ಗದಗ: ಪರವಾನಗಿ ಹೊಂದಿದ ಭೂ ಮಾಪಕರ ಪರವಾನಗಿಯನ್ನು ನವೀಕರಿಸಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಭೂ ದಾಖಲೆ ಸಹಾಯಕ ನಿರ್ದೇಶಕ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ರೋಣ ತಾಲೂಕು ಭೂಮಾಪನಾ ಇಲಾಖೆಯ ಸಹಾಯಕ ನಿರ್ದೇಶಕ (ಎಡಿಎಲ್‌ಆರ್)ವಿ. ಗಿರೀಶ್ ರವಿವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಗಜೇಂದ್ರಗಡ ತಾಲೂಕಿನ ಅರುಣಕುಮಾರ್ ನೀರಲಕೇರಿಎಂಬುವರು ಸರ್ವೇಯರ್ ಪರವಾನಗಿ ನವೀಕರಿಸಿಕೊಡುವಂತೆ ವಿ. ಗಿರೀಶ್ ಬಳಿ ಹೋದಾಗ, ಪರವಾನಗಿ ನವೀಕರಣಕ್ಕೆ 25 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಈ ಸಂಬಂಧ ಅರುಣಕುಮಾರ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಎಡಿಎಲ್‌ಆರ್ ವಿ. ಗಿರೀಶ್ ಅವರು ರವಿವಾರ(ಅ6) ಸಂಜೆ ಗದಗ ನಗರದ ಸಾಯಿಬಾಬ ಗುಡಿಯ ಬಳಿ 25 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಡಿವೈಎಸ್‌ಪಿ ವಿಜಯ್ ಬಿರಾದಾರ್ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದೆ.