ಹಾಸನ : ಹಾಸನದ ಹಾಸನಾಂಬೆ ದೇವಿಯ ಸಾರ್ವಜನಿಕ ದರ್ಶನ ಇಂದು ಅಂತ್ಯವಾಗಲಿದೆ. ಈ ವೇಳೆ ಕಳೆದ 11 ದಿನಗಳಲ್ಲಿ ದಾಖಲೆ 20 ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರ್ಶನವನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ಹಾಸನಾಂಬೆ ದೇಗುಲಕ್ಕೆ 9 ಕೋಟಿಗೂ ಅಧಿಕ ಆದಾಯ ಬಂದಿದೆ.
ಹಾಸನಾಂಬೆ ಗರ್ಭಗುಡಿ ಬಾಗಿಲು ಮುಚ್ಚಲು, ಕ್ಷಣಗಣನೆ ಶುರುವಾಗಿದೆ.ಈಗಾಗಲೇ ಭಕ್ತರಿಂದ ದೇವಾಲಯ ಆವರಣ ತುಂಬಿ ತುಳುಕುತ್ತಿದೆ.ಬೆಳಿಗ್ಗೆ 11.50ರ ನಂತರ ಗರ್ಭಗುಡಿ ಬಾಗಿಲು ಬಂದ್ ಆಗಲಿದೆ.
ವಿಶ್ವರೂಪದ ದರ್ಶನ ಬಳಿಕ ಗರ್ಭಗುಡಿಯ ಬಾಗಿಲು ಬಂದ್ ಮಾಡಲಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ ಎನ್ ರಾಜಣ್ಣ, ಶಾಸಕ ಸ್ವರೂಪ್ ಡಿಸಿ ಸತ್ಯಭಾಮ, ಎಸ್ ಪಿ ಮೊಹಮ್ಮದ್ ಸುಜಿತ ಹಾಗೂ ಎಸಿ ಮಾರುತಿ ಸಮ್ಮುಖದಲ್ಲಿ ಗರ್ಭಗುಡಿ ಬಾಗಿಲು ಮುಚ್ಚಲಾಗುತ್ತದೆ.
ಅಕ್ಟೋಬರ್ 24ರಂದು ಹಾಸನಾಂಬೆ ದೇವಿಯ ಗರ್ಭಗುಡಿ ಬಾಗಿಲು, ತೆರೆದಿತ್ತು. ಬಳಿಕ ಸತತ 11 ದಿನಗಳ ಕಾಲ ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅನುಕೂಲ ಮಾಡಿಕೊಡಲಾಗಿತ್ತು. ಇದೀಗ ಇಂದು ಸಾರ್ವಜನಿಕ ದರ್ಶನಕ್ಕೆ ತೆರೆ ಬೀಳಲಿದ್ದು ಮಧ್ಯಾಹ್ನದ 11.50ಕ್ಕೆ ದೇಗುಲದ ಬಾಗಿಲು ಬಂದ್ ಮಾಡಲಾಗುತ್ತದೆ.