಸಿದ್ದ ವೈಷ್ಣವಿ ಕರಾಟೆ ತನ್ನ ನೆಚ್ಚಿನ ಹವ್ಯಾಸವಾಗಿಸಿಕೊಂಡು, ಆ ಕ್ಷೇತ್ರದಲ್ಲಿ ಅಗಾಧ ಸಾಧನೆ ತನ್ನದಾಗಬೇಕೆಂಬುದು ಕನಸು ಕಂಡು ಆ ದಿಸೆಯಲ್ಲಿ ಹಗಲಿರುಳು ಶ್ರಮಿಸಿ ಈಗ ವಿಶ್ವ ಕರಾಟೆ ಕಿರಿಯರ ವೀರಾಗ್ರಣಿ ಸ್ಪರ್ಧೆಯಲ್ಲಿಯ ಈ ಅಗಾಧ ಸಾಧನೆಯು ಅತ್ಯಂತ ಖುಷಿ ತಂದಿದೆ ಎಂದು ಪತ್ರಿಕೆಗೆ ತನ್ನ ಸಂತಸ ಹಂಚಿಕೊಂಡಿದ್ದಾಳೆ. ವೈಷ್ಣವಿ ಈ ಮೊದಲು ರಾಜ್ಯ ,ಅಂತರಾಜ್ಯ ಮಟ್ಟದ ಅನೇಕ ಕಿರಿಯರ ಕರಾಟೆ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಸೈ ಎನ್ನಿಸಿಕೊಂಡಿದ್ದು, ಚೆನ್ನೈ, ದೆಹಲಿ, ಡೆಹರಾಡೂನ್, ಮೈಸೂರು,ಬೆಂಗಳೂರು ಸೇರಿದಂತೆ ದೇಶದ ಉದ್ದಗಲದ ಹತ್ತಾರು ಮೆಟ್ರೋಪಾಲಿಟನ್ ನಗರಗಳಲ್ಲಿಯ ಕರಾಟೆ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಅನೇಕ ಪ್ರಶಸ್ತಿ,ಪುರಸ್ಕಾರಗಳನ್ನು ಮುಡಿಗೇರಿಸಿಕೊಂಡಿದ್ದಾಳೆ.
ಇವಳ ಈ ವಿಶ್ವ ಮಾನ್ಯ ಸಾಧನೆಗೆ ಕುಂದರನಾಡಿನ ಕ್ರೀಡಾಭಿಮಾನಿಗಳಲ್ಲಿ ಅತ್ಯಂತ ಹರ್ಷ ವ್ಯಕ್ತವಾಗಿದ್ದು, ಇವಳು ಬೆಂಗಳೂರಿನ ಓಕಿನೋವಾ ಗೋಜುಕಾನ್ ಕರಾಟೆ ಶಾಲೆಯ ಎಸ್.ಸಿ.ದುರಾಯಿ ಅವರಲ್ಲಿ ವಿಶೇಷ ತರಬೇತಿ ಪಡೆದಿದ್ದು, ವೈಷ್ಣವಿ ಭಾರತೀಯ ಭೂ ಸೇನಾ ಪಡೆಯ ನಿವ್ರತ್ತ ಕ್ಯಾಪ್ಟನ್ ಶಿವನಗೌಡಾ ಮಲಗೌಡಾ ನಿರ್ವಾಣಿ ಅವರ ಏಕೈಕ ಸುಪುತ್ರಿಯಾಗಿದ್ದಾಳೆ.
Check Also
ಮನೆ-ಮನೆಗೆ ಭೇಟಿ ನೀಡಿ ಜಾನುವಾರುಗಳ ಮಾಹಿತಿ ಸಂಗ್ರಹಿಸಿ: ಬಾಲಚಂದ್ರ ಜಾರಕಿಹೊಳಿ
Spread the loveಗೋಕಾಕ- ಪ್ರತಿ ಮನೆ-ಮನೆಗೆ ಭೇಟಿ ನೀಡಿ ಜಾನುವಾರುಗಳ ನಿಖರವಾದ ಮಾಹಿತಿಯನ್ನು ಸಂಗ್ರಹಿಸಿ ಗಣತಿ ಕಾರ್ಯವನ್ನು ಯಶಸ್ವಿಗೊಳಿಸುವಂತೆ ಶಾಸಕ …