ಸತ್ತಿಗೇರಿ/ ಮುಗಳಿಹಾಳ: ಕಳೆದ ಒಂದು ವಾರದಿಂದ ಸುರಿದ ಮಳೆಯಿಂದ ಯರಗಟ್ಟಿ ತಾಲ್ಲೂಕಿನ ಕೊಡ್ಲಿವಾಡ, ಅಕ್ಕಿಸಾಗರ ಗುಡಮಕೇರಿ, ಇಟ್ನಾಳ ಗ್ರಾಮಗಳಲ್ಲಿ ಬೆಳೆದ ಬೆಳೆಗಳು ಹಾನಿಯಾಗಿವೆ. ಹಾನಿ ಪರಿಶೀಲನೆಗೆ ಈಗಾಗಲೇ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳ ತಂಡ ಸಮೀಕ್ಷೆ ಶುರು ಮಾಡಿದೆ.
ಯರಗಟ್ಟಿ ತಾಲ್ಲೂಕಿನ ಹತ್ತಿ, ಶೇಂಗಾ, ಈರುಳ್ಳಿ, ಗೋವಿನಜೋಳ ಮುಂತಾದ ಹಾನಿಗೊಳಗಾದ ಬೆಳೆಗಳನ್ನು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಶಿವಪ್ರಕಾಶ್ ಪಾಟೀಲ ಮತ್ತು ಗ್ರಾಮ ಲೆಕ್ಕಾಧಿಕಾರಿಗಳು, ಎ.ಬಿ. ಹುಣಶ್ಯಾಳ, ಕೃಷಿ ಇಲಾಖೆ ಅಧಿಕಾರಿ ಎಸ್.ಎಲ್. ದೇಸಾಯಿ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ರೈತ ಸಂಘದ ಮುಖಂಡ ಸಿಂದೂರ್ ತೆಗ್ಗಿ ಮಾತನಾಡಿ, ‘ರೈತರಿಗೆ ಈ ಬಾರಿ ಸಾಕಷ್ಟು ಬೆಳೆ ಹಾನಿಯಾಗಿದೆ. ಸಾಲ ಮಾಡಿ ರೈತ ಗೋವಿನ ಜೋಳ, ಹತ್ತಿ ಮುಂತಾದ ಹಾನಿಗೊಳಗಾದ ಬೆಳೆಗಳಿಗೆ ಪರಿಹಾರ ನೀಡಬೇಕು’ ಎಂದು ಹೇಳಿದರು.
‘ಮಳೆಯಿಂದ ನೀರಾವರಿ, ಒಣಭೂಮಿಯ ಬೆಳೆಗಳೂ ಹಾಳಾಗಿವೆ. ಪರಿಹಾರ ಮತ್ತು ಬೆಳೆವಿಮೆ ನೀಡಬೇಕು. ಬೆಳೆ ಪರಿಹಾರ ನೀಡುವಲ್ಲಿ ಯಾವುದೇ ತಾರತಮ್ಯ ಮಾಡದೇ ಆದಷ್ಟು ಬೇಗನೆ ಪರಿಹಾರ ಒದಗಿಸಬೇಕು’ ಎಂದು ಅಗ್ರಹಿಸಿದರು.
Laxmi News 24×7