Breaking News

ನಾನೂ ಸೀನಿಯರ್‌ ಲೀಡರ್‌, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ

Spread the love

ಸಂಸತ್ತಿಗೆ ಕರ್ನಾಟಕ ಕಾಂಗ್ರೆಸ್‌ನಿಂದ ಗೆದ್ದ ಹಿರಿಯರ ಪೈಕಿ ಜಾಫ‌ರ್‌ ಶರೀಫ್, ಶಂಕರಾನಂದ ಅವರನ್ನು ಬಿಟ್ಟರೆ ಬಿಟ್ಟರೆ ನಾನೇ ಅತೀ ಹೆಚ್ಚು ಬಾರಿ ಗೆದ್ದವನು. ನನಗೆ ಹಿರಿತನ ಇದ್ದೇ ಇದೆ. ರಾಜ್ಯದ ಒಟ್ಟಾರೆ ಜನಸಂಖ್ಯೆಯ ಶೇ.25ರಷ್ಟು ಎಸ್‌ಸಿ, ಎಸ್‌ಟಿಗಳಿದ್ದರೂ ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಯಾರಿಗೂ ಈವರೆಗೆ “ದಲಿತ ಸಿಎಂ’ ಆಗುವ ಅವಕಾಶ ಸಿಕ್ಕಿಲ್ಲ.

ಸುಮಾರು 25 ವರ್ಷಗಳಿಂದ ಈ ಕೂಗು ಇದೆ.

ಇವಿಷ್ಟೂ ರಾಜ್ಯ ಕಾಂಗ್ರೆಸ್‌ನ ಹಿರಿಯ ಮುಖಂಡ, ಎಡಗೈ ಸಮುದಾಯದ ಪ್ರಭಾವಿ ನಾಯಕರೂ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರೂ ಆಗಿರುವ ಕೆ.ಎಚ್‌. ಮುನಿಯಪ್ಪ ಅವರ ಮನದಾಳದ ಮಾತುಗಳು.

ರಾಜ್ಯದಲ್ಲಿ ಮುಡಾ ಹಗರಣದ ಅನಂತರ “ದಲಿತ ಮುಖ್ಯಮಂತ್ರಿ’ ಕೂಗು ಮತ್ತೆ ಭುಗಿಲೆದ್ದಿದ್ದು, ಸಚಿವರಾದ ಡಾ|ಎಚ್‌.ಸಿ. ಮಹದೇವಪ್ಪ, ಡಾ| ಜಿ. ಪರಮೇಶ್ವರ್‌, ಸತೀಶ್‌ ಜಾರಕಿಹೊಳಿ ಅವರು ಸರಣಿ ಸಭೆಗಳನ್ನು ನಡೆಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಭೇಟಿ ಮಾಡುತ್ತಿದ್ದರೆ, ಇತ್ತ ಉದಯವಾಣಿ ಪತ್ರಿಕೆಯ “ನೇರಾನೇರ’ ಪ್ರಶ್ನೆಗಳಿಗೆ ಉತ್ತರ ನೀಡಿರುವ ಹಿರಿಯ ಸಚಿವ ಕೆ.ಎಚ್‌. ಮುನಿಯಪ್ಪ ಕೂಡ ಪರೋಕ್ಷವಾಗಿ ಈ ಬಗ್ಗೆ ಒಲವು ತೋರಿದ್ದಾರೆ. 


Spread the love

About Laxminews 24x7

Check Also

ನಾಯಕತ್ವ ಬದಲಾವಣೆ ವಿಚಾರವಾಗಿ ರಾಹುಲ್​ ಗಾಂಧಿ​ ತೀರ್ಮಾನಕ್ಕೆ ನಾನು ಬದ್ಧ: ಸಿಎಂ

Spread the loveಮೈಸೂರು: “ನಾಯಕತ್ವ ಬದಲಾವಣೆ ವಿಚಾರವಾಗಿ ರಾಹುಲ್​ ಗಾಂಧಿ ಮತ್ತು ಹೈಕಮಾಂಡ್​ ತೀರ್ಮಾನ ಮಾಡಬೇಕು. ಅವರು ಏನು ತೀರ್ಮಾನ ಮಾಡುತ್ತಾರೋ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ