ಬೈಲಹೊಂಗಲ: ‘ಕಿತ್ತೂರು ರಾಣಿ ಚನ್ನಮ್ಮ ಸಹಕಾರಿಯ ಗ್ರಾಹಕರು, ಠೇವಣಿದಾರರು ಆತಂಕಕ್ಕೆ ಒಳಗಾಗಬಾರದು. ಆರು ತಿಂಗಳು ಕೊಟ್ಟರೆ ರಾಜ್ಯ ಸಂಯುಕ್ತ ಸಹಕಾರಿ ಮಹಾಮಂಡಳದಿಂದ ಪ್ರಾಮಾಣಿಕವಾಗಿ ಕೆಲಸ ಮಾಡಲಾಗುವುದು’ ಎಂದು ರಾಜ್ಯ ಸಹಕಾರಿ ಮಹಾಮಂಡಳದ ಉಪಾಧ್ಯಕ್ಷ ಜಗದೀಶ ಕವಟಗಿಮಠ ಹೇಳಿದರು.
ಪಟ್ಟಣದ ಹಳೇ ಪ್ರೇರಣಾ ಶಾಲೆ ಆವರಣದಲ್ಲಿ ಶನಿವಾರ ನಡೆದ ಸಹಕಾರಿಯ ಠೇವಣಿದಾರರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ‘ಪ್ರಭಾಕರ ಕೋರೆ ಅವರು ಚನ್ನಮ್ಮ ಸಹಕಾರಿಗೆ ಬೆನ್ನೆಲುಬು ಆಗಿ ನಿಂತಿದ್ದಾರೆ’ ಎಂದರು.
‘ಚನ್ನಮ್ಮ ಸಹಕಾರಿಯು ಪಟ್ಟಣದ ಖಾಸಗಿ ಶಾಲೆಯೊಂದಕ್ಕೆ ₹80 ಕೋಟಿ ಸೇರಿದಂತೆ ಅನೇಕ ಕಡೆ ಸಾಲ ನೀಡಿದೆ. ಈ ಸಾಲಗಳನ್ನು ಸಂಸ್ಥೆ ವಸೂಲಿ ಮಾಡಲಿದೆ. ಠೇವಣಿ ಅವಧಿ ಮುಗಿದ ಗ್ರಾಹಕರ ಹಣವನ್ನು ಬಡ್ಡಿಸಹಿತ ಮರಳಿಸಲಾಗುವುದು. ಜನರು ಅಪಪ್ರಚಾರ ಮಾಡುವುದನ್ನು ನಿಲ್ಲಿಸಬೇಕು’ ಎಂದರು.
ಚನ್ನಮ್ಮ ಸಹಕಾರಿಯ ಅಧ್ಯಕ್ಷ ಡಾ.ವಿ.ಎಸ್.ಸಾಧುನವರ ಮಾತನಾಡಿ, ಕೆಲವರು ಸಹಕಾರಿಯ ಹೆಸರನ್ನು ಕೆಡಿಸುವ ಉದ್ದೇದಿಂದ ಈ ರೀತಿ ಮಾಡಿದ್ದಾರೆ. ಎಲ್ಲ ಗ್ರಾಹಕರ ಹಣವನ್ನು ಪ್ರಾಮಾಣಿಕವಾಗಿ ಮರಳಿಸುವುದಾಗಿ ತಿಳಿಸಿದರು.
Laxmi News 24×7