ಚಿಂತಾಮಣಿ: ‘ಮುರುಗಮಲ್ಲ ಮತ್ತು ನಿಮ್ಮಕಾಯಲಹಳ್ಳಿ ದರ್ಗಾ ಅಭಿವೃದ್ಧಿಗೆ ನೀಲನಕ್ಷೆ ತಯಾರಿಸಿದ್ದು, ಅಕ್ಟೋಬರ್ 28 ರಂದು ವಕ್ಫ್ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಖಾನ್ ಹಾಗೂ ಹಣಕಾಸಿನ ಅಧಿಕಾರಿಗಳ ಜತೆಯಲ್ಲಿ ಸಭೆ ಆಯೋಜಿಸಲಾಗಿದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.
ನಿಮ್ಮಕಾಯಲಹಳ್ಳಿಯಲ್ಲಿ ನಡೆಯುತ್ತಿರು ಉರುಸ್ ಕಾರ್ಯಕ್ರಮಕ್ಕೆ ಶನಿವಾರ ರಾತ್ರಿ ಭೇಟಿ ನೀಡಿ ಮಾತನಾಡಿದರು.
‘ದರ್ಗಾಗೆ ಬರುವ ಭಕ್ತರಿಗೆ ವಸತಿ, ಶೌಚಾಲಯ, ಶುದ್ಧ ಕುಡಿಯುವ ನೀರು, ಸ್ವಚ್ಛತೆ, ಸಾರಿಗೆ ಮತ್ತಿತರ ಸೌಲಭ್ಯಗಳು ಅಗತ್ಯವಾಗಿವೆ. ಮಕ್ಕಾ-ಮದೀನಾ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಪ್ರಯತ್ನ ನಡೆಯುತ್ತಿದೆ’ ಎಂದು ಭರವಸೆ ನೀಡಿದರು.
ಉರುಸ್‌ಗೆ ತೆರೆ: ಮುರುಗಮಲ್ಲ ಹೋಬಳಿಯ ನಿಮ್ಮಕಾಯಲಹಳ್ಳಿ ಗ್ರಾಮದಲ್ಲಿ ಎರಡು ದಿನ ನಡೆದ ಹಜರತ್ ಸೈಯದ್ ಜಲಾಲ್ ಖಾಕಿ ಷಾ ಮೌಲಾ ಬಾಬಾ ಅವರ ವಾರ್ಷಿಕ ಉರುಸ್ ಶನಿವಾರ ರಾತ್ರಿ ತೆರೆ ಕಂಡಿತು.
ಶನಿವಾರ ರಾತ್ರಿ ದರ್ಗಾ ಸಮಿತಿ ಮುಜಾವರ್‌ಗಳು ನಂದಿಗಾನಹಳ್ಳಿ ಸಮೀಪವಿರುವ ಮೌಲಾ ಬಾಗ್ ದರ್ಗಾದಿಂದ ಗಂಧೋತ್ಸವದ ಸಂಧಿಲ್ ಮೆರವಣಿಗೆ ಆರಂಭವಾಯಿತು. ತಡರಾತ್ರಿ ಮೆರವಣಿಗೆ ದರ್ಗಾ ಬಳಿ ಸೇರಿತು. ದರ್ಗಾದಲ್ಲಿ ಗಂಧವನ್ನು ಸಮರ್ಪಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ರಾತ್ರಿ ಕವ್ವಾಲಿ ನಡೆಯಿತು.
ದರ್ಗಾ ಮುಜಾವರ್ ಎಸ್.ಮೌಲಾ ಆಲಿ, ಪ್ಯಾರೆಜಾನ್, ಮಹಬೂಬ್ ಸಾಬ್, ಮುಬಾರಕ್, ಇಲಿಯಾಜ್, ರಹಮತ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಜಿ ಅನ್ಸರ್ ಖಾನ್, ಶ್ರೀರಾಮರೆಡ್ಡಿ, ಅಮೀರ್ ಜಾನ್, ಮೌಲಾಜಿರಾವ್, ಮಿಲ್ಟ್ರಿ ಶಿವಾಜಿರಾವ್, ಕಾರ್ತಿಕ್ ರಾವ್, ವೆಂಕಟೇಶ್, ಹರ್ಷವರ್ಧನ್, ಚಿಕ್ಕ ಮೌಲಾಜಿ, ರವೀಂದ್ರ, ಸೋಮಶೇಖರ ರೆಡ್ಡಿ, ಅಸ್ಲಾಂ, ಪ್ಯಾರೆಜಾನ್, ಬೀಡಾಶ್ರೀನಿವಾಸ್, ಶಬ್ಬೀರ್ ಪಾಷಾ, ತನ್ವೀರ್ ಪಾಷಾ ಭಾಗವಹಿಸಿದ್ದರು.
Laxmi News 24×7